Bigg Boss: ಹನುಮಂತನ ಗೆಲುವಿಗಾಗಿ ಪೂಜೆ ಮಾಡಿದ ಮಹಾ ತಾಯಿ
ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಕೇವಲ ಎರಡೇ ವಾರದಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಲಿದೆ. ಈ ಬಾರಿ ಗೆಲುವಿಗಾಗಿ ಗಲಾಟೆ, ಹೊಡೆದಾಟ, ಕೋಪ, ಮನಸ್ತಾಪ ಮಾಡಿಕೊಳ್ಳದವರೇ ಬಿಗ್‌ಬಾಸ್ ಮನೆಯಲ್ಲಿ ಇಲ್ಲ. ಆದರೆ ಸರಳ ಸ್ಪರ್ಧಿ ಹನುಮಂತ ಯಾರ ಗೋಜಿಗೂ ಹೋಗದೆ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ಇವರ ಆಟದ ಶೈಲಿಗೆ ಇಡೀ ಕರುನಾಡ ಜನತೆ ಮೆಚ್ಚುಗೆ ಸೂಚಿಸುತ್ತಿದೆ. ಇದಕ್ಕಾಗಿ ಹನುಮಂತನೇ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಗೆಲ್ಲಬೇಕು ಎಂದು ಜನ ಪೂಜೆ ಮಾಡುತ್ತಿದ್ದಾರೆ. ಒಬ್ಬ ತಾಯಿ ಹನುಮಂತನ ಗೆಲುವಿಗಾಗಿ ಆತನದ ಫೋಟೋ ಇರುವ ಫ್ಲೆಕ್ಸ್‌ಗೆ ಪೂಜೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಿಗ್‌ಬಾಸ್ ಮನೆಯಲ್ಲಿ ಹನುಮಂತನ ಹವಾ ಜೋರಾಗಿದೆ. ಹನುಮಂತನ ಹಾಡು ಚಂದು ಮಾತು ಮಧುರ. ಅಸೂಯೆ, ದ್ವೇಷ, ಕೋಪ, ಮನಸ್ತಾಪ ಇದ್ಯಾವುದು ಕೂಡ ಈ ಹಳ್ಳಿ ಹೈದನಲ್ಲಿ ಇಲ್ಲವೇ ಇಲ್ಲ. ಬಿಗ್‌ಬಾಸ್ ಮನೆಯಲ್ಲಿ ಹೇಗಿರಬೇಕು? ಹೇಗೆ ಆಡಬೇಕು? ಯಾವಾಗ ಮಾತನಾಡಬೇಕು? ಯಾವಾಗ ಮೌನವಾಗಿರಬೇಕು? ಏನು ಮಾಡಿದರೆ ಚಂದ? ಹೇಗೆ ಇದ್ದರೆ ಅಂದ? ಎಲ್ಲವೂ ಕೂಡ ಹನುಮಂತನಿಗೆ ಗೊತ್ತು.

ಅಪ್ಪಟ ಬಂಗಾರ ಹನುಮಂತ
ತುಂಬಾ ಸರಳವಾಗಿ ಇರುವ ಶುದ್ಧ ಚಿನ್ನ ಹನುಮಂತ. ಈ ಹಳ್ಳಿ ಬಂಗಾರವನ್ನು ಗೆಲ್ಲಿಸಿ, ಬಡ ಮಕ್ಕಳು ಮುಂದೆ ಬರಲು ಸಹಾಯ ಮಾಡಬೇಕು ಎಂದು ಬಿಗ್‌ಬಾಸ್ ವೀಕ್ಷಕರು ಹೇಳುತ್ತಿದ್ದಾರೆ. ಜೊತೆಗೆ ಓಟ್ ಫಾರ್ ಹನುಮಂತ ಅಭಿಯಾನವನ್ನೂ ಶುರು ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿ ಪೂಜೆ ಕೂಡ ಮಾಡುತ್ತಿದ್ದಾರೆ. ಹನುಮಂತನ ಗೆಲುವಿಗಾಗಿ ಪೂಜೆ ಮಾಡುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದೆ.
