Bigg Boss: ಜಾತಿ ಮೀಸಲಾತಿ ಕಾರಣಕ್ಕೆ ಹನುಮಂತನಿಗೆ ಬೆಂಬಲವೇ? ಹಂಸಳ ಹೇಳಿಕೆಗೆ ವ್ಯಾಪಕ ಆಕ್ರೋಶ

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ ಹನುಮಂತ ಒಬ್ಬ ಹಳ್ಳಿ ಹುಡುಗ. ಹನುಮಂತನ ಸರಳತೆ, ಮುಗ್ಧತೆಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ. ಆಟದಲ್ಲಿ ಘಟಾನುಘಟಿಗಳಿಗಿಂತ ಮುಂದು ಕುರಿಗಾಯಿ ಹನುಮಂತು. ಹಾಡು ಆಡಿದರೆ ಚಂದ ಮಾತನಾಡಿದರೆ ಅಂದ. ಹಳ್ಳಿ ಹುಡುಗನ ಕಾಮಿಡಿಗೆ ನಗದವರೇ ಬಿಗ್‌ಬಾಸ್‌ ಮನೆಯಲ್ಲಿ ಇಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಕೇಳುವ ಆ ಮಧುರ ದನಿಯನ್ನು ನಗಿಸಿದ ಈ ಮುಗ್ಧ ಹುಡುಗನ ಬಗ್ಗೆ ಕೇಳಬಾರದ ಮಾತು ಕೇಳಿ ಬಂದಿದೆ. ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಎಲಿಮಿನೇಟ್ ಆಗಿ ಹೊರ ಬಂದ ಹಂಸ ಅವರು ಹನುಮಂತನ ಬಗ್ಗೆ ಹೇಳಿದ ಮಾತು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಹೌದು... ಹಳೆದ ಸ್ಪರ್ಧಿ ಹಂಸ ಅವರು ಜಾತಿ ಮೀಸಲಾತಿ ಕಾರಣಕ್ಕೆ ಹನುಮಂತನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಅಷ್ಟೇ ಅಲ್ಲ ಮುಂದುರೆದು ಇನ್ನಷ್ಟು ವಿಚಾರಗಳನ್ನು ಮಾತನಾಡಿದ ಹಂಸ 'ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿದ್ದಾಗ ಜನರಲ್ ಕೆಟಗರಿಯವರು ಎಂದು ಎಷ್ಟೇ ಓದಿ ದಬಾಕಿದ್ರುನು ಕಡೆಗಣಿಸುತ್ತಾರೆ. ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ' ಎಂದು ಹಂಸ ಒಂದು ಹೆಜ್ಜೆ ಮುಂದು ಹೋಗಿ ಮಾತನಾಡಿದ್ದಾರೆ. ಇಲ್ಲಿ ಹಂಸ ಹನುಮಂತ ಒಬ್ಬ ದಲಿತ ಹೀಗಾಗಿ ಆತನಿಗೆ ಬೆಂಬಲ ಹೆಚ್ಚಾಗಿದೆ ಎಂದು ನೇರವಾಗಿ ಹೇಳಿದಂತಿದೆ. ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಂಸ ಆಡಿದ ಮಾತನ್ನ ವಾಪಸ್ ಪಡೆಯಬೇಕು, ಹನುಮಂತನಿಗೆ ಕ್ಷಮೆ ಕೇಳಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

bigg boss hanumantha is a dalit so that people supported him- old contestant hamsalas statement

ಹನುಮಂತನಿಗೆ ಬೆಂಬಲ- ಜಾತಿ ಪಟ್ಟ ಕಟ್ಟಿದ ಹಂಸ

'ಹಂಸ ಅವರ ತಲೆಯಲ್ಲಿ ಜಾತಿಯ ವಿಷ ತುಂಬಿದೆ. ಬಡವರ ಕುರಿತಾದ ಅಸಹನೆ, ಹಳ್ಳಿಗಾಡಿನ ಜನರ ಕುರಿತ ಹೊಟ್ಟೆ ಉರಿ ಎಲ್ಲ ಹೊರಗೆ ಬಂದಿದೆ. ತಾವೂ ಒಂದಲ್ಲ ಒಂದು ಬಗೆಯ ಮೀಸಲಾತಿಯ (ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗ) ಫಲಾನುಭವಿ ಆಗಿದ್ದರೂ ದಲಿತರಿಗೆ ಕೊಡಲಾಗುವ ಮೀಸಲಾತಿಯ ಕುರಿತು ಅಸಹನೆಯಿಂದ ನರಳುವ ಹಿಪೋಕ್ರಾಟ್ ಜನವರ್ಗದ ಕೊಳಕು ಹಂಸಳ ಮಾತಲ್ಲಿ ಪ್ರತಿಧ್ವನಿಸಿದೆ. ಇದು ಒಂಟಿ ಧ್ವನಿ ಅಲ್ಲ, ಇವರಂತೆ ಮಾತಾಡುವ ಒಂದು ದೊಡ್ಡ ಜನವರ್ಗವೇ ಇದೆ. ಹಂಸ ಅವರ ಪ್ರತಿನಿಧಿಯಂತೆ ಮಾತಾಡಿದ್ದಾರೆ' ಎಂದು ಜನ ಸೋಶಿಯಲ್ ಮೀಡಿಯಾದಲ್ಲಿ ಉಗಿದಿದ್ದಾರೆ.

