Kannada Bigg Boss: ಎಲಿಮಿನೇಟ್‌ ಬಳಿಕ ಸುದೀಪ್‌ಗೆ ದೊಡ್ಡ ಬೇಡಿಕೆ ಇಟ್ಟ ಐಶ್ವರ್ಯಾ ಸಿಂಧೋಗಿ

ಕನ್ನಡ ಬಿಗ್‌ಬಾಸ್‌ ಮನೆಯಿಂದ ಈ ಬಾರಿ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್‌ ಆಗಿದ್ದಾರೆ. ಹೊಸ ವರ್ಷದ ಹೊತ್ತಿನಲ್ಲೇ ಐಶ್ವರ್ಯಾ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಬಿಗ್‌ಬಾಸ್‌ ವಿದಾಯ ಹೇಳುವಾಗ ಹೋಗಿ ಬಾ ಮಗಳೇ ಎಂದು ಹೇಳಿದ್ದು, ಈ ವೇಳೆ ಐಶ್ವರ್ಯಾ ಅವರು ಭಾವುಕರಾಗಿದ್ದಾರೆ.

ಇನ್ನು ಐಶ್ವರ್ಯಾ ಅವರು ತಂದೆ-ತಾಯಿ ಇಲ್ಲದ ಹುಡುಗಿ ಎನ್ನುವುದು ಬಿಗ್‌ಬಾಸ್‌ಗೆ ಕೂಡ ಗೊತ್ತಿದೆ. ಈ ಹಿನ್ನೆಲೆ ಎಲಿಮಿನೇಟ್‌ ಆದಾಗ ಅವರನ್ನು ಅಕ್ಕರೆಯಿಂದ ಬೀಳ್ಕೊಟ್ಟಿದೆ. ಹೋಗಿ ಬಾ ಮಗಳೇ..ಎಂದು ಐಶ್ವರ್ಯಾ ಅವರಿಗೆ ಬಿಗ್‌ಬಾಸ್‌ ಹೇಳಿದಾಗ ತುಂಬಾ ಎಮೋಷನಲ್ ಕೂಡ ಆಗಿದ್ದಾರೆ.

Bigg Boss Kannada Contestant Aishwarya Sindhogi Expresses Desire To Act With Sudeep

ಬಿಗ್‌ಬಾಸ್‌ನಿಂದ ಹೊರಬರುವುದಕ್ಕೂ ಮುನ್ನ ಒಂದು ಪತ್ರ ನೀಡಲಾಗಿತ್ತು. ಪತ್ರದಲ್ಲಿ "ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್​ಬಾಸ್​ ಮನೆಯ ಸ್ಪರ್ಧಿಯಾಗಿ, ಈ ಮನೆಯಲ್ಲಿ ಇದ್ದಿದ್ದು ಸಂತೋಷದ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮೆಲ್ಲಾ ಭಾವನೆಗಳಿಗೆ ಸಾಕ್ಷಿಯಾದ ಮನೆಯಿಂದ ಕಳಿಸಿಕೊಡಬೇಕಾಗಿದೆ. ಐಶ್ವರ್ಯಾ, ಹೋಗಿ ಬಾ ಮಗಳೇ! ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಅದನ್ನು ಓದುತ್ತಾ ಐಶ್ವರ್ಯಾ ಕಣ್ಣೀರು ಕೂಡ ಹಾಕಿದ್ರು. ಬಳಿಕ ಪತ್ರದ ಮೂಲಕ ಸೆಂಡ್‌ಆಫ್‌ ಕೊಟ್ಟಿದ್ದಕ್ಕೆ ಥ್ಯಾಂಕ್ಸ್‌ ಎಂದ್ರು. ನಾನು ಮುದುಕಿಯಾದರೂ ಇವರೆಲ್ಲ ನನ್ನ ಕುಟುಂಬ. ಸುಮಾರು 13 ವಾರ ನಾನು ಈ ಸ್ಪರ್ಧಿಗಳ ಜೊತೆ ಕಾಲ ಕಳೆದಿದ್ದೇನೆ. ಈ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

Bigg Boss Kannada Contestant Aishwarya Sindhogi Expresses Desire To Act With Sudeep

