ಗಂಡ, ಮದುವೆ ಅಂದ್ರೆ ನನಗೆ ಆ ವಿಚಾರಕ್ಕೆ ಭಯ: ಕಾರಣ ತಿಳಿಸಿದ ಸೀರಿಯಲ್‌ ನಟಿ ಸಿರಿ

ಕನ್ನಡದ ಜನಪ್ರಿಯ ಧಾರಾವಾಗಿ "ರಂಗೋಲಿ" ಮೂಲಕ ಕರ್ನಾಟಕದ ಮನೆಮಾತಾಗಿದ್ದರು ಕಿರುತೆರೆ ನಟಿ ಸಿರಿ. ಇದಲ್ಲದೆ "ಮನೆಯೊಂದು ಮೂರು ಬಾಗಿಲು", "ಬದುಕು" ಧಾರಾವಾಹಿಗಳಲ್ಲೂ ಸಿರಿ ಮಿಂಚಿದ್ದರು. ಬಳಿಕ ಕೆಲ ವರ್ಷಗಳ ಕಾಲ ಸೈಲೆಂಟ್‌ ಆಗಿದ್ದ ಅವರು ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡಿದ್ದರು. ಬಿಗ್‌ ಬಾಸ್‌ ಕನ್ನಡ ಸೀಸನ್‌-10ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಅವರು 39ನೇ ವಯಸ್ಸಿಗೆ ಮದುವೆಯಾಗಿದ್ದರು. ಇತ್ತೀಚೆಗೆ ಈ ಬಗ್ಗೆ ಮಾತನಾಡಿರುವ ನಟಿ, ಮದುವೆ ಅಂದ್ರೆ ನನಗೆ ಭಯ ಇತ್ತು ಎಂದಿದ್ದಾರೆ. ಅದಕ್ಕೆ ಕಾರಣವೂ ತಿಳಿಸಿದ್ದಾರೆ.

ಸಿರಿ ಅವರ ಮದುವೆ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಜನ ಕೇಳುತ್ತಿದ್ದರು. ಮದುವೆ ಯಾವಾಗ? ಇನ್ನೂ ಯಾಕೆ ಮದುವೆ ಆಗಿಲ್ಲ? ಎಂದು ಹೋಗಿಬಂದಲ್ಲೆಲ್ಲ ಕೇಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಿರಿ, 'ಈಗೆಲ್ಲ ಇವತ್ತು ಇದ್ದೀವಾ? ಉಸಿರಾಡುತ್ತೀವಾ ಅನ್ನೋದಷ್ಟೇ ಗ್ಯಾರಂಟಿ. ನನ್ನ ಪತಿ ಪ್ರಭಾಕರ್‌ ಅವರ ಬಗ್ಗೆ ನನಗೆ ಬಹಳ ಗೌರವ ಇದೆ. ಅವರಿಗೂ ಅದೇ ಭಾವನೆ ಇದೆ. ನಮ್ಮಿಬ್ಬರ ಹೊಂದಾಣಿಕೆ ಚೆನ್ನಾಗಿದೆ' ಎಂದಿದ್ದಾರೆ.

Bigg Boss Fame Siri Says I Was Scared Of Marriage And Husband Here Is Why

'ಮದುವೆ ಆದರೆ ಹೇಗಿರುತ್ತೋ? ಎನ್ನುವ ಭಯ ನನಗೆ ನಿಜವಾಗಿ ಇತ್ತು. ಅದಕ್ಕಿಂತ ಹೆಚ್ಚು ಭಯ ಇದ್ದಿದ್ದು ನನ್ನ ವೃತ್ತಿ ಮೇಲೆ. ನನ್ನ ಗಂಡನಾಗಿ ಬರುವವರು ನನ್ನ ವೃತ್ತಿಗೆ ಸಪೋರ್ಟ್‌ ಮಾಡ್ತಾರಾ ಅನ್ನೋದು ಕೂಡ ಇತ್ತು. ಹಾಗಾಗಿ ಬೇರೆ ಬೇರೆ ಪ್ರಪೋಸಲ್‌ಗಳು ಬರುತ್ತಿದ್ದಾಗಲೂ ಇದೇ ಪ್ರಶ್ನೆ ಬರುತ್ತಿತ್ತು. ಆದರೆ. ಪ್ರಭಾಕರ್‌ ಅವರ ವಿಚಾರಕ್ಕೆ ಬಂದಾಗ ಇವರು ಸ್ನೇಹಿತರಾಗಿಯೇ ನನಗೆ ತುಂಬಾ ಸಪೋರ್ಟ್‌ ಮಾಡ್ತಿದ್ರು' ಎಂದು ಸಿರಿ ಹೇಳಿದ್ದಾರೆ.

