ಬಿಗ್‌ಬಾಸ್ ಬಳಿಕ ಜಗದೀಶ್‌ಗೆ ಮತ್ತೊಂದು ದೊಡ್ಡ ಆಫರ್!
ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋನ ಈ ಸೀಸನ್‌ನಲ್ಲಿ ಕಡಿಮೆ ಟೈಮಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ ಜಗದೀಶ್. ದೊಡ್ಮನೆಯಲ್ಲಿ ಕೆಲವೇ ದಿನಗಳಿದ್ದರೂ ಅಲ್ಲಿ ಅವರು ಧೂಳೆಬ್ಬಿಸಿದ್ದರು. ಗಲಾಟೆ ಮಾಡಿಕೊಂಡ ಕಾರಣ ಮನೆಯಿಂದ ಹೊರಗೂ ಬಂದರು. ಇತ್ತೀಚೆಗಷ್ಟೇ ಜಗದೀಶ್ ಅವರು ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದರು. ಆದರೆ, ಇಷ್ಟರೊಳಗೆ ಜಗದೀಶ್ ಅವರು ಮತ್ತೊಂದು ದೊಡ್ಡ ಆಫರ್ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲೆ ಹೆಚ್ಚು ಸದ್ದು ಮಾಡಿ ಜಗದೀಶ್ ಬಿಗ್‌ಬಾಸ್ ಮನೆ ಸೇರಿದ್ದರು. ಅಲ್ಲಿಂದ ಹೊರಬಂದ ನಂತರವೂ ಅವರ ಕ್ರೇಜ್ ಕಡಿಮೆಯೇನಿಲ್ಲ. ಇದೀಗ ಮತ್ತೊಂದು ರಿಯಾಲಿಟಿ ಶೋನಲ್ಲಿ ಜಗದೀಶ್ ಅವರು ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಬಿಗ್‌ಬಾಸ್ ಬಳಿಕ ಅವರಿಗೆ ಹಲವು ಅವಕಾಶಗಳು ಅರಸಿ ಬರುತ್ತಿವೆ ಎಂದು ಹೇಳಲಾಗುತ್ತಿದೆ.

ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವ ಜಗದೀಶ್ ಅವರಿಗೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತಿದ್ದು, ಸದ್ಯ ಜೀ ಕನ್ನಡ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಜಗದೀಶ್ ಎಂಟ್ರಿ ನೀಡಿದ್ದಾರೆ. ಇಲ್ಲಿವರೆಗೆ ಡೈಲಾಗ್‌ಗಳಿಂದ ಫೇಮಸ್ ಆಗಿದ್ದ ಜಗದೀಶ್ ಅವರು ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾರೆ.
ಕಲರ್‌ಫುಲ್ ವೇದಿಕೆಯಲ್ಲಿ ಕಾಣಿಸಿಕೊಂಡು ಜಗದೀಶ್ ಎಲ್ಲರಿಗೂ ಮೋಡಿ ಮಾಡಿದ್ದಾರೆ. ಈ ರಿಯಾಲಿಟಿ ಶೋನ ತೀರ್ಪುಗಾರರಾದ ನಟ ಶಿವರಾಜ್ಕುಮಾರ್, ವಿಜಯ್ ರಾಘವೇಂದ್ರ ಹಾಗೂ ರಕ್ಷಿತಾ ಪ್ರೇಮ್ ಅವರು ಜಗದೀಶ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಇನ್ನು ಜಗದೀಶ್ ಅವರು ನಟ ದರ್ಶನ್ ಅವರ ಜಗ್ಗುದಾದಾ ಸಿನಿಮಾದ ಜಗ್ಗು ಕಮಿಂಗ್... ಹಾಡಿನ ಮೂಲಕ ಈ ವೇದಿಕೆಗೆ ಎಂಟ್ರಿ ನೀಡಿದ್ದಾರೆ. ದರ್ಶನ್ ಅವರ ಡೈಲಾಗ್‌ಗಳನ್ನು ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಜಗದೀಶ್ ಅವರನ್ನು ವೆಲ್‌ಕಮ್ ಮಾಡಿ, ನಿಮ್ಮ ಡ್ಯಾನ್ಸ್ ಚೆನ್ನಾಗಿದೆ ಎಂದು ಹೊಗಳಿದ್ದಾರೆ.

ಇದಕ್ಕೆ ನಾನು ನಿಮ್ಮಂತವರ ಮುಂದೆ ನಿಂತಿರೋದೆ ದೊಡ್ಡ ಭಾಗ್ಯ ಎಂದು ಜಗದೀಶ್ ಶಿವಣ್ಣ ಅವರಿಗೆ ಹೇಳಿದ್ದಾರೆ. ಇನ್ನು ನಟಿ ರಕ್ಷಿತಾ ಪ್ರೇಮ್ ಕೂಡ ಜಗದೀಶ್ ಅವರಿಗೆ ವೆಲ್‌ಕಮ್ ಮಾಡಿದಾಗ, ನಾನು ರಕ್ಷಿತಾ ಅವರನ್ನು ನೋಡಿ ಕಳೆದು ಹೋದೆ ಎಂದಿದ್ದಾರೆ. ನಿಮ್ಮ ನೋಡ್ತಾ ನಾನು ಇವತ್ತು ಶಾರುಖ್ ಖಾನ್ ಆಗೋದೆ ಎಂದು ಜಗದೀಶ್ ಹೇಳಿದ್ದಾರೆ. ಇದಕ್ಕೆ ರಕ್ಷಿತಾ ಅವರು ನೀವು ಫಾರ್ಟಿ (40) ಆದ್ರೂ ನಾಟ್ಟಿ ಸರ್...ಎಂದು ಜಗದೀಶ್ ಅವರಿಗೆ ಹೇಳಿದ್ದಾರೆ.
ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಈ ವಾರಾಂತ್ಯದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಜಗದೀಶ್ ಅವರು ಮತ್ತೊಮ್ಮೆ ಬಿಗ್‌ಬಾಸ್‌ಗೆ ಹೋಗಬೇಕು ಎಂದು ಹಲವರು ಅಭಿಪ್ರಾಯವ್ಯಕ್ತಪಡಿಸಿದ್ದರು. ಆದರೆ, ಈಗ ಅವರು ಮತ್ತೊಂದು ದೊಡ್ಡ ವೇದಿಕೆಯಲ್ಲಿ ಡಿಫರೆಂಟಾಗಿ ಕಾಣಿಸಿಕೊಳ್ಳಲಿದ್ದಾರೆ. ಜಗ್ಗು ಅವರ ಡ್ಯಾನ್ಸ್ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.












Click it and Unblock the Notifications