ಈ ವಾರದ ಎಲಿಮಿನೇಷನ್‌ನಲ್ಲಿ ಐಶ್ವರ್ಯಾ ಹಾಗೂ ಮೋಕ್ಷಿತಾ ಇದ್ದರು. ಆದರೆ ಕೊನೆಯದಾಗಿ ಐಶ್ವರ್ಯಾ ಅವರೇ ಬಿಗ್‌ಬಾಸ್‌ನಿಂದ ಹೊರನಡೆಯಬೇಕಾಯಿತು. ಈ ವೇಳೆ ಸಹಸ್ಪರ್ಧಿ ಮೋಕ್ಷಿತಾ ಬಗ್ಗೆಯೂ ಐಶ್ವರ್ಯಾ ಮಾತನಾಡಿದ್ರು. ಮೋಕ್ಷಿತಾ ಚೆನ್ನಾಗಿ ಆಡು, ನಿನ್ನನ್ನು ನಾನು ಫೈನಲ್​ನಲ್ಲಿ ನೋಡಬೇಕು ಎಂದು ಬೆನ್ನುತಟ್ಟಿ ಹೊರಬಂದರು.

ನನಗೆ ಮೊದಲಿನಲ್ಲಿದ್ದ ಎನರ್ಜಿ ಕಡಿಮೆ ಆಯಿತು. ಇದೇ ತಪ್ಪಾಯಿತು ಎನಿಸುತ್ತೆ. ಆದರೂ ಇದು ನನ್ನ ಮನೆಯೇ ಎಂಬ ಫೀಲಿಂಗ್‌ ಇದೆ. ನನಗೊಂದು ದೊಡ್ಡ ಕುಟುಂಬ ಸಿಕ್ಕಿದೆ. ಈ ಮೂರು ತಿಂಗಳು ನಾನು ಬಿಗ್‌ಬಾಸ್‌ನಲ್ಲಿದ್ದೆ ಎನ್ನುವುದೇ ನನಗೆ ಹೆಮ್ಮೆ. ನನ್ನ ಪ್ರಕಾರ ಸುದೀಪ್‌ ಅವರು ದೇವರಾದರೆ, ಬಿಗ್‌ಬಾಸ್‌ ಮನೆ ದೇವಸ್ಥಾನ ಎಂದು ಭಾವಿಸಿದ್ದೇನೆ. ನನಗೆ ಇಲ್ಲಿವರೆಗೆ ಯಾರೂ ಇಲ್ಲ ಎನ್ನುವ ಭಾವನೆ ಇರಲಿಲ್ಲ. ಇನ್ನು ಮುಂದೆಯೂ ಆ ನೋವು ನನಗೆ ಇರೋದಿಲ್ಲ. ಇಡೀ ಕರ್ನಾಟಕದ ಜನತೆಗೆ ಧನ್ಯವಾದಗಳು ಎಂದು ಐಶ್ವರ್ಯಾ ಧೈರ್ಯದ ಮಾತುಗಳನ್ನಾಡಿದರು.

ಇದೇ ವೇಳೆ ಸುದೀಪ್‌ ಅವರಿಗೆ ಐಶ್ವರ್ಯಾ ಅವರು ಒಂದು ದೊಡ್ಡ ಬೇಡಿಕೆಯೊಂದನ್ನು ಇಟ್ಟರು. ನಿಮ್ಮ ಜೊತೆ ನನಗೆ ಒಂದು ಸಿನಿಮಾ ಮಾಡುವ ಆದೆ ಇದೆ. ಯಾವ ಪಾತ್ರವಾದರೂ ಪರವಾಗಿಲ್ಲ, ನಿಮ್ಮೊಂದಿಗೆ ನಾನು ನಟಿಸಬೇಕು ಎಂದು ಐಶ್ವರ್ಯಾ ಸುದೀಪ್‌ ಅವರಿಗೆ ಕೇಳಿಕೊಂಡರು. ಅಂತೂ ಐಶ್ವರ್ಯಾ ಹೊಸ ವರ್ಷಕ್ಕೂ ಮುನ್ನವೇ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+