Kiccha Sudeep: ಕಿಚ್ಚ ಸುದೀಪ್‌ ವಿರುದ್ಧ ಚೈತ್ರಾ ಕುಂದಾಪುರ ಗರಂ: ಯಾಕೆ..?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಕಳೆದ ವೀಕೆಂಡ್​ ಎಪಿಸೋಡ್‌ ಸಕ್ಕತ್ತಾಗಿತ್ತು ಎನ್ನುವುದು ಪ್ರತಿಯೊಬ್ಬ ಪ್ರೇಕ್ಷಕನ ಅಭಿಪ್ರಾಯ. ಕೆಟ್ಟ ಸೀಸನ್‌ ಅಂತಾ ಕೇಕ್‌ ಕತ್ತರಿಸಿದ ಸುದೀಪ್ ಸಂಪೂರ್ಣ ವಾರದಲ್ಲಿ ನಡೆದ ಅವಘಡಗಳಲ್ಲಿ ಕೆಲವರ ಪಾತ್ರದ ಬಗ್ಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಚೈತ್ರಾ ಕುಂದಾಪುರ, ಲಾಯರ್‌ ಜಗದೀಶ್‌ಗೆ ಆಡಿದ ಮಾತಿನ ಬಗ್ಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು.

ಕೆಲವು ಪ್ರಶ್ನೆಗಳನ್ನು ನೇರವಾಗಿ ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್‌ ಕೇಳಿದರು. ಸುದೀಪ್‌ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಚೈತ್ರಾ ಕಣ್ಣು ತುಂಬಿಕೊಂಡರು. ಅಷ್ಟಾದರೂ ಸುದೀಪ್‌ ಸಂಚಿಕೆ ನಡೆಸಿಕೊಟ್ಟ ಬಳಿಕ ಚೈತ್ರಾ ಕುಂದಾಪುರ ಕೆಲವು ಸ್ಪರ್ಧಿಗಳ ಮುಂದೆ ನೇರವಾಗಿ ಸುದೀಪ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Bigg Boss Kannada Chaitra Kundapur Expressed Her Displeasure Against Actor Kiccha Sudeep

'ಇಷ್ಟು ವರ್ಷದ ನೈತಿಕತೆಯನ್ನು ಒಂದು ಗಂಟೆಯಲ್ಲಿ ಕಳೆದುಕೊಂಡು ಬಿಟ್ಟೆ. ನನಗೆ ಇದು ಹೆಂಗೆ ಕಾಣಿಸಿತು ಅಂದರೆ ಲಾಯರ್‌ ಜಗದೀಶ್‌ ಅವರಿಗೆ ಕ್ಲೀನ್‌ ಚೀಟ್‌ ಕೊಟ್ಟಂತೆ ಕಾಣಿಸಿತು. ನಿಜವಾಗಿ ನನಗೆ ಹಾಗೇ ಅನಿಸಿತು. ನೇರವಾಗಿ ಹೇಳುತ್ತೇನೆ. ಜಗದೀಶ್‌ ಅವರಿಗೆ ಕ್ಲೀನ್‌ ಚೀಟ್‌ ಕೊಟ್ಟಂತೆ ಕಾಣಿಸಿತು ಬಿಟ್ಟರೆ ಬೇರೆ ಏನೂ ಇಲ್ಲ. ಬಾಯಿಕಟ್ಟಿಕೊಂಡು ಕೂತಿದ್ದೇವೆ. ನನ್ನ ವೈಯಕ್ತಿಕ ವಿಚಾರ ಮಾತನಾಡಿದಕ್ಕೆ, ನನ್ನ ಕೇಸ್‌ ವಿಚಾರ ಮಾತನಾಡಿದಕ್ಕೆ ನಾನು ಅವರ ಮೇಲೆ ಕೋಪಗೊಂಡಿದ್ದು ಎಂದು ಚೈತ್ರಾ ಕುಂದಾಪುರ ನಟಿ ಅನುಷಾ ರೈ ಬಳಿ ಹೇಳಿಕೊಂಡರು.

