Bigg Boss: ರೆಸಾರ್ಟ್ ಆದ ಬಿಗ್‌ಬಾಸ್ ಮನೆ: ರಜತ್ ವಿರುದ್ಧ ಸೇಡು ತೀರಿಸಿಕೊಂಡ ಚೈತ್ರಾ
ಬಿಗ್‌ಬಾಸ್ ಮನೆ ಪ್ರಸ್ತುತ ರೆಸಾರ್ಟ್ ಆಗಿ ಪರಿವರ್ತನೆಗೊಂಡಿದೆ. ಮನೆಯ ಎಲ್ಲಾ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ರೆಸಾರ್ಟ್‌ಗೆ ಬಂದ ತಂಡದ ಸದಸ್ಯರು ಹಾಗೂ ರೆಸಾರ್ಟ್‌ಗೆ ಬಂದ ಗ್ರಾಹಕರನ್ನು ನೋಡಿಕೊಳ್ಳುವ ಸದಸ್ಯರ ತಂಡವನ್ನು ಪ್ರತ್ಯೇಕವಾಗಿ ರಚನೆ ಮಾಡಲಾಗಿದೆ. ಈ ಎರಡೂ ತಂಡದ ಒಂದರಲ್ಲಿ ರಜತ್ ವೇಟರ್ ಆಗಿದ್ದು, ಚೈತ್ರಾ ರೆಸಾರ್ಟ್‌ಗೆ ಬಂದ ಗ್ರಾಹಕರಾಗಿದ್ದಾರೆ. ಬಿಗ್‌ಬಾಸ್‌ನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರಲ್ಲಿ ಚೈತ್ರಾ ಕುಂದಾಪುರ ಅವರು ರಜತ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ರಜತ್ ಕಿಶನ್ ಅವರದ್ದು ಒಂದು ಲೆಕ್ಕಾ ಅಂದರೆ ಚೈತ್ರಾ ಕುಂದಪುರ ಅವರದ್ದು ಮತ್ತೊಂದು ಲೆಕ್ಕಾ. ಇಂದು ವೈರಲ್ ಆದ ವೀಡಿಯೋದಲ್ಲಿ ರಜತ್ ವಿರುದ್ಧ ಚೈತ್ರಾ ಕುಂದಾಪುರ ಸೇಡು ತೀರಿಸಿಕೊಂಡಿದ್ದಾರೆ. ರಜತ್ ಅವರ ಮೇಲೆ ಚೈತ್ರಾ ಬ್ರೆಡ್ ಜಾಮ್ ಎಸೆದಿದ್ದಾರೆ. ಚೈತ್ರಾ ರಜತ್ ಮೇಲೆ ಜಾಮ್ ಎಸೆಯಲು ಕಾರಣ ಏನು?

ಇಂದು ಕಲರ್ಸ್ ಕನ್ನಡ ಎರಡು ವೀಡಿಯೋಗಳನ್ನು ಹಂಚಿಕೊಂಡಿದ್ದು ಒಂದು ವೀಡಿಯೋದಲ್ಲಿ ಚೈತ್ರಾ ಕುಂದಾಪುರ ಅವರ ಮೇಲೆ ರಜತ್ ಕಿಚನ್ ಕ್ಲೀನ್ ಮಾಡುವಾಗ ಇದ್ದ ಗಲೀಜನ್ನು ಎಸೆಯುತ್ತಾರೆ. ಇದರಿಂದ ಬೇಸರಗೊಂಡ ಚೈತ್ರಾ ರಾತ್ರಿ ಇಡೀ ಕಣ್ಣೀರು ಹಾಕಿ ದೇವರ ಮುಂದೆ ಕುಳಿತುಕೊಂಡಿದ್ದರು.
