1.. 2.. 3.. ಬಿಗ್‌ಬಾಸ್ ಮನೆಗೆ ಈ ಬಾರಿ ಜನ ಸಾಮಾನ್ಯರಿಗೆ ಭರ್ಜರಿ ಅವಕಾಶ? Bigg Boss
ಬಿಗ್‌ಬಾಸ್ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂಬ ಹೆಮ್ಮೆಯನ್ನ ಪಡೆದಿದ್ದು, ಕನ್ನಡದಲ್ಲಿ ಅತಿಹೆಚ್ಚು ಟಿಆರ್‌ಪಿ ಮೂಲಕ ಕೂಡ ಭಾರಿ ದೊಡ್ಡ ಸೌಂಡ್ ಮಾಡಿದೆ. ಬಿಗ್‌ಬಾಸ್ ಕನ್ನಡ ಶೋಗೆ ನಟ ಕಿಚ್ಚ ಸುದೀಪ್ ಅವರು ಇನ್ನಷ್ಟು ಮೆರಗು ಹೆಚ್ಚಿಸಿ, ಮೊದಲಿನಿಂದ ಕೂಡ ಅತ್ಯುತ್ತಮ ರೀತಿಯಲ್ಲಿ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಬಿಗ್‌ಬಾಸ್ ಕನ್ನಡದಲ್ಲಿ ಸಾಮಾನ್ಯ ಜನರಿಗೂ ಹೆಚ್ಚಿನ ಅವಕಾಶ ನೀಡಬೇಕು... ಅನ್ನೋ ಒತ್ತಾಯ ಮೊದಲಿನಿಂದ ಕೂಡ ಕೇಳಿ ಬರುತ್ತಲೇ ಇತ್ತು. ಹೀಗಿದ್ದಾಗಲೇ, 1.. 2.. 3.. ಬಿಗ್‌ಬಾಸ್ ಮನೆಗೆ ಈ ಬಾರಿ ಜನ ಸಾಮಾನ್ಯರಿಗೆ ಭರ್ಜರಿ ಅವಕಾಶ?
ಹೌದು, ಕಿಚ್ಚ ಸುದೀಪ್ ಅಂದ್ರೆ ಬಿಗ್‌ಬಾಸ್ & ಬಿಗ್‌ಬಾಸ್‌ಗೆ ಮತ್ತೊಂದು ಬ್ರಾಂಡ್ ಅಂದ್ರೆ ಅದು ಕಿಚ್ಚ ಸುದೀಪ್ ಅವರು... ಅಂತಾರೆ ಕೋಟ್ಯಂತರ ಅಭಿಮಾನಿಗಳು. ಆದರೆ ದಿಢೀರ್ ಕಿಚ್ಚ ಸುದೀಪ್ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ & ಬಿಗ್‌ಬಾಸ್ ಸೀಸನ್-11 ಮುಗಿದ ನಂತರ ನಟ ಕಿಚ್ಚನ ಪಂಚಾಯಿತಿ ಇರೋದಿಲ್ಲ. ಅಂದ್ರೆ ಕಿಚ್ಚ ಸುದೀಪ್ ತಮ್ಮ ಬಿಗ್‌ಬಾಸ್ ಜರ್ನಿ ಮುಗಿಸಿ ಹೋಗುತ್ತಿದ್ದಾರೆ, ಅಂತೆಲ್ಲಾ ಸುದ್ದಿ ಹಬ್ಬಿತ್ತು. ಆದರೆ ಈಗ ಮತ್ತೆ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆಗೆ ಭರ್ಜರಿಯಾಗಿ ವಾಪಸ್ ಬಂದಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಭರ್ಜರಿ ಸುದ್ದಿ ಕೂಡ ಸಿಕ್ಕಿದೆ!

1.. 2.. 3.. ಬಿಗ್‌ಬಾಸ್ ಮನೆಗೆ...