'ನಮಗೆ ಕೆಸರು ಎರಚಿದರೆ ನಾವು ಕೂಡ ಅವರಿಗೆ ಕೆಸರು ಎರಚಬೇಕು. ನಾವು ಅವರಿಗೆ ಗುಲಾಬಿ ಎಸೆಯಲು ಆಗುವುದಿಲ್ಲ. ಆ ಮನುಷ್ಯನ ಬಗ್ಗೆ ಯಾಕೆ ಆ ಹಂತಕ್ಕೆ ಸ್ಪಷ್ಟನೆ ಕೊಡುತ್ತಾರೋ ನನಗೆ ಗೊತ್ತಾಗಿಲ್ಲ. ಮುಂದಿನ ದಿನಗಳಲ್ಲಿ ನೀವು ಹೇಗೆ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರಲ್ಲ' ಎಂದು ಮಾನಸ ಮುಂದೆ ಹೇಳಿಕೊಂಡರು.

Bigg Boss Kannada Chaitra Kundapur Expressed Her Displeasure Against Actor Kiccha Sudeep

'ನಾನು ಜಗದೀಶ್‌ ಪರ ನಿಂತಿಲ್ಲ ಎನ್ನುವ ಆ ಒಂದು ಪದವನ್ನು ಜನರು ಪರಿಗಣಿಸುತ್ತಾರಾ?. ಜನ ಇವರುಗಳಿಗೆ ಸುದೀಪ್‌ ಸರ್‌ ಉಗಿದರು ಎನ್ನುವುದನ್ನು ಮಾತ್ರ ಪರಿಗಣಿಸುತ್ತಾರೆ. ಇಡೀ ಮನೆ ಒಂದಾಗಿ ಗ್ರೂಪ್‌ ಮಾಡಿ ಜಗದೀಶ್‌ ಸರ್‌ನ ಹೊರಗೆ ಹಾಕಿದರು ಅಂತಾ ಸುದೀಪ್ ಸರ್‌ ಕ್ಲಾಸ್‌ ತೆಗೆದುಕೊಂಡರು ಅಂತಾ ಮಾತ್ರ ನೆನಪಿಟ್ಟುಕೊಳ್ಳುತ್ತಾರೆ ಹೊರತು, ಮಧ್ಯ ಒಂದೊಂದು ವಾಕ್ಯನ ಹೇಳಿದರು ಎನ್ನುವುದನ್ನು ಖಂಡಿತಾ ಜನ ನೆನಪಿಟ್ಟುಕೊಳ್ಳುವುದಿಲ್ಲ' ಎಂದು ಚೈತ್ರಾ ಕುಂದಾಪುರ ಹೇಳಿದರು.

ಕೈ ಮುಗಿದು ಪೂಜೆ ಮಾಡುವ ಕಲ್ಲಿಗೂ ರಸ್ತೆಯಲ್ಲಿ ಎಲ್ಲೋ ಬಿದ್ದಿರುವ ಕಲ್ಲಿಗೂ ವ್ಯತ್ಯಾಸ ಇದೆ. ರೋಡಿನಲ್ಲಿರುವ ಕಲ್ಲಿಗೆ ಉಗಿದ ತಕ್ಷಣ ನಾನು ತಪ್ಪಿತಸ್ಥೆ ಆಗುವುದಿಲ್ಲ. ನಾವು ಹೇಳಿ ಮುಗಿಸಲು ಬಿಟ್ಟರೆ ತಾನೇ ನಮ್ಮ ಆಲೋಚನೆ ಗೊತ್ತಾಗುವುದು. ನಾನು ಹೇಳಿರುವ ಪದ ತಪ್ಪು ಅಂತಾ ನನಗೂ ಗೊತ್ತು. ನಾನು ಅದರ ಬಗ್ಗೆ ಮಾತನಾಡುತ್ತಿಲ್ಲ. ಅವರ ವಿಚಾರಕ್ಕೆ ಇಡೀ ಮನೆಯನ್ನು ವಿಲನ್‌ ಮಾಡಿದ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ಚೈತ್ರಾ, ನಟಿ ಐಶ್ವರ್ಯ ಬಳಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+