ಹನುಮಂತ ದಲಿತ ಸಮುದಾಯದ ಹುಡುಗ. ಆದರೆ ಆತ ಈ ಶೋಗೆ ಕರೆದುಕೊಂಡು ಬನ್ನಿ ಅಂತಾ ಯಾರ ಬಳಿ ಹೋಗಿ ಅಂಗಲಾಚಿರಲಿಲ್ಲ. ಹನುಮಂತನಿಗೆ ಈ ಶೋ ಹೇಗೆ ನಡೆಯುತ್ತದೆ ಎಂದೂ ಸಹ ಗೊತ್ತಿಲ್ಲ. ಬಿದ್ದು ಹೋದ ಟಿಆರ್‌ಪಿ ಮತ್ತೆ ತರಲು ಹನುಮಂತನನ್ನು ಕರೆದುಕೊಂಡು ಬಂದರು.

ಹನುಮಂತ ದಲಿತ ಹೀಗಾಗಿ ಬೆಂಬಲ ಹೆಚ್ಚಾಗಿದೆ- ಹಂಸ

ಬಿಗ್‌ಬಾಸ್‌ ಮನೆಗೆ ಬರುವಾಗ ಹನುಮಂತ ಯಾವುದೇ ಥಳುಕು ಬಳುಕು ತಂದಿಲ್ಲ. ಯಾರೊಂದಿಗೂ ಜಗಳಕ್ಕೆ ಹೋಗಿಲ್ಲ, ಯಾರ ನಡುವೆ ಜಗಳ ತಂದಿಲ್ಲ, ಯಾರನ್ನೂ ದ್ವೇಷಿಸಿಲ್ಲ, ಕ್ಯಾಮಾರಾ ನೋಡಿ ಡ್ರಾಮಾ ಮಾಡಿಲ್ಲ. ಹನುಮಂತನ ಒಳ್ಳೆಯತ ಆತನನ್ನು ಗೆಲ್ಲಿಸುತ್ತಿದೆ. ಇದನ್ನು ಸಹಿಸದ ಜನ ಜಾತಿ ಪಟ್ಟ ಕಟ್ಟಲು ಶುರು ಮಾಡಿದ್ದಾರೆ. ಆತನ ನೇರ ನುಡಿ ಸಹಿಸದ ಜನ ಜಾತಿ ಬೆಂಕಿ ಹಚ್ಚುತ್ತಿದ್ದಾರೆ.

ಯಾರು ಏನೇ ಹೇಳಲಿ ಈ ಬಾರಿ ಬಿಗ್‌ಬಾಸ್‌ ಶೋ ಗೆಲ್ಲೋದು ಹನುಮಂತನೇ. ಯಾಕೆಂದರೆ ಕಲರ್ಸ್‌ ಪೇಜ್‌ನಲ್ಲಿ ಬಿಗ್‌ಬಾಸ್‌ ಪೋಸ್ಟ್‌ಗಳ ಮೇಲೆ ಬೀಳೋ ನೂರು ಕಾಮೆಂಟ್‌ಗಳಲ್ಲಿ ಕನಿಷ್ಠ ಅರವತ್ತು ಹನುಮಂತು ವಿನ್ನರ್ ಎನ್ನುತ್ತವೆ. ಬೇರೆ ಬೇರೆ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಮ್ಯಾಚ್‌ ಫಿಕ್ಸಿಂಗ್ ಥರ ಏನಾದರೂ ಆಗದೇ ಇದ್ದರೆ ಈ ಬಾರಿ ಹನುಮಂತ ಗೆಲ್ಲೋದು ಗ್ಯಾರಂಟಿ.

ಇದು ಹಂಸ ಅವರಿಗೆ ಸಹಿಸಲು ಆಗುತ್ತಿಲ್ಲ. ಹನುಮಂತ ದಲಿತ ಅನ್ನೋ ಕಾರಣಕ್ಕೆ ತನ್ನ ಜನರಲ್ ಕೆಟಗರಿ ನೆನಪಿಗೆ ಬಂದಿದೆ. ಅದರ ಜೊತೆ ಜಾತಿ ಅಸಹನೆಯ ವಿಷವೂ ಕೂಡ ಹೊರಗೆ ಬಂದಿದೆ. ಇದಕ್ಕೆ ಜನ ಉತ್ತರ ಕೊಡುತ್ತಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಹಂಸ ಭಾಗವಹಿಸಿದ್ದರೆ ಉತ್ತರ ಪಕ್ಕಾ ಸಿಕ್ಕೇಸಿಗುತ್ತೆ ಎಂದು ಜನ ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+