"ನಮಗೇನ್ ತೆವಲಾ..." ಬಿಗ್‌ಬಾಸ್‌ನಲ್ಲಿ ಅಶ್ವಿನಿ, ರಜತ್, ರಘು ನಡುವೆ ಟಾಕ್‌ವಾರ್, ಏಕೆ?
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಸ್ಪರ್ಧಿಗಳ ನಡುವೆ ದಿನಕ್ಕೊಂದು ಗಲಾಟೆ ನಡೆಯುತ್ತಿದೆ. ಇದೀಗ ಅಡುವೆ ವಿಚಾರವಾಗಿ ಶುರುವಾಗಿರುವ ಗಲಾಟೆ ಅತಿರೇಕಕ್ಕೆ ತಲುಪಿದೆ. ಈ ವೇಳೆ ಸ್ಪರ್ಧಿಗಳ "ನಮಗೇನ್ ತೆವಲಾ..." ಅಂತೆಲ್ಲ ಕೂಗಾಡಿಕೊಂಡಿದ್ದಾರೆ. ಅಶ್ವಿನಿ ಗೌಡ, ರಘು ಹಾಗೂ ರಜತ್ ನಡುವೆ ಈ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದಿದೆ. ಇನ್ನು ಬಿಗ್‌ಬಾಸ್ ಮನೆಯಲ್ಲಿ ಅಡುಗೆ ವಿಚಾರಕ್ಕೂ ಕಿರಿಕ್ ಆಗಿದೆ. ಆಗ ಸ್ಪರ್ಧಿಗಳು "ತೆವಲು" ಪದ ಬಳಕೆ ಮಾಡಿದ್ದಾರೆ.
ಆಲೂಗಡ್ಡೆಯನ್ನು ಭಾಗ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಆಗ ನಮಗೇನು ತೆವಲಾ, ನಿಮಗೆಲ್ಲ ತಿನ್ನಿಸೋಕೆ ಎಂದು ರಘು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಶ್ವಿನಿ ಗೌಡ, ನಿಮಗೆ ಆಗಲ್ಲ ಅಂದ್ರೆ ಬಿಡಿ ಸರ್, ಬೇರೆಯವರು ಮಾಡ್ತಾರೆ, ನೀವು ತೆವಲು ಅಂತ ಯಾಕೆ ಹೇಳ್ತೀರಾ? ಎಂದು ಕೂಗಾಡಿದ್ದಾರೆ.

ಬಳಿಕ ಎಲ್ಲ ಸ್ಪರ್ಧಿಗಳ ನಡುವೆ ಜೋರು ಗಲಾಟೆ ನಡೆದಿದೆ. ಆಗ ರಜತ್ ಕೂಡ ನನಗೆ ಬೇಕು ಅಂದ್ರೆ ನಾನು ತಿಂತೀನಿ, ಅವರಿಗೆ ಬೇಕಾದ್ರೆ ತಿನ್ನಲಿ ಎಂದಿದ್ದಾರೆ. ನಮ್ಮ ಪಾಲನ್ನೂ ಸೇರಿಸಿ ತಿಂತಿದ್ದೀರಿ ಅಂದ್ರೆ ನಮಗೇನು ತೆವಲಾ ಈ ರೀತಿ ಅನಿಸಿಕೊಳ್ಳೋಕೆ? ಎಂದು ಅಶ್ವಿನಿ ಗೌಡಗೆ ರಜತ್ ಕೌಂಟರ್ ಕೊಟ್ಟಿದ್ದಾರೆ. ಅಸಲಿಗೆ ಯಾವ ಕಾರಣಕ್ಕೆ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಈ ಗಲಾಟೆ ನಡೆಯಿತು ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಯಾರಿಗೆಲ್ಲ ಬೆಂಡೆತ್ತಲಿದ್ದಾರೆ ಎಂದು ವೀಕ್ಷಕರು ಕುತೂಹಲದಿಂದ ಕಾದಿದ್ದಾರೆ.
ಸುದೀಪ್ ಎದುರಲ್ಲೇ ಕಿತ್ತಾಡಿಕೊಂಡ ರಜತ್-ಧ್ರುವಂತ್
ಬಿಗ್‌ಬಾಸ್ ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆಗಳು ವೀಕ್ಷಕರಿಂದ ಬಂದಿದೆ ಎಂದು ಸುದೀಪ್ ಹೇಳಿದ್ದಾರೆ. ಧ್ರುವಂತ್‌ಗೆ ಮನೆ ಬಿಟ್ಟು ಹೋಗುವಂತದ್ದು ಏನಾಗಿದೆ? ಎಂಬ ಪ್ರಶ್ನೆಯನ್ನು ವೀಕ್ಷಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಧ್ರುವಂತ್ ನಾನು ನಿರಂತರವಾಗಿ ನನ್ನದಲ್ಲದ ತಪ್ಪಿಗೆ ಬ್ಲೇಮ್ ಮಾಡಿಸಿಕೊಳ್ಳಬೇಕಾಯ್ತು, ಅದರಿಂದ ಆಗುವ ಡ್ಯಾಮೇಜ್ ನನಗೆ ಬೇಕಾ ಅನಿಸಿತು ಎಂದಿದ್ದಾರೆ.
ಆಗ ಮಧ್ಯಪ್ರವೇಶಿಸಿದ ರಜತ್, ಇಲ್ಲಿ ಡ್ಯಾಮೇಜ್ ಮಾಡಿಕೊಳ್ಳುತ್ತಿರುವುದೇ ಧ್ರುವಂತ್ ಎಂದಿದ್ದಾರೆ. ಧ್ರುವಂತ್ ಅಸಭ್ಯವಾಗಿ ಮಾತನಾಡುವುದು, ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ. ಇದರಿಂದ ಸಿಟ್ಟಾದ ಧ್ರುವಂತ್ ಇದು ತುಂಬಾ ತಪ್ಪಾದ ಹೇಳಿಕೆ ಎಂದಿದ್ದಾರೆ. ಈಗ ನಾನು ನೇರವಾಗಿ ಮಾತನಾಡ್ತೀನಿ ತಡ್ಕೋ ಎಂದು ರಜತ್ ಹೇಳಿದಾಗ, ಏಯ್...ನೀನು ತಡ್ಕೋ, ಇದನ್ನೆಲ್ಲ ನನ್ನತ್ರ ಮಾತನಾಡೋಕೆ ಬರಬೇಡ ನೀನು, ಎಷ್ಟರಲ್ಲಿ ಇರ್ಬೇಕೋ ಅಷ್ಟರಲ್ಲಿ ಇರು ಎಂದು ಧ್ರುವಂತ್ ಅವಾಜ್ ಹಾಕಿದ್ದಾರೆ.












Click it and Unblock the Notifications