Bigg Boss Kannada: ಈ ವಾರ ಎಲಿಮಿನೇಷನ್‌ನಲ್ಲಿ ಬಿಗ್ ಶಾಕ್; ಮನೆಯಿಂದ ಹೊರಗೆ ಹೋಗ್ತೀನಿ ಎಂದ ಹನುಮಂತ!
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರ ಅಚ್ಚರಿ ಕಾದಿದೆ. ಬಿಗ್‌ಬಾಸ್‌ನ ಈ ಸೀಸನ್ ಅತ್ಯಂತ ರೋಚಕ ಹಾಗೂ ಅಂತಿಮ ಘಟ್ಟವನ್ನು ತಲುಪುತ್ತಿದ್ದು, ಈ ಹಂತದಲ್ಲಿ ಹಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ. ಗೋಲ್ಡ್ ಸುರೇಶ್ ಅವರು ಏಕಾಏಕಿ ಗೇಮ್ ಕ್ವಿಟ್ ಮಾಡುವಂತೆ ಆಗಿದೆ. ಈ ಅನುಮಾನಕ್ಕೆ ಮುಖ್ಯವಾಗಿ ಕಾರಣವಾಗಿರುವುದು ಶುಕ್ರವಾರವಾದರೂ ವೋಟಿಂಗ್ ಲೈನ್ಸ್ ಓಪನ್ ಆಗದೆ ಇರುವುದು. ಸಾಮಾನ್ಯವಾಗಿ ಬಿಗ್ ಬಾಸ್ ನಲ್ಲಿ ಕೆಲವೊಮ್ಮೆ ನೋ ಎಲಿಮಿನೇಷನ್ ವೀಕ್ ಅಂತ ಮಾಡಲಾಗುತ್ತದೆ. ಈ ಸೀಸನ್‌ನಲ್ಲಿ ಈ ರೀತಿ ಆಗುತ್ತಿರುವುದು ನಾಲ್ಕನೇ ಬಾರಿ. ಆದರೆ, ಇದರಲ್ಲೂ ಟ್ವಿಸ್ಟ್ ಇದ್ಯಾ ಅಂತ ಪ್ರೇಕ್ಷಕರು ಕಾಯ್ತಾ ಇದ್ದಾರೆ.
ಗೋಲ್ಡ್ ಸುರೇಶ್ ಅವರು ಅನಿರೀಕ್ಷಿತವಾಗಿ ಬಿಗ್‌ಬಾಸ್‌ನಿಂದ ಹೊರ ಬಂದಿರುವುದರಿಂದ ಈ ಬಾರಿ ಯಾರೂ ಸಹ ಎಲಿಮಿನೇಷನ್ ಆಗಲ್ಲ ಅಂತ ಹೇಳಲಾಗ್ತಿದೆ. ಕಳೆದ ವಾರ ಶಿಶಿರ್ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದು, ಈ ವಾರ ಯಾರು ಹೊರ ಬರಲಿದ್ದಾರೆ ಎನ್ನುವ ಕುತೂಹಲವಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಗೋಲ್ಡ್ ಸುರೇಶ್ ಅವರು ಹೊರ ಬರುವಂತೆ ಆಗಿತ್ತು. ಬಿಗ್‌ಬಾಸ್ ಆಗಾಗ ಫ್ರಾಂಕ್ ಮಾಡುವುದು ಹಾಗೂ ದೊಡ್ಡ ಶಾಕ್‌ಗಳನ್ನು ನೀಡುವುದು ಸಹ ಇದೆ. ಕಳೆದ ಬಾರಿಯ ಸೀಸನ್‌ನಲ್ಲಿ ಟಾಪ್ 5 ಬದಲಿಗೆ ಟಾಪ್ 6 ಉಳಿಸಿಕೊಳ್ಳಲಾಗಿತ್ತು.

