Gauthami Jadav: 'ಫೀಲ್‌ ಆಗುತ್ತೆ': ಟ್ರೋಲ್ ಬಗ್ಗೆ ಗೌತಮಿ ಪತಿ ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಅಂತಿಮ ವಾರದಲ್ಲಿದ್ದು ಗ್ರ್ಯಾಂಡ್‌ ಫಿನಾಲೆಗೆ ಭರ್ಜರಿ ಸಿದ್ಧತೆಯಾಗುತ್ತಿದೆ. ಈಗಾಗಲೇ ಆರು ಸ್ಪರ್ಧಿಗಳು ಫಿನಾಲೆಗೆ ಕಾಲಿಟ್ಟಿದ್ದು, ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾದವ್‌ ಹಾಗೂ ಧನರಾಜ್‌ ಆಚಾರ್‌ ಕೊನೆಯ ಹಂತದಲ್ಲಿ ಈ ಅವಕಾಶವನ್ನು ಕಳೆದುಕೊಂಡರು. ಸದ್ಯ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿರುವ ಗೌತಮಿ ಜಾದವ್‌ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದಾರೆ.

ಬಿಗ್‌ ಬಾಸ್‌ ಮನೆಯೊಳಗೆ ಉತ್ತಮ ಸ್ಪರ್ಧಿಯಾಗಿದ್ದ ಗೌತಮಿ ಜಾದವ್‌ ಬಗ್ಗೆ ಹೊರಗಡೆ ಕೆಲವು ಟ್ರೋಲ್‌ಗಳು ಹರಿದಾಡಿದ್ದವು. ಗೌತಮಿ ಪಾಸಿಟಿವಿಯ ಬಗ್ಗೆ, ಗೌತಮಿ ಹಾಗೂ ಉಗ್ರಂ ಮಂಜು ಗೆಳೆತನದ ಬಗ್ಗೆ ಹೀಗೆ ಅನೇಕ ವಿಚಾರಗಳ ಬಗ್ಗೆ ಟ್ರೋಲ್‌ಗಳಾಗಿದ್ದವು. ಈ ಟ್ರೋಲ್‌ಗಳ ಬಗ್ಗೆ ಗೌತಮಿ ಜಾದವ್ ಪತಿ ಅಭಿಷೇಕ್‌ ಪ್ರತಿಕ್ರಿಯಿಸಿದ್ದಾರೆ.

Bigg Boss Kannada 11 Contestant Gauthami Jadav Husband Responds To Trolls

ಬಾಸ್‌ ಟಿವಿ ಜೊತೆ ಮಾತನಾಡಿದ ಅವರು, 'ಬಿಗ್‌ ಬಾಸ್‌ನಲ್ಲಿ ಹೇಗಿರಬೇಕು ಎನ್ನುವುದರ ಬಗ್ಗೆ ನಾನೇನು ಹೇಳಿರಲಿಲ್ಲ ಅವರಿಗೆ. ಆದರೆ ಒಂದು ವಿಷಯವನ್ನು ಹೇಳಿದ್ದೆ. ನಿನ್ನ ಜೀವನಕ್ಕೆ ಬಿಗ್‌ ಬಾಸ್‌ನ ಆ ಒಂದು ಪಯಣ ತುಂಬಾ ಮುಖ್ಯವಾಗಿರುತ್ತದೆ. ಅಲ್ಲಿಗೆ ಹೋಗುವುದು ಮುಖ್ಯವಲ್ಲ ಆದರೆ ಅಲ್ಲಿಂದ ಬಂದ ಮೇಲೆ ನಿನ್ನ ಜೀವನದಲ್ಲಿ ಸ್ವಲ್ಪ ಬದಲಾವಣೆ ಆಗೇ ಆಗುತ್ತದೆ. ಅದನ್ನು ತಲೆಯಲ್ಲಿ ಇಟ್ಟುಕೊಂಡು ನೀನು ಅಲ್ಲಿ ಹೇಗಿರುತ್ತಿಯಾ ಅದು ಮುಖ್ಯವಾಗುತ್ತದೆ ಎಂದು ಹೇಳಿ ಕಳುಹಿಸಿದ್ದೆ' ಎಂದರು.