ಹೌದು.... ಇದು ನಿಜಕ್ಕೂ ಸತ್ಯ, ಸರತೆ, ಮುದ್ಧ ಮನಸ್ಸಿಗೆ ಹಿಡಿದ ಕೈಗನ್ನಡಿ ಅಂದರೆ ತಪ್ಪಾಗುವುದಿಲ್ಲ. ಹನುಮಂತ ಹಣ ಬಂತು ಅಂತ ಬದಲಾಗಿಲ್ಲ. ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತೇನೆ ಅಂತ ಬಣ್ಣ ಬದಲಾಯಿಸಿಲ್ಲ. ಹನುಮಂತನದ್ದು ಒಂದೇ ಮಾತು ಒಂದೇ ರೀತಿಯ ನಡೆ. ಬಿಗ್‌ಬಾಸ್ ಮನೆಯಲ್ಲಿ ಇರುವಷ್ಟು ದಿನ ಹನುಮಂತನಿಂದ ಒಂದೇ ಒಂದು ಸಣ್ಣ ತಪ್ಪು ಆಗಿರಬಹುದು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಆತ ತಪ್ಪು ಮಾಡೇ ಇಲ್ಲ. ಯಾರ ಮನಸ್ಸಿಗೂ ಬೇಸರವಾಗುವಂತೆ ನಡೆದುಕೊಂಡಿಲ್ಲ. ಯಾರ ತಟ್ಟೆಗೂ ಹೋಗಿಲ್ಲ. ತಾನಾಯಿತು ತನ್ನ ಆಟ ಆಯ್ತು. ಆಟದಲ್ಲಿ ಗೆಲ್ಲಬೇಕು ಅನ್ನೋ ಗುರಿ ಬಿಟ್ಟರೆ ಹನುಮಂತನಿಗೆ ಹಾಡು, ಸ್ನೇಹವೇ ಬಿಗ್‌ಬಾಸ್ ಮನೆಯಲ್ಲಿ ಶಕ್ತಿ.
ಹಾಡು, ಕಾಮಿಡಿ, ಸ್ನೇಹ ಹನುಮಂತನಿಗೆ ಶಕ್ತಿ
ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ಕಾಮಿಡಿ ಮಾಡುತ್ತಾ ಬಿಗ್‌ಬಾಸ್ ನನ್ನೇ ನಗಿಸಿದ ಹಳ್ಳಿ ಹೈದ ಹನುಮಂತ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಹನುಮಂತ ಗೆಲ್ಲಬೇಕು ಹನುಮಂತ ಗೆಲ್ಲಬೇಕು ಅನ್ನೋ ಮಾತು ಕೇಳಿ ಬರುತ್ತಿವೆ. ಅಲ್ಲದೆ ಸಣ್ಣ ಮಕ್ಕಳು ಹಾಗೂ ಯುವ ಜನ ಹನುಮಂತನ ಗೆಲುವಿಗಾಗಿ ರೀಲ್ಸ್ ಕೂಡ ಮಾಡಲು ಶುರು ಮಾಡಿದ್ದಾರೆ.

