Bigg Boss: ಬಿಗ್‌ಬಾಸ್‌ಗೆ ಹನುಮಂತ ಕೊಟ್ಟ 3 ಸಲಹೆ ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಪ್ರೇಕ್ಷಕರು..!
ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಕಳೆದ ದಿನ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳನ್ನು ರಂಜಿಸಿದರು. ಸೃಜನ್ ಮಾತಿನ ಪಟಾಕಿಗೆ ಮನೆಯ ಸದಸ್ಯರು ಬಿದ್ದು ಬಿದ್ದು ನಗಾಡಿದ್ದಾರೆ. ಸ್ಪರ್ಧಿಗಳ ಕಾಲೆಳೆಯುತ್ತಾ, ಕಾಮಿಡಿ ಮಾಡುತ್ತಾ ಸೃಜನ್ ಕೆಲ ಹೊತ್ತು ದೊಡ್ಮನೆಯಲ್ಲಿ ಕಾಲ ಕಳೆದರು. ಈ ವೇಳೆ ಕೆಲ ಆಟಗಳನ್ನು ಸೃಜನ್ ಆಡಿಸಿದರು. ಆಟದಲ್ಲಿ ಹಳ್ಳಿ ಹನುಮಂತ ಬಿಗ್‌ಬಾಸ್‌ಗೆ ಮೂರು ಸಲಹೆಗಳನ್ನು ಕೊಟ್ಟಿದ್ದಾರೆ. ಅದನ್ನು ಕೇಳಿ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.
ಹೌದು... ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮೂರನೇ ವಾರ ಲಾಯರ್ ಜಗದೀಶ್ ಹಾಗೂ ರಂಜಿತ್ ಕುಮಾರ್ ಎಲಿಮಿನೆಟ್ ಆಗುತ್ತಿದ್ದಂತೆ ಗಾಯಕ ಹನುಮಂತ ಲಮಾಣಿ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಹನುಮಂತ ಉತ್ತಮ ಗಾಯಕ. ಕಳೆದ ದಿನ ಎಪಿಸೋಡ್‌ನಲ್ಲಿ ಸೃಜನ್ ಲೋಕೇಶ್ ಹನುಮಂತಗೆ ಒಂದು ಆಟ ಆಡಿಸುತ್ತಾರೆ. ಈ ಆಟದಲ್ಲಿ ಸೃಜನ್ ಕೇಳುವ ಪ್ರಶ್ನೆಗೆ ಹತ್ತು ಸೆಕೆಂಡ್‌ಗಳಲ್ಲಿ ಉತ್ತರ ಕೊಡಬೇಕು.

ಹೀಗೆ ಸೃಜಾ ಹನುಮಂತುಗೆ ಕೇಳಿದ ಪ್ರಶ್ನೆ ಅಂದರೆ- ಬಿಗ್‌ಬಾಸ್‌ಗೆ ನೀವು ಕೊಡುವ ಮೂರು ಸಲಹೆಗಳು ಯಾವುವು? ಇದಕ್ಕೆ ಹನುಮಂತ ಹೇಳಿದ ಉತ್ತರ ಬಿಗ್‌ಬಾಸ್ ಪ್ರೇಕ್ಷಕರನ್ನ ಸಿಕ್ಕಾಪಟ್ಟೆ ನಗಿಸಿದೆ. ಅಷ್ಟಕ್ಕೂ ಹನುಮಂತ ಸೃಜಾ ಕೇಳಿದ ಪ್ರಶ್ನೆಗೆ ಹತ್ತು ಸೆಕೆಂಡ್‌ಗಳಲ್ಲಿ ಉತ್ತರ ನೀಡಲಿಲ್ಲ. ಮೂರು ಸಲಹೆಗಳಲ್ಲಿ ಎರಡು ಸಲಹೆಗಳನ್ನು ಮಾತ್ರ ಕೊಟ್ಟರು. ಬಳಿಕ ಸೃಜಾ ಮತ್ತೊಮ್ಮೆ ಹೇಳಲು ಕೇಳಿದಾಗ ಹನುಮಂತ ಬಿಗ್‌ಬಾಸ್‌ಗೆ ಮೂರು ಸಲಹೆಗಳನ್ನು ಕೊಟ್ಟಿದ್ದಾರೆ. ಹಾಗಾದರೆ ಹನುಮಂತ ಕೊಟ್ಟ ಆ ಮೂರು ಸಲಹೆಗಳು ಯಾವುವು ಗೊತ್ತಾ? ಕೆಳಗಿದೆ ಓದಿ...
1. ಬಿಗ್‌ಬಾಸ್ ಬೇಗ ಬೇಗ ಮಾತನಾಡಬೇಕು
2. ಅವರನ್ನು ನಾನು ಒಮ್ಮೆ ನೋಡಬೇಕು
3. ರಾತ್ರಿ ಹೊತ್ತು ಮಲಗಲು ಬೇಗ ಲೈಟ್ ಆಫ್ ಮಾಡಬೇಕು.
