ಬಿಗ್‌ಬಾಸ್ ಗೆಲ್ಲೋದು ಗಿಲ್ಲಿ ಅಲ್ಲ, ಅಶ್ವಿನಿ ಗೌಡ: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಬಿಗ್‌ಬಾಸ್ ಕನ್ನಡ ಸೀಸನ್-12 ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ, ವಿನ್ನರ್ ಯಾರು ಎಂಬ ಚರ್ಚೆಗಳು ಮನೆಮಾತಾಗಿವೆ. ಆರಂಭದಲ್ಲಿ ಗಿಲ್ಲಿ ಹೆಸರು ಹೆಚ್ಚು ಕೇಳಿಬಂದಿದ್ದರೂ, ಈಗ ಪರಿಸ್ಥಿತಿ ಬದಲಾಗುತ್ತಿರುವ ಸೂಚನೆಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಗೌಡ ಅವರ ಪರ ಬೆಂಬಲ ಮತ್ತು ಕ್ರೇಜ್ ದಿನೇದಿನೇ ಹೆಚ್ಚಾಗುತ್ತಿದೆ. ಗೆಲ್ಲೋದು ಗಿಲ್ಲಿ ಅಲ್ಲ, ಅಶ್ವಿನಿ ಗೌಡ ಎನ್ನುತ್ತಿದ್ದಾರೆ ಅವರ ಬೆಂಬಲಿಗರು.
ಬಿಗ್‌ಬಾಸ್ ಕನ್ನಡ ಸೀಸನ್-12 ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ವಿನ್ನರ್ ಯಾರು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ವಲಯದಲ್ಲೂ ದೊಡ್ಡ ಚರ್ಚೆಯ ವಿಷಯವಾಗಿದೆ. ಆರಂಭದ ದಿನಗಳಲ್ಲಿ ಗಿಲ್ಲಿ ವಿನ್ನರ್ ಆಗಬಹುದು ಎಂಬ ಅಭಿಪ್ರಾಯ ಹೆಚ್ಚು ಕೇಳಿಬಂದಿದ್ದರೂ, ಇತ್ತೀಚಿನ ವಾರಗಳಲ್ಲಿ ಆ ಲೆಕ್ಕಾಚಾರಗಳು ಸಂಪೂರ್ಣವಾಗಿ ಬದಲಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅದರ ಪ್ರಮುಖ ಕಾರಣವೇ ಅಶ್ವಿನಿ ಗೌಡ.

ಅಶ್ವಿನಿ ಗೌಡ ಪರ ಕ್ರೇಜ್ ಏಕೆ ಹೆಚ್ಚುತ್ತಿದೆ?
ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಆರಂಭದಿಂದಲೂ ತಮ್ಮದೇ ಆದ ಆಟದ ಶೈಲಿಯನ್ನು ಉಳಿಸಿಕೊಂಡಿದ್ದಾರೆ. ಗೊಂದಲಗಳು, ವಾದ-ವಿವಾದಗಳು ನಡೆದಾಗಲೂ ಅವರು ಅನಾವಶ್ಯಕ ಡ್ರಾಮಾಗಳಿಗೆ ಹೋಗದೇ, ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಟಾಸ್ಕ್‌ಗಳಲ್ಲಿ ಶಕ್ತಿಯಾಗಿ ನಿಂತು, ತಂಡದ ಆಟವಿರಲಿ ಅಥವಾ ವೈಯಕ್ತಿಕ ಸವಾಲುಗಳಿರಲಿ-ಎಲ್ಲದರಲ್ಲೂ ತಮ್ಮ ಶಕ್ತಿ ಮತ್ತು ಸ್ಥೈರ್ಯವನ್ನು ತೋರಿಸಿದ್ದಾರೆ. ಅಲ್ಲದೆ ಬಿಗ್‌ಬಾಸ್ ಆರಂಭದಿಂದಲೂ ಗಿಲ್ಲಿ ಜೊತೆ ಕಿರಿಕ್ ಮಾಡಿಕೊಂಡು ಕೊನೆಯವರೆಗೂ ಪೈಪೋಟಿ ನೀಡುತ್ತಾ ಬಂದಿದ್ದಾರೆ.
ಕಿಚ್ಚನ ಚಪ್ಪಾಳೆ ದೊಡ್ಡ ಟರ್ನಿಂಗ್ ಪಾಯಿಂಟ್
ಈ ವಾರ ಅಶ್ವಿನಿ ಗೌಡ ಅವರಿಗೆ ದೊರೆತ ಕಿಚ್ಚನ ಚಪ್ಪಾಳೆ ಅವರನ್ನು ವಿನ್ನರ್ ರೇಸ್‌ನಲ್ಲಿ ಇನ್ನಷ್ಟು ಬಲಿಷ್ಠರನ್ನಾಗಿ ಮಾಡಿದೆ. ಕಿಚ್ಚ ಸುದೀಪ್ ಅವರಿಂದ ಸಿಗುವ ಈ ಮೆಚ್ಚುಗೆ ಕೇವಲ ಒಂದು ಕ್ಷಣಿಕ ಗೌರವವಲ್ಲ. ಅದು ಸ್ಪರ್ಧಿಯ ಒಟ್ಟಾರೆ ಪ್ರಯಾಣಕ್ಕೆ ಸಿಕ್ಕಿರುವ ಒಪ್ಪಿಗೆಯಂತೆ ಪರಿಗಣಿಸಲಾಗುತ್ತದೆ. ಹೀಗಾಗಿ, "ಕಿಚ್ಚನ ಚಪ್ಪಾಳೆ ಬಂದ ಸ್ಪರ್ಧಿಗಳು ಸಾಮಾನ್ಯವಾಗಿ ಫಿನಾಲೆಯಲ್ಲಿ ದೊಡ್ಡ ಪಾತ್ರವಹಿಸುತ್ತಾರೆ" ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದೇ ಕಾರಣಕ್ಕೆ ಅಶ್ವಿನಿ ಗೌಡ ವಿನ್ನರ್ ಆಗಬಹುದು ಎಂಬ ಮಾತುಗಳು ಮತ್ತಷ್ಟು ಗಟ್ಟಿಯಾಗಿವೆ. ಈ ಸೀಸನ್‌ನ ಕೊನೆಯ ವಾರದ ಚಪ್ಪಾಳೆಗೆ ಪಾತ್ರರಾಗಿದ್ದರಿಂದ ಅಶ್ವಿನಿ ಅವರು ಭಾವುಕರಾದರು.

ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲೂ ಅಶ್ವಿನಿ ಗೌಡ ಪರ ಟ್ರೆಂಡ್‌ಗಳು ಹೆಚ್ಚಾಗಿವೆ. ಫ್ಯಾನ್ಸ್ ಪೇಜ್‌ಗಳು, ರೀಲ್ಸ್, ಕ್ಲಿಪ್‌ಗಳು ಮತ್ತು ಪೋಸ್ಟ್‌ಗಳ ಮೂಲಕ ಅವರ ಆಟದ ಪ್ರಯಾಣವನ್ನು ಹೊಗಳಲಾಗುತ್ತಿದೆ. "ರಿಯಲ್ ಪ್ಲೇಯರ್", "ಡಿಸರ್ವಿಂಗ್ ವಿನ್ನರ್" ಎಂಬ ಟ್ಯಾಗ್‌ಲೈನ್‌ಗಳೊಂದಿಗೆ ಅಭಿಮಾನಿಗಳು ಅಶ್ವಿನಿ ಅವರನ್ನು ಬೆಂಬಲಿಸುತ್ತಿದ್ದಾರೆ. ಗಿಲ್ಲಿ ಕೂಡ ಈ ಸೀಸನ್‌ನ ಶಕ್ತಿಶಾಲಿ ಸ್ಪರ್ಧಿಯಾಗಿಯೇ ಉಳಿದಿದ್ದಾರೆ. ಅವರಿಗೆ ಸ್ಥಿರ ಅಭಿಮಾನಿ ಬಳಗವಿದ್ದು, ಕೆಲವು ಪ್ರಮುಖ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇತ್ತೀಚಿನ ವಾರಗಳಲ್ಲಿ ಅಶ್ವಿನಿ ಗೌಡ ಹೆಚ್ಚು ಪಾಸಿಟಿವ್ ಸ್ಪೇಸ್ ಪಡೆದುಕೊಂಡಿದ್ದು, ಗಿಲ್ಲಿಗಿಂತ ಮುಂದೆ ಹೋಗುತ್ತಿರುವಂತೆ ಕಾಣುತ್ತಿದೆ. ಪ್ರೇಕ್ಷಕರ ಮತದಾನದಲ್ಲಿ ಈ ಪಾಸಿಟಿವ್ ಇಮೇಜ್ ದೊಡ್ಡ ಪಾತ್ರ ವಹಿಸುವ ಸಾಧ್ಯತೆ ಇದೆ.
ಗ್ರ್ಯಾಂಡ್ ಫಿನಾಲೆ ಯಾವಾಗ?
ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಜನವರಿ 17 ಮತ್ತು 18ರಂದು ನಡೆಯಲಿದೆ. ಅಂತಿಮವಾಗಿ ಗಿಲ್ಲಿ ನಟ, ರಘು, ಅಶ್ವಿನಿ ಗೌಡ, ಕಾವ್ಯಾ ಶೈವ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಮತ್ತು ಧನುಷ್ ಉಳಿದುಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆ, ಈ ಸೀಸನ್‌ನ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಿದೆ. ಆದರೆ ಈಗಿನ ವಾತಾವರಣ ನೋಡಿದರೆ, "ಈ ಬಾರಿ ಟ್ರೋಫಿ ಗಿಲ್ಲಿಯ ಕೈಗೆ ಅಲ್ಲ, ಅಶ್ವಿನಿ ಗೌಡ ಅವರ ಕೈಗೆ ಹೋಗಬಹುದು" ಎಂಬ ಅಭಿಪ್ರಾಯಗಳು ಬಲವಾಗಿ ಕೇಳಿಬರುತ್ತಿವೆ. ಆಟ, ವ್ಯಕ್ತಿತ್ವ, ಕಿಚ್ಚನ ಮೆಚ್ಚುಗೆ ಮತ್ತು ಪ್ರೇಕ್ಷಕರ ಬೆಂಬಲ ಈ ಎಲ್ಲ ಅಂಶಗಳು ಅಶ್ವಿನಿ ಗೌಡ ಪರವಾಗಿ ಸೇರಿಕೊಳ್ಳುತ್ತಿರುವುದರಿಂದ ಬಿಗ್‌ಬಾಸ್ ಕನ್ನಡ ಸೀಸನ್-12ರ ವಿನ್ನರ್ ಆಗುವ ಪ್ರಮುಖ ಸ್ಪರ್ಧಿ ಎನ್ನುತ್ತಿದ್ದಾರೆ.












Click it and Unblock the Notifications