ಟಿಶ್ಯೂ ಪೇಪರ್‌ನಲ್ಲಿ ಏನೋ ಒಂದು ವಿಚಾರ ಬರೆದು ಬಿಗ್‌ಬಾಸ್ ಮನೆಯ ದೇವರ ಎರಡು ಕೈಗಳ ಮೇಲೆ ಇಟ್ಟು ಬೇಡಿಕೊಳ್ಳುತ್ತಾರೆ. ನಂತರ ಎಡ ಭಾಗದ ಟಿಶ್ಯೂ ಪೇಪರ್ ಕೆಳಗೆ ಬೀಳುತ್ತದೆ. ಇದರ ಸೂಚನೆ ಏನಾಗಿತ್ತು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಜೊತೆಗೆ ರಜತ್ ತಮ್ಮೊಂದಿಗೆ ನಡೆದುಕೊಂಡ ರೀತಿ ಚೈತ್ರಾ ಅವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಇದಕ್ಕೆ ಉತ್ತರ ನೀಡಲು ಚೈತ್ರಾ ಒಂದೊಳ್ಲೆ ಸಮಯವನ್ನು ಕಾಯುತ್ತಿದ್ದರು. ಆ ಸಮಯ ತುಂಬಾ ದೂರವಿರಲಿಲ್ಲ. ಬಿಗ್‌ಬಾಸ್ ನೀಡಿದ ಟಾಸ್ಕ್‌ನಲ್ಲೇ ರಜತ್ ಅವರ ಮೇಲೆ ಚೈತ್ರಾ ಸೇಡು ತಿರಿಸಿಕೊಂಡಿದ್ದಾರೆ.
ಹೌದು... ಇಂದು ಬಿಡುಗಡೆಯಾದ ಮತ್ತೊಂದು ವೀಡಿಯೋದಲ್ಲಿ ರಜತ್ ಅವರ ಮುಖಕ್ಕೆ ಚೈತ್ರಾ ಬ್ರೆಡ್ ಜಾಮ್ ಅನ್ನು ಹಚ್ಚುತ್ತಾರೆ. ಬಿಗ್‌ಬಾಸ್ ಮನೆಯ ಸದಸ್ಯರ ಒಂದು ತಂಡದಲ್ಲಿ ಇದ್ದ ರಜತ್ ವೇಟರ್ ಆಗಿರುತ್ತಾರೆ, ಮತ್ತೊಂದು ತಂಡದಲ್ಲಿ ಇದ್ದ ಗ್ರಾಹಕರಾಗಿರುತ್ತಾರೆ. ರೆಸಾರ್ಟ್‌ಗೆ ಗ್ರಾಹಕರಾಗಿ ಬಂದ ಚೈತ್ರಾ ಹಾಗೂ ತಂಡದ ಇತರ ಸದಸ್ಯರು ರೆಸಾರ್ಟ್‌ನಲ್ಲಿ ವೇಟರ್ ಆಗಿರುವ ತಂಡ ಹಾಗೂ ಮ್ಯಾನೇಜರ್ ಮೇಲೆ ದಬ್ಬಾಳಿಕೆ ಮಾಡಬೇಕು. ಇದು ಬಿಗ್‌ಬಾಸ್ ನೀಡಿದ ಟಾಸ್ಕ್ ಆಗಿದೆ.
ಈ ಟಾಸ್ಕ್ ಹೇಗಿತ್ತು ಅಂದರೆ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದೂ ಕೂಡ ಅದೇ ಅಂದಹಾಗೆ ಇತ್ತು. ಚೈತ್ರಾ ಅವರು ರಜತ್ ವಿರುದ್ಧ ಈ ಟಾಸ್ಕ್‌ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ. 'ನಿಮಗೆ ಬ್ರೆಡ್ ಜಾಮ್ ತಯಾರಿಸಲು ಬರಲ್ವಾ' ರಜತ್ ಮೇಲೆ ಕೂಗಾಡಿದ ಚೈತ್ರಾ ಅವರ ಮೇಲೆ ಜಾಮ್ ಅನ್ನು ಎಸೆದಿದ್ದಾರೆ. ಇದರಿಂದಾಗಿ ಚೈತ್ರಾ ನಿರಾಳರಾಗಿದ್ದಾರೆ.
ಒಟ್ಟಿನಲ್ಲಿ ಇಂದಿನ ವೀಡಿಯೋ ಬಿಗ್‌ಬಾಸ್ ವೀಕ್ಷಕರಿಗೆ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಚೈತ್ರಾ ಅವರ ಪ್ರಾರ್ಥನೆ, ದೇವರು ಕೊಟ್ಟ ಉತ್ತರ, ರಜತ್ ಮೇಲಿನ ಸೇಡು ಎಲ್ಲವೂ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ. ಜೊತೆಗೆ ಚೈತ್ರಾ ಅವರಿಗೆ ದೇವರ ಕೊಟ್ಟ ವರದ ಬಗ್ಗೆ ಈ ವಾರದ ಕತೆಯಲ್ಲಿ ಕಿಚ್ಚ ಪ್ರಸ್ತಾಪ ಮಾಡುವುದು ಕೂಡ ಪಕ್ಕಾ ಗ್ಯಾರಂಟಿ.












Click it and Unblock the Notifications