ಇನ್ನು ಟ್ರೋಲ್‌ಗಳಿಂದ ಆದ ಪರಿಣಾಮಗಳ ಬಗ್ಗೆ ಮಾತನಾಡಿದ ಅಭಿಷೇಕ್‌, 'ಮೊದಲೆಲ್ಲಾ ಬೇರೆಯವರನ್ನು ಟ್ರೋಲ್‌ ಮಾಡಿದಾಗ ನಾನು ನೋಡಿ ನಕ್ಕಿದ್ದೇನೆ. ಆದರೆ ಈಗ ಇಲ್ಲಿ ನನಗೆ ಗೊತ್ತಿರುವವರನ್ನೇ ಟ್ರೋಲ್‌ ಮಾಡಿದಾಗ ಆಗ ಟ್ರೋಲ್‌ ಆಗುವವರ ಸ್ಥಿತಿ ಅರ್ಥ ಆಯ್ತು. ಟ್ರೋಲ್‌ ಮಾಡುವವರು ಯಾರನ್ನು ಟ್ರೋಲ್‌ ಮಾಡುತ್ತಾರೆ ಅವರೇನು ಅಂತಾ ಒಮ್ಮೆ ಯೋಚನೆ ಮಾಡಬೇಕು' ಎಂದು ಹೇಳಿದರು.

'ಅವಳು ಬಿಗ್ ಬಾಸ್‌ ಮನೆಯಲ್ಲಿ ಆಟ ಆಡಿಲ್ಲ. ಬದಲಿಗೆ ಆ ಅವಕಾಶವನ್ನು ಬಳಿಸಿಕೊಂಡು ಆ ಜರ್ನಿಯನ್ನು ಎಂಜಾಯ್‌ ಮಾಡಿಕೊಂಡು ಬಂದಳು. ಅದನ್ನು ಟ್ರೋಲ್‌ ಮಾಡುವವರು ಅರ್ಥ ಮಾಡಿಕೊಳ್ಳಲ್ಲ ಅನಿಸುತ್ತದೆ. ನಾವೇನು ಹೇಳಿದರು ಅವರು ಅರ್ಥ ಮಾಡಿಕೊಳ್ಳುವುದು ಅನುಮಾನ ಅಂತಾ ನನಗೆ ಅನಿಸಿತು. ಹೀಗಾಗಿ ನಾನು ಟ್ರೋಲ್‌ಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತಾ ಅನಿಸಿತು'.

Bigg Boss Kannada 11 Contestant Gauthami Jadav Husband Responds To Trolls

' ಟ್ರೋಲ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ..ಅದು..ಇದು ಎನ್ನುವುದು ಸುಳ್ಳು. ಎಲ್ಲೋ ಒಂಥರಾ ಫೀಲ್‌ ಆಗುತ್ತದೆ. ನಾವೆಲ್ಲೋ ಮೊದಲು ಯಾರದೋ ಟ್ರೋಲ್‌ ನೋಡಿ ನಕ್ಕಿದ್ದೇವೆ. ಈಗ ನಮಗೆ ಆದಾಗ ಅವರಿಗೂ ಇದೇ ರೀತಿ ಆಗಿರುತ್ತದೆ ಅಂತಾ ಅನಿಸಿತು. ಟ್ರೋಲ್‌ ಮಾಡುವವರು ಅವರ ಕುಟುಂಬಸ್ಥರಿಗೆ ಟ್ರೋಲ್‌ ಮಾಡಿದಾಗ ಹೇಗೆ ಆಗುತ್ತದೆ ಎನ್ನುವುದು ತಿಳಿದುಕೊಳ್ಳಬೇಕು' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+