Trivikram: ರಶ್ಮಿಕಾ ಮಂದಣ್ಣ ಜೊತೆಗಿರುವ ತ್ರಿವಿಕ್ರಮ್ ಫೋಟೋ ವೈರಲ್! ಏನಿದು ಅಸಲಿ ಕಥೆ?

ಬೆಂಗಳೂರು, ಫೆಬ್ರವರಿ 06: ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದರೂ ಸಹ ಒಂದಲ್ಲಾ ಒಂದು ವಿಷಯಕ್ಕೆ ಸ್ಪರ್ಧಿಗಳು ಸುದ್ದಿ ಆಗುತ್ತಲೇ ಇದ್ದಾರೆ. ಟ್ರೋಫಿ ಮತ್ತು ಹಣ ಹನುಮಂತ ಗೆದ್ದರೆ, ನಟ ತ್ರಿವಿಕ್ರಮ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಈ ತ್ರಿವಿಕ್ರಮ್ ಹಾಗೂ ಕಿರಿಕ್ ಪಾರ್ಟಿ ಚೆಲುವೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್ ಆಗುತ್ತಿದೆ. ಬಿಬಿಕೆಯಲ್ಲಿದ್ದಾಗ ನಟಿ ಭವ್ಯಾ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾದ ತ್ರಿವಿಕ್ರಮ್ ಮತ್ತು ರಶ್ಮಿಕಾ ಮಧ್ಯೆ ಏನಿದು? ಹೊಸ ವಿಷಯ ಎಂಬ ಪ್ರಶ್ನೆ ಉದ್ಭವಿಸಿದೆ.

ಕನ್ನಡ ಬಿಗ್ ಬಾಸ್ ನಲ್ಲಿದ್ದಾಗ ತ್ರಿವಿಕ್ರಮ ನಟಿ ಭವ್ಯಾ ಜೊತೆಗೆ ಹೆಚ್ಚು ಸಲುಗೆಯಿಂದ ಇದ್ದರು. ಇಬ್ಬರ ಮಧ್ಯೆ ಪ್ರೀತಿ ಉಂಟಾಗಿದೆ. ತ್ರಿವಿಕ್ರಮ್ ನಟಿ ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಈ ಬಗ್ಗೆ ಕಿಚ್ಚ ಸುದೀಪ್ ವಾರದ ಕಥೆಯಲ್ಲಿ ವಿಚಾರಿಸಿದ್ದರು. ಈ ಮಧ್ಯೆ ಬಿಗ್ ಬಾಸ್ ಗೆಲ್ಲುವ ಆಸೆ ಹೊಂದಿದ್ದ ತ್ರಿವಿಕ್ರಮ್‌ಗೆ ನಿರಾಸೆಯಾಗಿದೆ. ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಆಗಲೂ ನಟಿ ಭವ್ಯಾ ಅವರು ಕೊಂಚ ಬೇಜಾರು ಮಾಡಿಕೊಂಡಿದ್ದರು.

Bigg Boss Kannada 11 Trivikram with Actress Rashmika Mandanna Photo Goes Viral

ಇದಾದ ಬಳಿಕ ಎಲ್ಲರು ತಮ್ಮ ಮನೆಗಳಿಗೆ ಹೋದ ಮೇಲೆ ನಟಿ ಭವ್ಯಾ ಅವರಿಗೆ ಮನೆಯಲ್ಲಿ ತಾಯಿ ಮತ್ತು ಸಹೋದರಿಯರು ಬುದ್ಧವಾದ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ತ್ರಿವಿಕ್ರಮ್ ಚಾಪ್ಟರ್ ಮುಗಿಯಿತು ಎನ್ನಲಾಗುತ್ತಿದೆ. ಇದೀಗ ನಟಿ ರಶ್ಮಿಕಾ ಹಾಗೂ ನಟ ತ್ರಿವಿಕ್ರಮ್ ಅವರ ಮಧ್ಯ ಏನಿದು? ಎಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಫೋಟೋ ನೋಡಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಸಲಿಗೆ ಕತೆ ಬೇರೇನೆ ಇದೆ.

