"ಸೆಡೆ ಅಂದ್ರೆ ಏನು ಸುಧಿ ಸರ್‌? ನಿಮ್ಮನ್ನೂ ಹಾಗೇ ಕರೀಲಾ..." Kiccha Sudeep

ಬಿಗ್‌ಬಾಸ್‌ ಮನೆಯಲ್ಲಿ ವಾರವಿಡೀ ಏನೆಲ್ಲ ಆಟ ಆಡಿದ್ರೂ, ಬಾಯಿ ತಪ್ಪಿ ಒಂದು ತಪ್ಪು ಮಾತು ಆಡಿದ್ರೂ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರ ಕೈಯಲ್ಲಿ ಕ್ಲಾಸ್‌ ಆಗೋದು ಗ್ಯಾರಂಟಿ. ಅದು ಈ ಬಿಗ್‌ಬಾಸ್‌ ಸೀಸನ್‌-12ರಲ್ಲಿ ಸ್ವಲ್ಪ ಜಾಸ್ತಿಯೇ ಇದೆ. ಕಾಕ್ರೋಚ್‌ ಸುಧಿಗೆ ಮೊದಲ ವಾರದಲ್ಲೇ ಕಿಚ್ಚ ಚಳಿಬಿಡಿಸಿದ್ದರು. ಆದರೆ ಸುಧಿ ಮತ್ತೊಂದು ಎಡವಟ್ಟು ಮಾಡಿಕೊಂಡು ಸುದೀಪ್‌ ಕೈಯಲ್ಲಿ ಸಿಕ್ಕಾಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಸುಧಿ ಬಳಸಿದ್ದ "ಸೆಡೆ" ಪದ.

ಹೌದು, ಸುಧಿ ಮಾತಿನ ಭರದಲ್ಲಿ ರಕ್ಷಿತಾ ಶೆಟ್ಟಿ ಅವರನ್ನ "ಸೆಡೆ" ಎಂದು ಕರೆದಿದ್ದರು. ತನ್ನ ತಪ್ಪು ಅರಿತ ಕಾಕ್ರೋಚ್‌ ಇದಕ್ಕೆ ಕ್ಷಮೆ ಕೂಡ ಕೇಳಿದ್ದರು. ಆದರೆ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸುಧಿ ಅಂತಹ ಪದಗಳನ್ನು ಹೆಣ್ಣುಮಗಳಿಗೆ ಬಳಸಬಾರದಿತ್ತು ಎಂದೆಲ್ಲ ಖಂಡಿಸಿದ್ದರು. ಇದಕ್ಕೆಲ್ಲ ಸುದೀಪ್‌ ಅವರು ಸರಿಯಾಗಿ ಪಾಠ ಕಲಿಸ್ತಾರೆ ಎಂದೂ ಕಾಮೆಂಟ್‌ ಮಾಡಿದ್ದರು. ಅದರಂತೆ ವಾರದ ಕತೆ ಕಿಚ್ಚನ ಜೊತೆಯಲ್ಲಿ ಸುಧಿ ಲಾಕ್‌ ಆಗಿದ್ದಾರೆ.

Bigg Boss Kannada 12 Kiccha Sudeep Scolds Cockroach Sudhi for using the word Sede

ಎಂದಿನಂತೆ ಪಂಚಾಯಿತಿ ಶುರು ಮಾಡಿದ ಕಿಚ್ಚ, "ಮಿಸ್ಟರ್‌ ಸುಧಿ ಸರ್‌, ಸೆಡೆ ಅಂದ್ರೆ ಏನು?" ಎಂದು ಸುದೀಪ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಕಾಕ್ರೋಚ್‌, "ಅದು ಚೈಲ್ಡ್‌ ಅನ್ನೋ ಅರ್ಥ ಬರುತ್ತೆ" ಎಂದಿದ್ದಾರೆ. "ಏನು ಚೈಲ್ಡಾ..? ಹಂಗಂದ್ರೆ ನೀವು ನನಗೆ ಮಗು ತರ ಕಾಣ್ತಿದ್ದೀರ, ನಾನು ಹಾಗೇ ಕರೀಲಾ?" ಎಂದು ಸುದೀಪ್‌ ಗರಂ ಆಗಿದ್ದಾರೆ.

"ಕೋಪದಲ್ಲಿ, ಜಗಳದಲ್ಲಿ ಬಂತು ಅಣ್ಣ" ಎಂದು ಕಾಕ್ರೋಚ್‌ ಮತ್ತೆ ಹೇಳಿದ್ದು, "ಇದು ಕೋಪದಲ್ಲಿ ಬರಲಿಲ್ಲ ಸರ್‌, ನಿಮ್ಮ ದೃಷ್ಟಿಕೋನ ಹಾಗಿದೆ. ಈ ತರ ಓವರ್‌ ಡ್ರಾಮಾ ಮಾಡಿಕೊಂಡು 10 ರೂಪಾಯಿ ಆಕ್ಟಿಂಗ್‌ ಯಾರು ಮಾಡ್ತಿರೋದು?" ಎಂದು ಸುದೀಪ್‌ ಕಾಕ್ರೋಚ್‌ ಆಡಿದ್ದ ಮಾತುಗಳನ್ನೇ ಉಲ್ಲೇಖಿಸಿ ತಿವಿದಿದ್ದಾರೆ. ಕಿಚ್ಚನ ಕ್ಲಾಸ್‌ ಕಂಡು ಉಳಿದ ಸ್ಪರ್ಧಿಗಳೆಲ್ಲ ಒಳಗೊಳಗೇ ನಕ್ಕಿದ್ದಾರೆ.

Bigg Boss Kannada 12 Kiccha Sudeep Scolds Cockroach Sudhi for using the word Sede

ಅಶ್ವಿನಿ ಗೌಡಗೂ ಕ್ಲಾಸ್‌

ಇದೇ ವಿಚಾರವಾಗಿ ಅಶ್ವಿನಿ ಗೌಡ ಅವರಿಗೂ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. "ಅಶ್ವಿನಿ ಅವ್ರೇ, ಹೆಣ್ಣಿನ ಬಗ್ಗೆ ಮಾತನಾಡೋದು ತಪ್ಪು, ಏಕವಚನದಲ್ಲಿ ಮಾತನಾಡುವುದು ತಪ್ಪು, ಅದು ತಪ್ಪು, ಇದು ತಪ್ಪು ಅಂತೀರಿ. ಈ ರೀತಿಯ ಪದಗಳನ್ನು ಬಳಸಿದಾಗ ನೀವೇ ಸುಮ್ಮನಿರ್ತೀರಿ. ಒಂದು ವೇಳೆ ನಿಮಗೇ ಈ ಪದ ಬಳಸಿದ್ರೆ ಏನು ಮಾಡ್ತಿದ್ರಿ? ಎಂದು ಸುದೀಪ್‌ ಕೇಳಿದ್ದಾರೆ. ಇದಕ್ಕಿಂತ ಸಣ್ಣವರಾಗಲು ಹೋಗಬೇಡಿ" ಎಂದೂ ಕಿಚ್ಚ ವಾರ್ನಿಂಗ್‌ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+