ಬಿಗ್‌ಬಾಸ್‌ಗೆ ಹನುಮಂತ ಕೊಟ್ಟ ಈ ಮೂರು ಸಲಹೆಗಳ ವಿವರಣೆಯನ್ನು ಸೃಜನ್ ಕೇಳುತ್ತಾರೆ. ಬಿಗ್‌ಬಾಸ್ ಹೇಗೆ ಮಾತನಾಡುತ್ತಾರೆ ತೋರಿಸು ಹಾಗೂ ಹೇಗೆ ಮಾತನಾಡಬೇಕು ಅಂತನೂ ಹೇಳಿ ಕೊಡು ಅಂತ ಸೃಜನ್ ಕೇಳುತ್ತಾರೆ. ಆಗ ಹನುಮಂತ ಬಿಗ್‌ಬಾಸ್ ಹೇಗೆ ಮಾತನಾಡುತ್ತಾರೆಮದು ತೋರಿಸುತ್ತಾರೆ.

''ಹನುಮಂತ..... ಈ ವಾರ... ನೀವು... ಬಿಗ್‌ಬಾಸ್ ಮನೆಯಲ್ಲಿ..... ನಾಮಿನೇಷನ್ ಮಾಡುವ.... ಇಬ್ಬರು ಸದಸ್ಯರ ಹೆಸರಗಳನ್ನು... ಸೂಕ್ತ ಕಾರಣಗಳಿಂದ ತಿಳಿಸಿ....'' ಇದನ್ನ ಬೇಗ ಬೇಗ ಹೇಳಿದರೆ ಆಗೋಗುತ್ತೆ. ಹನುಮಂತ ಈ ವಾರ ಯಾರನ್ನ ತೆಗೆಬೇಕು ಅಂತ ಮನಸ್ಸಲ್ಲಿದೆ ಹೇಳು ಅಂದ್ರಾಯ್ತು. ಇದೊಂದು ವಾಕ್ಯ ಹೇಳೋಕ ಭಾಳ್ ಟೈಮ್ ತೊಗೋತಾರೀ... ಮಾತಾಡುವಾಗ ಬೇಗ ಬೇಗ ಮಾತನಾಡಬೇಕ್ರಿ ಅಂತ ಮುಗ್ದತೆಯಲ್ಲಿ ಹನುಮಂತ ಬಿಗ್‌ಬಾಸ್‌ಗೆ ಸಲಹೆ ನೀಡಿದ್ದಾರೆ. ಇದನ್ನು ಕೇಳಿ ಬಿಗ್‌ಬಾಸ್ ಮನೆಯ ಇನ್ನಿತರ ಸದಸ್ಯರು ಹಾಗೂ ಪ್ರೇಕ್ಷಕರೂ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.
ರಾತ್ರಿ ಹೊತ್ತು ನಿದ್ದೆ ಬರಲ್ಲ. ಚಳಿಗೆ ಹಗಲಲ್ಲೇ ನಿದ್ದೆ ಬರುತ್ತೆ. ಹೀಗಾಗಿ ಬಿಗ್‌ಬಾಸ್ ಲೈಟ್ ಬೇಗ ಆಫ್ ಮಾಡ್ಬೇಕ್ರಿ. ಬೇಗ ಲೈಟ್ ಆಫ್ ಮಾಡಿದರೆ ಬೇಗ ಮಲ್ಕೊಂಡು ಎದ್ದೆಳ್ಬಹುದ್ರಿ ಅಂತ ಹುನುಮಂತ ಬಿಗ್‌ಬಾಸ್‌ಗೆ ಸಲಹೆ ಕೊಟ್ಟಿದ್ದಾರೆ.
ಇದರೊಂದಿಗೆ ಹನುಮಂತು ಬಿಗ್‌ಬಾಸ್ ಅವರನ್ನು ನೋಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ತಾವು ಒಮ್ಮೆ ಬಿಗ್‌ಬಾಸ್ ಅನ್ನು ನೋಡಬೇಕು ಅಂತ ಈ ವೇಳೆ ಹೇಳಿದ್ದಾರೆ. ಹೀಗೆ ಬಿಗ್‌ಬಾಸ್ ಇತಿಹಾಸದಲ್ಲಿ ಒಬ್ಬ ಸ್ಪರ್ಧಿ ಬಿಗ್‌ಬಾಸ್‌ಗೆ ಸಲಹೆ ನೀಡಿದ್ದು ಇದೇ ಮೊದಲು. ಹೀಗಾಗಿ ಹನುಮಂತ ನೀಡಿದ ಸಲಹೆಗಳನ್ನು ಬಿಗ್‌ಬಾಸ್ ಸ್ವೀಕಾರ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications