BBK-12: ಕಾಕ್ರೋಚ್ ಸುಧಿ ಬಿಗ್‌ಬಾಸ್ ಮನೆಯಿಂದ ಹೊರಬರಲು ಅಸಲಿ ಕಾರಣ ಇದೇನಾ?
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಗಮನ ಸೆಳೆದಿದ್ದ ಸ್ಪರ್ಧಿ ಕಾಕ್ರೋಚ್ ಸುಧಿ ಎಲಿಮಿನೇಟ್ ಆಗಿದ್ದಾರೆ. ನಿನ್ನೆ ಶಾಕಿಂಗ್ ಎಮಿನೇಷನ್ ನಡೆಸಿದ ಸುದೀಪ್, ನಾಲ್ಕು ಸ್ಪರ್ಧಿಗಳನ್ನು ಲಾಕ್ ಮಾಡಿದ್ದರು. ಇವರಲ್ಲಿ ಒಬ್ಬರು ಮನೆಗೆ ಹೋಗೋದು ಪಕ್ಕಾ ಎಂದು ಹೇಳಿದ್ದರು. ಅದರಂತೆ ರಿಷಾ, ರಘು, ಜಾನ್ವಿ ಹಾಗು ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಲಾಯಿತು. ಎಲ್ಲರೂ ತಮ್ಮ ಲಗೇಜ್ ಪ್ಯಾಕ್ ಮಾಡಿ ನಿಲ್ಲುವಂತೆ ಸುದೀಪ್ ಶಾಕ್ ಕೊಟ್ಟರು. ಅಂತಿಮವಾಗಿ ಕಾಕ್ರೋಚ್ ಸುಧಿ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಏಳು ವಾರಗಳ ಕಾಲ ಸುಧಿ ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆದಿದ್ದರು. ನಿನ್ನೆ ನಾಮಿನೇಟ್ ಆದಾಗ ಸುಧಿ ಯಾವುದೋ ಜಿದ್ದಿಗೆ, ದ್ವೇಷಕ್ಕೆ ಎಲಿಮಿನೇಟ್ ಮಾಡಬೇಡಿ ಎಂದು ಬೇಸರ ಹೊರಹಾಕಿದ್ದರು. ಸುಧಿ ಎಮಿನೇಟ್ ಆಗಲು ಮಾಳು ನಿಪನಾಳ ಕಾರಣನಾ? ಎಂಬ ಪ್ರಶ್ನೆಗೆ ಕ್ಲಾರಿಟಿ ನೀಡಿರುವ ಕಾಕ್ರೋಚ್, ಆ ರೀತಿ ಎಲ್ಲ ಇಲ್ಲ. ಇದು ಆಟ ಅಷ್ಟೇ ಎಂದಿದ್ದಾರೆ.

ಅಲ್ಲಿನ ಪರಿಸ್ಥಿತಿಗಳು ಹಾಗು ಮನಸ್ಥಿತಿ ಹಾಗೆ ಮಾಡಿರುತ್ತದೆ. ನಾನು ಯಾವಾಗಲೂ ಅವರಿಗೆ ನೀವು ಕಾಣುತ್ತಿಲ್ಲ ಅಂತಿದ್ದೆ. ಮಾಳು ಮಾತನಾಡೋದು ಸ್ವಲ್ಪ ಕಡಿಮೆ. ಈ ಕಾರಣಕ್ಕೆ ನಾನು ಅವರಿಗೆ ಬೇಸರವಾಗುವ ರೀತಿ ಮಾತನಾಡುತ್ತಿರಲಿಲ್ಲ. ಮಾಳು ತುಂಬಾ ಎಮೋಷನಲ್ ಹುಡುಗ. ನಾನು ಹೊರಗಡೆ ಬಂದ ಮೇಲೆ ನನ್ನಿಂದ ಹೀಗೆ ಆಯ್ತು ಎಂದು ಆತ ಕಣ್ಣೀರು ಹಾಕಿರಬಹುದು. ಆದ್ರೆ ನಾನು ಬಿಗ್‌ಬಾಸ್‌ನಿಂದ ಹೊರಗೆ ಬಂದಿದ್ದು ಮಾಳು ಇಂದ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಿನಿ ಫಿನಾಲೆ ಗೆದ್ದಿದ್ದ ಕಾಕ್ರೋಚ್ ಸುಧಿ ಸ್ಪೆಷಲ್ ಪವರ್ ಪಡೆದಿದ್ದರು. ಅಲ್ಲದೆ ಕಳೆದ ವಾರ ನಾಮಿನೇಟ್ ಆದಾಗಲೂ ಅದೇ ಪವರ್‌ನಿಂದ ಪಾರಾಗಿದ್ದರು. ಆದರೆ, ಈ ವಾರ ಸುಧಿಗೆ ಯಾವುದೇ ಪವರ್ ಇರಲಿಲ್ಲ. ಈ ಹಿಂದೆ ಕ್ಯಾಪ್ಟನ್ ಆಗಿದ್ದ ಮಾಳು, ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಿದ್ದರು. ಕಾಕ್ರೋಚ್ ಸುಧಿ ಮತ್ತೆ ನಾಮಿನೇಟ್ ಆಗಿದ್ದರು. ಅಂತಿಮವಾಗಿ ತಾವೇ ನಿರೀಕ್ಷಿಸಿದಂತೆ ಸುಧಿ ಮನೆಯಿಂದ ಹೊರಬಂದಿದ್ದಾರೆ.
ಆ ಇಬ್ಬರಿಂದ ಸುಧಿ ಎಲಿಮಿನೇಟ್?
ಎಲಿಮಿನೇಷನ್ ಬಳಿಕ ಬಿಗ್‌ಬಾಸ್ ವೇದಿಕೆಗೆ ಬಂದ ಕಾಕ್ರೋಚ್, ತಮ್ಮ ಜರ್ನಿ ಹಾಗೂ ಅಲ್ಲಿನ ಅನುಭವಗಳನ್ನ ಹಂಚಿಕೊಂಡರು. ಈ ವೇಳೆ ಸುಧಿ ಪತ್ನಿ ಕೂಡ ಎಮಿನೇಷನ್ ಬಗ್ಗೆ ಮಾತನಾಡಿದರು. ಸುಧಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರೊಂದಿಗೆ ಹೆಚ್ಚಾಗಿ ಇದ್ದಿದ್ದರಿಂದ ಅದೇ ಅವರಿಗೆ ನೆಗೆಟಿವ್ ಆಯ್ತು ಎಂದು ಆ ಇಬ್ಬರ ಹೆಸರನ್ನು ಸೂಚಿಸಿದರು. ಸುಧಿ ಇನ್ನಷ್ಟು ಎಫರ್ಟ್ ಹಾಕಿ ಆಟವನ್ನು ಆಡಬೇಕಿತ್ತು. ಅವರಲ್ಲಿ ಇನ್ನು ಹೆಚ್ಚಿನ ಸಾಮರ್ಥ್ಯ ಇತ್ತು. ಅವರು ಅಶ್ವಿನಿ ಮತ್ತು ಜಾನ್ವಿ ಗುಂಪಿನಿಂದ ಹೊರಬಂದು ಆಟವಾಡಿದ್ದರೆ ಮತ್ತಷ್ಟು ದಿನ ಅವರು ಬಿಗ್‌ಬಾಸ್ ಮನೆಯಲ್ಲಿ ಇರುತ್ತಿದ್ದರು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.












Click it and Unblock the Notifications