Bigg Boss 12: ರಜತ್‌ನ ಹೊರಗೆ ಕಳಿಸಿಯೇ ನಾನು ಹೋಗೋದು: ಸುದೀಪ್ ಎದುರೇ ಗಿಲ್ಲಿ ಶಪಥ
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಸ್ಪರ್ಧಿಗಳು ಸವಾಲಿಗೆ ಸವಾಲ್ ಹಾಕುತ್ತಾ ಆಟ ರಂಗೇರಿಸುತ್ತಿದ್ದಾರೆ. ಇಲ್ಲಿವರೆಗೆ ನಾನು ಬಿಗ್‌ಬಾಸ್ ಕಪ್ ಗೆಲ್ತೀನಿ ಅಂತಿದ್ದವರು, ಈಗ ನಿನ್ನ ಕಳಿಸಿಯೇ ನಾನು ಹೊರಗೆ ಹೋಗೋದು ಎಂದು ತೊಡೆ ತಟ್ಟುತ್ತಿದ್ದಾರೆ. ನಿಮ್ಮ ಪ್ರಕಾರ ಯಾರ ಪಾಪದ ಕೊಡ ತುಂಬಿದೆ? ಎಂದು ಕಿಚ್ಚ ಸುದೀಪ್ ನೀಡಿದ ಟಾಸ್ಕ್‌ನಲ್ಲಿ ರಜತ್ ಹಾಗೂ ಗಿಲ್ಲಿ ಸವಾಲ್ ಹಾಕಿಕೊಂಡಿದ್ದಾರೆ. ರಜತ್‌ನ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸಿಯೇ ನಾನು ಹೋಗೋದು ಎಂದು ತೊಡೆತಟ್ಟಿದ್ದಾರೆ.
ಮೊದಲಿಗೆ ಪಾಪದ ಕೊಡ ತುಂಬಿರುವುದು ರಜತ್ ಅಣ್ಣಂಗೆ ಎಂದು ಗಿಲ್ಲಿ ಹೇಳಿದ್ದಾರೆ. ಮಾತು ಮಾತಿಗೂ ಅವರು ಅರ್ಧ ಜನಕ್ಕೆ ಇಲ್ಲಿನ ಆಟದ ಬಗ್ಗೆ ಅರ್ಥ ಆಗಲ್ಲ ಅಂತಾರೆ ಎಂದು ಗಿಲ್ಲಿ ಕಾರಣ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ರಜತ್, ನಾನು ಗಿಲ್ಲಿನ ಲೆಕ್ಕಕ್ಕೆ ತಗೊಂಡೇ ಇಲ್ಲ. ಯಾಕಂದ್ರೆ ಗಿಲ್ಲಿ ಟಾಸ್ಕ್ ಆಡೋದೆ ಇಲ್ಲ ಎಂದಿದ್ದಾರೆ.

ಗಿಲ್ಲಿ ಚಾಲೆಂಜ್‌ಗೆ ಅಶ್ವಿನಿ ಚಪ್ಪಾಳೆ
ಕೊಟ್ಟ 10 ಟಾಸ್ಕ್ ಆಡಿದ್ರೆ, 8 ಟಾಸ್ಕ್ ಗೆದ್ದಿರುತ್ತೀನಿ, ಆದರೆ ರಜತ್ ಮೊದಲ ಟಾಸ್ಕ್‌ನಲ್ಲೇ ಒಂದೂ ಬಾಲ್ ಹಾಕದೆ ಸೈಡಲ್ಲಿ ಸುಮ್ನೆ ಕೂತಿದ್ರು ಎಂದು ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ. ಇದಕ್ಕೆ ರಜತ್ ನಾನು ಇಲ್ಲಿಗೆ ಬಂದಿರೋದು ಒಬ್ಬನಾಗಿ, ಹಾಗಾಗಿ ಒಬ್ಬನೇ ಹೊಡೆದು ಹಾಕ್ತೀನಿ, ನನಗೆ ಯಾರೆಲ್ಲ ನಾಮಿನೇಟ್ ಮಾಡಿದ್ದಾರೋ ಇವರನ್ನೆಲ್ಲ ಮನೆಯಿಂದ ಆಚೆ ಹಾಕಿಯೇ ನಾನು ಹೊರಗೆ ಕಾಲಿಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಇದಕ್ಕೆ ಟಾಂಗ್ ಕೊಟ್ಟ ಗಿಲ್ಲಿ, ನಾನು ಕೂಡ ಅಷ್ಟೇ, ರಜತ್ ಅಣ್ಣನ್ನ ಇಲ್ಲಿಂದ ಕಳಿಸಿಯೇ ನಾನು ಹೊರಗೆ ಹೋಗೋದು ಎಂದು ಶಪಥ ಮಾಡಿದ್ದಾರೆ. ಇದನ್ನು ಕೇಳಿ ಅಶ್ವಿನಿ ಗೌಡ ಗಿಲ್ಲಿಗೆ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.
ಇಬ್ಬರು ಎಲಿಮಿನೇಷನ್
ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋದು ಒಬ್ಬರಲ್ಲ, ಇಬ್ಬರು ಎಂದು ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ. ಧ್ರುವಂತ್, ರಕ್ಷಿತಾ ಶೆಟ್ಟಿ ಹಾಗೂ ರಜತ್ ಅವರನ್ನು ನಾಮಿನೇಟ್ ಮಾಡಲಾಗಿದ್ದು, ಇದರಲ್ಲಿ ಇಬ್ಬರು ಎಲಿಮಿನೇಟ್ ಆಗ್ತಾರೆ ಎಂದು ಸುದೀಪ್ ಟ್ವಿಸ್ಟ್ ನೀಡಿದ್ದಾರೆ. ಅಂತಿಮವಾಗಿ ರಜತ್ ನೀವು ಸೇಫ್ ಎಂದು ಹೇಳಿದ್ದು, ಧ್ರುವಂತ್ ಹಾಗೂ ರಕ್ಷಿತಾ ಮನೆಯಿಂದ ಹೊರಗೆ ಹೋಗುತ್ತಿರುವುದು, ಉಳಿದ ಸ್ಪರ್ಧಿಗಳು ಅಳುತ್ತಾ ಬೀಳ್ಕೊಡುತ್ತಿರುವುದು ಕಲರ್ಸ್ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿದೆ.
ಇನ್ನು ರಕ್ಷಿತಾ ಕಣ್ಣೀರಿಡುತ್ತಾ ಹೋಗುತ್ತಿದ್ದು, ನಾನು ನಿಜವಾಗಿಯೂ ಹೋಗ್ತಿದ್ದೀನಿ, ನಾನು ಮತ್ತೊಮ್ಮೆ ಬರಲು ಆಗಲ್ಲ ಎಂದಿದ್ದಾರೆ. ಧ್ರುವಂತ್ ಹಾಗೂ ರಕ್ಷಿತಾ ಮುಖ್ಯದ್ವಾರದಿಂದ ಹೊರಗೆ ಹೋಗಿದ್ದು, ಬಳಿಕ ಡೋರ್ ಕ್ಲೋಸ್ ಆಗಿದೆ. ಇದು ನಿಜವೋ ಅಥವಾ ಶಾಕ್ ನೀಡಿದ್ದೋ ಎಂಬುದು ಇಂದು ತಿಳಿಯಲಿದೆ.












Click it and Unblock the Notifications