ಡ್ರೋನ್ ಪ್ರತಾಪ್ ಅವರು ಇನ್ನೇನು ಹೊರಗೆ ಬರಲಿದ್ದಾರೆ ಎನ್ನುವಾಗಲೇ ಬಿಗ್‌ಬಾಸ್ ಶಾಕ್ ಕೊಟ್ಟು ಇಲ್ಲ. ಪ್ರೇಕ್ಷಕರ ಒತ್ತಾಯದ ಮೇಲೆ ಎಲ್ಲರೂ ಉಳಿದುಕೊಂಡಿದ್ದೀರಿ ಎಂದಿದ್ದರು. ಈ ವಾರದ ಬಿಗ್‌ಬಾಸ್‌ನಲ್ಲಿ ಹನುಮಂತ, ರಜತ್, ಮೋಕ್ಷಿತಾ ಮತ್ತು ತ್ರಿವಿಕ್ರಂ ಅವರು ನಾಮಿನೇಟ್ ಆಗಿದ್ದಾರೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಇರುವುದರಿಂದಾಗಿ ನಾಮಿನೇಷನ್ ಪ್ರಕ್ರಿಯೆ ಮುಂದೂಡಲಾಗಿದೆ ಎನ್ನಲಾಗ್ತಿದೆ. ಈ ವಾರ ರಜತ್ ಹಾಗೂ ಮಂಜಣ್ಣನ ನಡುವೆ ಟಾಕ್ ಫೈಟ್ ಸಹ ನಡೆದಿದ್ದು, ರಜತ್ ಆಟವನ್ನು ಪ್ರೇಕ್ಷಕರು ಇಷ್ಟಪಡ್ತಿದ್ದಾರೆ. ಆದರೆ, ರಜತ್ ಅವರು ಅನವಶ್ಯಕವಾಗಿ ಕೆಲವು ಕಡೆ ಮಾತನಾಡ್ತಾರೆ ಅದನ್ನು ಸ್ವಲ್ಪ ಬಿಡ್ಬೇಕು ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಡಬ್ಬಲ್ ಎಲಿಮಿನೇಟ್: ಇನ್ನು ಕಳೆದ ವಾರ ಬಿಗ್‌ಬಾಸ್‌ನಲ್ಲಿ ಡಬ್ಬಲ್ ಎಲಿಮಿನೇಟ್ ಆದಂತೆ ಆಗಿದೆ. ಹೀಗಾಗಿ, ಈ ಬಾರಿ ಎಲಿಮಿನೇಟ್ ಡೌಟ್ ಅಂತಲೂ ಹೇಳಲಾಗ್ತಿದೆ. ಕಡಿಮೆ ಮತಗಳು ಬಂದ ಹಿನ್ನೆಲೆಯಲ್ಲಿ ಶಿಶಿರ್ ಶಾಸ್ತ್ರಿ ಅವರು ಹೊರ ಬಂದಿದ್ದರು. ಗೋಲ್ಡ್ ಸುರೇಶ್ ಅವರು ಅನಿರೀಕ್ಷಿತವಾಗಿ ಹೊರಬರಬೇಕಾಯಿತು. ಒಂದೇ ವಾರ ಇಬ್ಬರು ಎಲಿಮಿನೇಟ್ ಆಗಿರುವುದು ಪ್ರೇಕ್ಷಕರಲ್ಲೂ ಬೇಸರ ಮೂಡಿಸಿದೆ. ಅಲ್ಲದೇ ಗೋಲ್ಡ್ ಸುರೇಶ್ ಅವರು ಬಿಗ್‌ಬಾಸ್ ಮನೆ ಬಿಟ್ಟು ಹೋಗ್ತಾರೆ ಅಂತ ಯಾರೂ ಸಹ ನಿರೀಕ್ಷೆ ಮಾಡಿರಲಿಲ್ಲ.

ಅಲ್ಲದೆ ಹನುಮಂತ ಅವರ ಹಾಗೂ ಗೋಲ್ಡ್ ಸುರೇಶ್ ಅವರ ಜೋಡಿಯ ಜೋಕ್ಸ್‌ಗೆ ಜನ ಫಿದಾ ಆಗಿದ್ದರು. ಆದರೆ, ಅನಿರೀಕ್ಷಿತ ಬದಲಾವಣೆಗಳು ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿವೆ. ಇನ್ನು ಈ ನಡುವೆ ಹನುಮಂತ ಸಹ ನಾನು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಹೇಳಿ ಶಾಕ್ ಕೊಟ್ಟಿದ್ದಾರೆ. ಹೌದು ಗೋಲ್ಡ್ ಸುರೇಶ್ ಹೋದ ಬೆನ್ನಲ್ಲೇ ಹನುಮಂತ ಸಹ ಈ ರೀತಿ ಹೇಳಿದ್ದಾರೆ.
ಧನರಾಜ್ ಅವರ ಬಳಿ ದೋಸ್ತಾ ನನಗೆ ಬಸ್ ಬುಕ್ ಮಾಡ್ಪಾ ನಾನು ಊರಿಗೆ ಹೋಗ್ತೀನಿ ಅಂತ ಹೇಳಿದ್ದಾರೆ. ಈ ವೇಳೆ ಧನರಾಜ್ ಅವರು ಹನುಮಂತ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವರು ಸಮಾಧಾನ ಆಗಿಲ್ಲ. ನನಗೆ ನೆನಪಿನ ಶಕ್ತಿ ಕಡಿಮೆ.. ಉದ್ದುದ್ದ ಮಾತನಾಡೋಕೆ ಬರಲ್ಲ ಎಂದಿದ್ದಾರೆ ಹನುಮಂತ. ಗೋಲ್ಡ್ ಸುರೇಶ್ ಅವರು ಮನೆಯಿಂದ ಹೊರಗೆ ಹೋಗಿರುವುದು ಹನುಮಂತ ಅವರನ್ನು ಕಂಗಾಲಾಗಿಸಿದೆ. ಇವರಿಬ್ಬರು ತುಂಬಾ ಆತ್ಮೀಯವಾಗಿ ಇದ್ದರು. ಇದೀಗ ಹನುಮಂತ ಅವರು ವಾರಾಂತ್ಯದಲ್ಲಿ ಏನಾದರೂ ಹೊರ ಬರುವ ನಿರ್ಧಾರವನ್ನು ಸುದೀಪ್ ಅವರ ಮುಂದೆ ಹೇಳಿದ್ದಾರೆಯೇ ಎನ್ನುವ ಅನುಮಾನವೂ ಶುರುವಾಗಿದೆ.












Click it and Unblock the Notifications