ದೊಡ್ಡ ಮನೆಯಲ್ಲಿ ದೊಡ್ಡ ಮನಸ್ಸಿನ ಈ ವ್ಯಕ್ತಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಮೆಚ್ಚುಗೆ ಸಿಗುತ್ತಿದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹಾಗೂ ಬೀದಿಗಳಲ್ಲಿ ಹನುಮಂತನ ಫೋಟೋ ಬ್ಯಾನರ್‌ಗಳಿಗೆ ಹಾರ ಹಾಕಿ ಅವರ ಗೆಲುವಿಗಾಗಿ ಜನ ಪೂಜೆ ಮಾಡುತ್ತಿದ್ದಾರೆ. ಇನ್ನೂ ಹನುಮಂತನ 'ಹುಡುಗಿ..' ಹಾಡುಗಳು ಸಾಕಷ್ಟು ವೈರಲ್ ಆಗಿವೆ. ಬಿಗ್‌ಬಾಸ್ ಮನೆಗೆ ಬಂದ ಬಳಿಕ ಅವರು ಹಾಡು ಮಾತ್ರವಲ್ಲದೆ ಕಾಮಿಡಿಯಲ್ಲೂ ಕೂಡ ಜನಮೆಚ್ಚುಗೆಯನ್ನು ಪಡೆದಿದ್ದಾರೆ. ಬಿಗ್‌ಬಾಸ್ ಜೊತೆಗೆ ಅವರು ಮಾತನಾಡಿದ ಒಂದಿಷ್ಟು ತರ್ಲೆ ಮಾತುಗಳು ಇಂದಿಗೂ ಜನರ ಬಾಯಲ್ಲಿ ಧ್ವನಿಸುತ್ತಿವೆ.
ಬಿಗ್‌ಬಾಸ್‌ನೊಂದಿಗೆ ಹನು ತರ್ಲೆ ಮಾತು:-
*ಬಿಗ್‌ಬಾಸ್ ನೀವು ರಾತ್ರಿ ಬೇಗ ಲೈಟ್ ಆಫ್ ಮಾಡಬೇಕ್ರಿ, ನಮ್ಗಾ ನಿದ್ದೆ ಹೊಂಟಿರುತ್ರಿ ಜಲ್ದಿ
*ಬಿಗ್‌ಬಾಸ್ ನೀವು ಬೇಗ ಬೇಗ ಮಾತಾಡ್ಬೇಕ್ರಿ, ನಿಧಾನ ಮಾತಾಡಿದ್ರಾ ಮುಂದ ಏನ್ ಹೇಳ್ತೀರಿ ಅನ್ನೋ ಭಯಾ ಆಗುತ್ರಿ ನಮ್ಗಾ..
*ಬಿಗ್‌ಬಾಸ್ ನೀವು ಬೇಗ ಬೇಗ ಟಾಸ್ಕ್ ಸಲಹೆ ನೀಡಬೇಕ್ರಿಪಾ, ಕಾಲ್ ನೋಯಿತಾವ್ ನಮ್ಗಾ ಅತ್ತಾಗ
*ಬಿಗ್‌ಬಾಸ್ ನೀವು ಸ್ವಲ್ಪ ಫಾಸ್ಟ್ ಆಗಬೇಕ್ರಿ
*ಬಿಗ್‌ಬಾಸ್ ನಿಮ್ಮನ್ನ ನಾನು ಒಮ್ಮೆನಾರಾ ನೋಡಬೇಕ್ರಿ, ಒಂದ್ ಸ್ವಲ್ಪ ಬಂದೋಗ್ರಿ
*ಬಿಗ್‌ಬಾಸ್ ಸ್ವಲ್ಪ ಬೇಗ ಕಳಿಸಿಕೊಡ್ರಿಪಾ, ನಮ್ಗಾ ಬೇಕಾಗೈತಿ ಇದು..
ಒಟ್ಟಿನಲ್ಲಿ ಹನುಮಂತನ ಹಾಡು ಚಂದ, ಕಾಮಿಡಿ ಮಾತು, ಆಟದ ಶೈಲಿ ಎಲ್ಲವೂ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಗಾಯಕ ಹನುಮಂತರ ಲಮಾಣಿ ಹಾಗೂ ರನ್ನರ್ ಅಪ್ ತ್ರಿವಿಕ್ರಮ್ ಎಂದು ಜನ ನಿರ್ಧರಿಸಿಬಿಟ್ಟಿದ್ದಾರೆ. ಆದರೆ ಫಲಿತಾಂಶ ಏನಾಗಿರಲಿದೆ ಅನ್ನೋದನ್ನು ಕಾದು ನೋಡಲೇಬೇಕು.












Click it and Unblock the Notifications