ಜಗಳ ಕಿತ್ತಾಟ ಇದ್ದೇ ಇರುತ್ತೆ

'ನಾನು ಬಿಗ್‌ಬಾಸ್‌ನಲ್ಲಿದ್ದಾಗಲೂ ನನ್ನ ಕುಟುಂಬದ ಜೊತೆ ಪ್ರಭಾಕರ್‌ ನಿಂತಿದ್ರು. ನಾವು 100 ಪರ್ಸೆಂಟ್‌ ಹೀಗೇ ಚೆನ್ನಾಗಿ ಇರ್ತೀವಿ, ಜಗಳ ಮಾಡಲ್ಲ ಎಂದು ಹೇಳೋಕಾಗಲ್ಲ. ಜಗಳ ಕಿತ್ತಾಟ ಇದ್ದೇ ಇರುತ್ತೆ, ಅದನ್ನ ದಾಟಿ ನಾವು ಹೇಗಿರುತ್ತೇವೆ ಅನ್ನೋದು ಮುಖ್ಯ ಆಗುತ್ತೆ. ಈಗ ಅವರು ಸಿಟ್ಟು ಮಾಡಿಕೊಂಡರೆ ನಾನು ಸುಮ್ಮನಾಗ್ತೀನಿ. ಏನೂ ಮಾತನಾಡಲ್ಲ, ಅವರಿಗೆ ಸ್ಪೇಸ್‌ ಕೊಡ್ತೀನಿ ಎಂದು ತಮ್ಮ ಬಾಂಡಿಂಗ್‌ ವಿವರಿಸಿದ್ದಾರೆ. ಆ ಹೊಂದಾಣಿಕೆ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೆ ಆ ಸಂಬಂಧವೂ ಗಟ್ಟಿಯಾಗಿರುತ್ತೆ. ನಾವಿಬ್ಬರೂ ಆ ಹೊಂದಾಣಿಕೆಯನ್ನ ಜೀವನವಿಡೀ ಇಟ್ಟುಕೊಳ್ಳಬೇಕು' ಎಂದಿದ್ದಾರೆ.

ಕಾಮೆಂಟ್‌ ಮಾಡೋರು ಕಷ್ಟಕ್ಕಾಗಲ್ಲ

'ನೆಗೆಟಿವ್‌ ಕಾಮೆಂಟ್‌ ಮಾಡುವವರ ಬಗ್ಗೆಯೂ ಮಾತನಾಡಿರುವ ಸಿರಿ, ಅವರು ಏನಾದರೂ ಹೇಳಲಿ. ಯಾರ ಲೈಫನ್ನೂ ಯಾರೂ ಬಂದು ಲೀಡ್‌ ಮಾಡೋಕಾಗಲ್ಲ. ನಿಮ್ಮ ಕಷ್ಟ-ಸುಖ, ಇಷ್ಟಗಳೇನು ಅನ್ನೋದು ನಿಮಗೆ ಮಾತ್ರವೇ ಗೊತ್ತಿರುತ್ತೆ. ಯಾರೋ ಏನೋ ಹೇಳ್ತಾರೆ ಅಂತ ನಿರ್ಧಾರಗಳನ್ನ ತೆಗೆದುಕೊಳ್ಳಲು ಆಗಲ್ಲ. ಹೇಳುವವರು ಸಾವಿರ ಹೇಳ್ತಾರೆ' ಎಂದು ಖಡಕ್‌ ತಿರುಗೇಟು ನೀಡಿದ್ದಾರೆ.

'ನನಗೆ ಯಾವಾಗ ಇಷ್ಟ ಆಗಿತ್ತೋ? ನನಗೆ ಯಾರು ಸರಿಯಾದ ವ್ಯಕ್ತಿ ಸಿಗ್ತಾರೋ ಆಗಲೇ ನಾನು ಮದುವೆ ಆಗೋದು ನನ್ನ ನಿರ್ಧಾರ. ಒಂದು ವೇಳೆ ಪ್ರಭಾಕರ್ ಸಿಗದೇ ಇದ್ದಿದ್ದರೆ ನಾನು ಮದುವೆ ಆಗದೆಯೇ ಇರುಬಹುದಿತ್ತು. ದಿನ ಮುಗಿದಾಗ ನೆಮ್ಮದಿಯಾಗಿ ಮಲಗಬೇಕು, ಟೆನ್ಷನ್‌ ಇರಬಾರದು. ಅದು ನನಗೆ ಇಷ್ಟವೂ ಆಗಲ್ಲ. ಕಾಮೆಂಟ್‌ಗಳು ಹಾಗೆಯೇ ಒಂದೆರಡು ಸಲ ಹೇಳಬಹುದು. ಅದನ್ನೇ ಮಾಡಿದರೆ ನಾನು ತಲೆಕೆಡಿಸಿಕೊಳ್ಳುವುದೇ ಇಲ್ಲ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+