ಹೌದು, ಫೋಟೋ ಪ್ರಕಾರ, ದೇವರ ಮುಂದೆ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ತ್ರಿವಿಕ್ರಮ್ ಅವರು ಕೈ ಮುಗಿದು ನಿಂತಿರುವ ಫೋಟೋ ಇದಾಗಿದೆ. ಇದು ವರ್ಷಗಳ ಹಳೇಯ ಫೋಟೋ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ಸಿನಿಮಾ ಮಾಡುವ ಮೊದಲು ತ್ರಿವಿಕ್ರಮ್ ಅವರು ನಾಯಕರಾಗಿ ಆಯ್ಕೆ ಆಗಿದ್ದ ಸಿನಿಮಾವೊಂದಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಹೀಗಾಗಿ ಈ ಸಿನಿಮಾಗೆ ಸಂಬಂಧಿಸಿದ ಫೋಟೋ ಇದಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಸಿನಿಮಾ ಚಿತ್ರೀಕರಣ ಆರಂಭವಾಗಿ ಅರ್ಧಕ್ಕೆ ನಿಂತು ಹೋಯಿತು ಎಂದು ಗಾಂಧಿನಗರದ ಮೂಲಗಳು ತಿಳಿಸಿವೆ. ಸದ್ಯ ಈ ಫೋಟೋ ಬಗ್ಗೆ ನಟಿ ರಶ್ಮಿಕಾ ಮಂದಣ್ಣಾ ಮತ್ತು ನಟ ತ್ರಿವಿಕ್ರಮ್ ಅವರೇ ಅವರ ಫ್ಯಾನ್ಸ್‌ಗೆ ಉತ್ತರಿಸಬೇಕಿದೆ.

Bigg Boss Kannada 11 Trivikram with Actress Rashmika Mandanna Photo Goes Viral

ತ್ರಿವಿಕ್ರಮ್ ಕುರಿತು...

ಎಂಬಿಎ ಪದವೀಧರ ನಾಗಿರುವ ನಟ ತ್ರಿವಿಕ್ರಮ್ ಜೀವನದ ಹಾದಿ ಇತರರ ನಟರಂತೆ ಕಷ್ಟದಿಂದಲೇ ಕೂಡಿತ್ತು. ಕ್ರಿಕೇಟರ್ ಆಗಬೇಕಿತ್ತು. ರಣಜಿ ಕ್ರಿಕೆಟ್ ಆಡುವ ಆಸೆ ಹೊಂದಿದ್ದ ತ್ರಿವಿಕ್ರಮ್ ಅವರು ಓದಿಗೆ ತಕ್ಕಂತೆ ಇತರರ ಕೈ ಕೆಳಗೆ ಕೆಲಸ ಮಾಡಲು ಆಸಕ್ತಿ ತೋರಲಿಲ್ಲ. ಹೀಗಾಗಿ ಅವರು ನಟನಾ ವೃತ್ತಿಯೆಡೆಗೆ ಬಂದರು. ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು. ನಿಮಗೆ ಮಾರ್ಕೆಟ್ ಇಲ್ಲ ಎಂದು ಬೈಸಿಕೊಂಡರು. ಬಳಿಕ ಸೆಲೆಬ್ರೆಟಿ ಆಗದಿದ್ದರೇನಂತೆ, ಸೆಲೆಬ್ರೆಟಿಗಳಿಗೆ ಜಿಮ್ ಟ್ರೈನರ್ ಆದರು. ಪದ್ಮಾವತಿ ಧಾರವಾಹಿ ಮೂಲಕ ಜನರಿಗೆ ಹತ್ತಿರವಾಗಿದ್ದ ನಟ ತ್ರಿವಿಕ್ರಮ್ ಪ್ರೇಮ ಬರಹ, ರಂಗನಾಯಕಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಸದ್ಯ ತ್ರಿವಿಕ್ರಮ್ ಸೇರಿದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಎಲ್ಲ ಸ್ಪರ್ಧಿಗಳು ಇಂಡಸ್ಟ್ರಿ ಸೇರಿದಂತೆ ವಿವಿಧ ರಂಗದಲ್ಲಿ ಬ್ಯೂಸಿಯಾಗಲಿದ್ದಾರೆ. ತಮ್ಮದೇ ಹೊಸ ಪ್ಲಾನ್ ಜೊತೆಗೆ ಕೆಲವರು ಸರ್ಪ್ರೈಸ್ ನೀಡಲು ಮುಂದಾದರೆ, ಬಿಗ್ ಬಾಸ್ ವಿನ್ನರ್ ಹನುಮಂತ ಮತ್ತು ಸ್ಪರ್ಧಿ ಧನರಾಜ್ ಆಚಾರ್ ಅವರು ಈಗಾಗಲೇ ಬಾಯ್ಸ್ ವರ್ಸೆಸ್ ಗಲ್ರ್ಸ್ ಶೋಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ತ್ರಿವಿಕ್ರಮ್ ಅವರು ಏನು ಮಾಡಲಿದ್ದಾರೆ ಎಂಬುದು ಗೊತ್ತಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+