BBK-12: ನನ್ನಂತವನನ್ನ ನೋಡಿರಬಹುದು, ನನ್ನ ನೋಡಿಲ್ಲ: ಅಶ್ವಿನಿ ಗೌಡರನ್ನ ಮತ್ತೆ ಕೆಣಕಿದ ಗಿಲ್ಲಿ
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಆರಂಭದಿಂದಲೂ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಹಾವು-ಮುಂಗುಸಿ ಜಗಳ ನಡೆಯುತ್ತಿರುವುದು ಗೊತ್ತೇ ಇದೆ. ಇದು ಆಗಾಗ ತಾರಕಕ್ಕೇರಿ, ಕಿಚ್ಚ ಸುದೀಪ್ ಕಡೆಯಿಂದ ಭರ್ಜರಿ ಕ್ಲಾಸ್ ಕೂಡ ಆಗಿದೆ. ಆದರೂ ಈ ಸೀಸನ್‌ನಲ್ಲಿ ಇವರಿಬ್ಬರ ನಡುವಿನ ಫೈಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದ ಫ್ಯಾನ್ಸ್ ಕೂಡ ಇದ್ದಾರೆ. ಇವರಿಬ್ಬರ ಗಲಾಟೆ ಮತ್ತೆ ಶುರುವಾಗಿದ್ದು, "ನೀವು ನನ್ನಂತವನನ್ನ ನೋಡಿರಬಹುದು, ಆದ್ರೆ ನನ್ನ ನೋಡಿರಲ್ಲ" ಎಂದು ಅಶ್ವಿನಿಗೌಡ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇತ್ತೀಚೆಗೆ ರಘು ಹಾಗೂ ಅಶ್ವಿನಿ ಅವರ ನಡುವೆ ಕಿರಿಕ್ ಆಗಿತ್ತು. ರಘು ಅವರ ಮಾತಿನಿಂದ ಅಶ್ವಿನಿ ಅವರು ಗಳಗಳನೆ ಅತ್ತಿದ್ದರು. ಅಲ್ಲದೆ ಬಿಗ್‌ಬಾಸ್‌ನಿಂದ ಹೊರಗೆ ಹೋಗ್ತೀನಿ ಅಂತ ಬೇಸರ ಹೊರಹಾಕಿದ್ದರು. ರಘು ಅವರು ಏಕವಚನದಲ್ಲಿ ಮಾತನಾಡಿದ್ರು ಎಂದು ಅಶ್ವಿನಿ ಗೌಡ ಗರಂ ಆಗಿದ್ದರು. ಇದೀಗ ಗಿಲ್ಲಿ ಮತ್ತೆ ಅಶ್ವಿನಿ ವಿರುದ್ಧ ತೊಡೆತಟ್ಟಿದ್ದಾರೆ.

ರಘು ಅಣ್ಣ ನಿಮ್ಮನ್ನ ಕರೆದ ಹಾಗೆ ಅಶ್ವಿನಿ ಅನ್ನಬೇಕಿತ್ತಾ? ಅಶ್ವಿನಿ.....ಮೇಡಂ ಎಂದು ಗಿಲ್ಲಿ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ಇನಿಶಿಯಲ್ ಎ ಅಂತ ಇದ್ದಿದ್ರೆ ಎ ಅಶ್ವಿನಿ ಮೇಡಂ ಅಂತ ಕರೀತಿದ್ದೆ. ಗೇಟ್ ಹತ್ರ ಹೋಗಿ ನಾನು ಮನೆಗೆ ಹೋಗ್ತೀನಿ ಅಂತೀರಲ್ಲ? ಹೋಗಿ ಎಂದಿದ್ದಾರೆ. ನಾವೇನು ಬೇಡ ಅಂತ ಹಿಡಿದುಕೊಂಡಿದ್ದೀವಾ? ಎಂದು ರೋಸ್ಟ್ ಮಾಡಿದ್ದಾರೆ. ನಿನ್ನಂತವನನ್ನ ಎಷ್ಟು ಜನರನ್ನ ನೋಡಿಲ್ಲ ನಾನು? ಎಂದು ಅಶ್ವಿನಿ ಗೌಡ ಕೋಪದಿಂದ ಮಾತನಾಡಿದ್ದಾರೆ. ಆದರೆ ನೀವು ನನ್ನ ನೋಡಿರಲ್ಲ ಎಂದು ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ.
ರಿಷಾ-ಮಾಳು ಫೈಟ್
ಇತ್ತ ರಿಷಾ ಗೌಡ ಹಾಗೂ ಮಾಳು ನಡುವೆ ಕೂಡ ಗಲಾಟೆ ನಡೆದಿದೆ. ಮೊದಲ ದಿನದಿಂದಲೂ ಮಾಳುಗೆ ಏನ್ ಪ್ರಾಬ್ಲಂ ಅಂತ ಗೊತ್ತಿಲ್ಲ ಅಂತ ರಿಷಾ ರೇಗಿದ್ದಾರೆ. ಇದಕ್ಕೆ ನೀನೇ ದೊಡ್ಡ ಪ್ರಾಬ್ಲಂ, ನಿನ್ನ ಯಾರು ಮಾತನಾಡಿಸಿದ್ರು ಎಂದು ಮಾಳು ಗರಂ ಆಗಿದ್ದಾರೆ. ಈ ಆಟಿಟ್ಯೂಡ್ ಎಲ್ಲ ನಿನ್ನ ಮನೇಲಿ ಇಟ್ಕೋಳಿ ಎಂದು ರಿಷಾ ವಾರ್ನಿಂಗ್ ಕೊಟ್ಟಿದ್ದಾರೆ. ಮನೆ ವಿಚಾರಕ್ಕೆ ಬಂದ್ರೆ ಸರಿ ಇರಲ್ಲ, ಇದು ಲಾಸ್ಟ್ ವಾರ್ನಿಂಗ್ ಅಂತ ಮಾಳು ಮಾತಿಗೆ ಮಾತು ಬೆಳೆಸಿದ್ದಾರೆ. ಇದೇನು ನಿಮ್ಮ ಮನೇನಾ? ನೀವ್ಯಾರು ಅದನ್ನ ಹೇಳೋಕೆ? ಬೇಕಾ ನೀವ್ ಹೋಗ್ತಾ ಇರಿ? ನೀವೇನು ಲಾಸ್ಟ್ ವಾರ್ನಿಂಗ್ ಕೊಡೋದು ಎಂದು ರಿಷಾ ಮತ್ತೆ ಕೌಂಟರ್ ಕೊಟ್ಟಿದ್ದಾರೆ. ಯಾವ ಕಾರಣಕ್ಕೆ ಇವರ ನಡುವೆ ಗಲಾಟೆ ಆಯ್ತು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.












Click it and Unblock the Notifications