ಬಿಗ್‌ಬಾಸ್ ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯಾದಲ್ಲೇ ಅತಿದೊಡ್ಡ ರಿಯಾಲಿಟಿ ಶೋಗಳ ಪೈಕಿ ಒಂದು. ಹಾಗೇ, ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಬಿಗ್‌ಬಾಸ್ ಕನ್ನಡ ನೋಡುತ್ತಾರೆ ಅಭಿಮಾನಿಗಳು. ಹೀಗೆ, ಬಿಗ್‌ಬಾಸ್ ಕನ್ನಡವು ಜಗತ್ತಿನಾದ್ಯಂತ ಕನ್ನಡದ ಕಂಪು ಹರಡುತ್ತಿದೆ. ಆದರೆ ದಿಢೀರ್ ಅಂತಾ ಕಿಚ್ಚ ಸುದೀಪ್ ಅವರು ನಿವೃತ್ತಿ ಪಡೆದು ಹೋಗುತ್ತಿರುವ ಹಿನ್ನೆಲೆ ಮುಂದೆ ಯಾರು ಆಂಕರ್ ಆಗ್ತಾರೆ? ಅನ್ನೋ ಚಿಂತೆ ಶುರು ಆಗಿತ್ತು, ಕೊನೆಗೆ ಕಿಚ್ಚಾ ಸುದೀಪ್ ಅವರೇ ವಾಪಸ್ ಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಖುಷಿಯಾಗಿದ್ದರು. ಹೀಗಿದ್ದಾಗಲೇ, 1.. 2.. 3.. ಬಿಗ್‌ಬಾಸ್ ಮನೆಗೆ ಈ ಬಾರಿ ಜನ ಸಾಮಾನ್ಯರಿಗೆ ಭರ್ಜರಿ ಅವಕಾಶ?
ಜನ ಸಾಮಾನ್ಯರಿಗೆ ಭರ್ಜರಿ ಅವಕಾಶ?
ಯೆಸ್, ಕನ್ನಡಿಗರು ಪ್ರೀತಿಯಿಂದ ಬೆಳೆಸಿರುವ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಇನ್ನೇನು ಮತ್ತೆ ಭರ್ಜರಿಯಾಗಿ ಶುರು ಆಗಲಿದೆ. ಇಂತಹ ಶುಭ ಸಮಯದಲ್ಲೇ, ಜನ ಸಾಮಾನ್ಯರಿಗೂ ಭರ್ಜರಿ ಅವಕಾಶ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋಗೆ ಒಂದು ಬಾರಿ ಹೋಗಿ ಬಂದರೆ ಸಾಕು ಆ ನಂತರ ಸಾಲು ಸಾಲು ಅವಕಾಶಗಳು ನಮ್ಮನ್ನು ಹುಡುಕೊಂಡು ಬರುತ್ತವೆ ಅನ್ನೋ ನಂಬಿಕೆ ಇದೆ. ಅದರಲ್ಲೂ ಎಷ್ಟೋ ಜನರ ಜೀವನ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋಗೆ ಹೋಗಿ ಬಂದ ನಂತರ ಸೆಟಲ್ ಆಗಿದೆ. ಹೀಗಿದ್ದಾಗಲೇ ಈ ಬಾರಿ ಒಟ್ಟು 3 ಜನ ಸಾಮಾನ್ಯರಿಗೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅವಕಾಶ ನೀಡಲು ಪ್ಲಾನ್ ಆಗಿದೆಯಾ? ಎಂಬ ಚರ್ಚೆ ಶುರುವಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು, ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋಗೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾನ್ಯ ಜನರ ಎಂಟ್ರಿ ಆಗಲಿದೆ ಎನ್ನಲಾಗುತ್ತಿದೆ. ಅದರಲ್ಲೂ, 3 ಜನ ಸಾಮಾನ್ಯರಿಗೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅವಕಾಶ ನೀಡಿ, ಹೊಸ ಪ್ರಯೋಗ ಮಾಡಲು ಕೂಡ ಚಿಂತನೆ ನಡೆದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಗ್‌ಬಾಸ್ ಕನ್ನಡ ಆಯೋಜಕರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ, ಅಥವಾ ತಿಳಿಸಿಲ್ಲ. ಹೀಗಾಗಿ ಈ ಸುದ್ದಿ ಇನ್ನೂ ಗಾಳಿ ಸುದ್ದಿಯಾಗೇ ಉಳಿದಿದ್ದು, ಈ ಬಗ್ಗೆ ಸ್ಪಷ್ಟ ಉತ್ತರ ತಿಳಿಯಲು ಇನ್ನಷ್ಟು ದಿನ ಕಾದು ನೋಡಬೇಕಿದೆ...












Click it and Unblock the Notifications