ಗಿಲ್ಲಿ ಬಡವ ಅಲ್ಲ, ಆ ಗೆಟಪ್ ಹಾಕೊಂಡು ಬಿಗ್‌ಬಾಸ್ ಗೆದ್ದಿದ್ದಾರೆ: ಅಶ್ವಿನಿ ಗೌಡ
ಕನ್ನಡ ಬಿಗ್‌ಬಾಸ್ ಸೀಸನ್-12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ, ಟಾಪ್-3 ಸ್ಪರ್ಧಿಯಾಗಿದ್ದ ಅಶ್ವಿನಿ ಗೌಡ ಅವರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. ಅಶ್ವಿನಿ ಗಿಲ್ಲಿಯ ಗೆಲುವನ್ನು ಸ್ವಾಗತಿಸಿದರೂ, ಅವರನ್ನು 'ಬಡವ' ಎಂದು ಬಿಂಬಿಸುವ ಪ್ರವೃತ್ತಿಗೆ ಅಶ್ವಿನಿ ಗೌಡ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ಟ್ರೋಫಿ ಕೈಗೆತ್ತಿಕೊಂಡು ಬಿಗ್‌ಬಾಸ್ ಸೀಸನ್-12ರ ವಿನ್ನರ್ ಆದರು. ಶೋ ಆರಂಭದಿಂದಲೇ ಗಿಲ್ಲಿಯೇ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಜನರ ಭವಿಷ್ಯ ನುಡಿದಂತೆಯೇ ಫಲಿತಾಂಶ ಹೊರಬಂದಿದೆ. ಅವರ ಗೆಲುವಿನಿಂದ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದು, ರಾಜ್ಯದ ವಿವಿಧೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಗಿಲ್ಲಿ ನಿಜವಾಗಿಯೂ ಬಡವನಾ?
ಇದೇ ಸಂದರ್ಭದಲ್ಲಿ ಗಿಲ್ಲಿ ಕುರಿತು ಮಾತನಾಡಿರುವ ಅಶ್ವಿನಿ ಗೌಡ, "ಬಡವರ ಮಕ್ಕಳು ಬೆಳಿಬೇಕು ಎನ್ನುವುದು ನಟ ಡಾಲಿ ಧನಂಜಯ್ ಅವರ ಡೈಲಾಗ್. ಆದರೆ ಇಲ್ಲಿ ಪ್ರಶ್ನೆ ಗಿಲ್ಲಿ ನಿಜವಾಗಿಯೂ ಬಡವನಾ ಎಂಬುದು. ನಿಜವಾದ ಬಡವ ಮತ್ತು ಬಡವನಂತೆ ಕಾಣಿಸಿಕೊಳ್ಳುವ ಗೆಟಪ್ ಎರಡೂ ಒಂದೇ ಅಲ್ಲ" ಎಂದು ಹೇಳಿದ್ದಾರೆ.
ಗಿಲ್ಲಿ ಬಡವನ ಗೆಟಪ್‌ನಲ್ಲಿ ವಿನ್ನರ್ ಆದರು ಎಂದು ಅಭಿಪ್ರಾಯಪಟ್ಟ ಅಶ್ವಿನಿ ಗೌಡ, "ಗಿಲ್ಲಿಯನ್ನು ಬಡವ ಎಂದು ಕರೆಯುವುದು ತಪ್ಪು. ಬಡತನವನ್ನು ಯಾವತ್ತೂ ಸ್ಟ್ರಾಟಜಿ ಕಾರ್ಡ್ ಆಗಿ ಬಳಸಬಾರದು. ಬಹುಶಃ ಗಿಲ್ಲಿಯ ಈ ಗೆಟಪ್ ಮತ್ತು ಅವರ ಆಟ ಜನರಿಗೆ ಇಷ್ಟವಾಗಿರಬಹುದು" ಎಂದು ಹೇಳಿದ್ದಾರೆ.
ಆದರೂ ಗಿಲ್ಲಿಯ ಗೆಲುವಿಗೆ ಗೌರವ ವ್ಯಕ್ತಪಡಿಸಿದ ಅವರು, "ಗಿಲ್ಲಿ ಗೆದ್ದಿದ್ದಾರೆ. ಅವರ ವ್ಯಕ್ತಿತ್ವ ಹಾಗೂ ಆಟದ ಬಗ್ಗೆ ನನಗೆ ಖಂಡಿತವಾಗಿಯೂ ಹೆಮ್ಮೆ ಇದೆ. ಅವರು ನನ್ನೊಂದಿಗೆ ಬಿಗ್‌ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ ಪ್ರತಿಸ್ಪರ್ಧಿ" ಎಂದೂ ಸ್ಪಷ್ಟಪಡಿಸಿದರು.
ನಿಜವಾದ ಬಡವರ ಮಕ್ಕಳು ಗೆಲ್ಲಬೇಕು
ವೈಯಕ್ತಿಕ ಸಂಬಂಧಗಳ ಕುರಿತು ಮಾತನಾಡಿದ ಅಶ್ವಿನಿ ಗೌಡ, ಗಿಲ್ಲಿ ನನಗೆ 'ಅತ್ತೆ ಮಗಳು' ಎಂದು ಕರೆದಿದ್ದಾರೆ. ನಾನು ಅವರನ್ನು 'ಮಾನವ ಮಗ' ಎಂದು ಕರೆದಿದ್ದೇನೆ. ಅವರ ಭವಿಷ್ಯ ಉಜ್ವಲವಾಗಲಿ" ಎಂದು ಶುಭಾಶಯ ಕೋರಿದರು. "ನಿಜವಾಗಿಯೂ ಬಡವರ ಮಕ್ಕಳು ಗೆಲ್ಲಬೇಕು. ಆದರೆ ಬಡವರ ಮಕ್ಕಳು ಎಂಬ ಗೆಟಪ್ ಹಾಕಿಕೊಂಡು ಗೆಲ್ಲುವುದು ನನಗೆ ಸರಿ ಎನಿಸಲ್ಲ" ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಅಶ್ವಿನಿ ಗೌಡ ಸ್ಪಷ್ಟಪಡಿಸಿದ್ದಾರೆ.
ಗಿಲ್ಲಿಯ ಬಿಗ್‌ಬಾಸ್ ಗೆಲುವಿನ ಬಳಿಕ ಅಶ್ವಿನಿ ಗೌಡ ಅವರು ನೀಡಿರುವ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳ ನಡುವೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಗ್‌ಬಾಸ್ ಗೆಲ್ಲೋದು ಗಿಲ್ಲಿನೇ ಎಂದು ಹಲವರು ಭವಿಷ್ಯ ನುಡಿದಿದ್ದರು. ನಂತರ ಅಶ್ವಿನಿ ಗೌಡ ಅವರ ಪರವೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಅಶ್ವಿನಿ ಅವರು ಎರಡನೇ ರನ್ನರ್ ಅಪ್ ಆದರು. ಗಿಲ್ಲಿ ವಿನ್ನರ್ ಆಗಿ ಹೊರಹೊಮ್ಮಿದರು.
-
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
Sourav Ganguly: ಟಿ20 ವಿಶ್ವಕಪ್ 2026; ಸಂಜು ಆಟಕ್ಕೆ ಮನಸೋತು ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದಾ' ಸೌರವ್ ಗಂಗೂಲಿ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು?












Click it and Unblock the Notifications