Gold Suresh: ಆಸ್ಪತ್ರೆಯಲ್ಲಿ ಗೋಲ್ಡ್‌ ಸುರೇಶ್‌ ಆರೋಗ್ಯ ವಿಚಾರಿಸಿದ ಬಿಗ್ ಬಾಸ್‌ ಸ್ಪರ್ಧಿಗಳು

ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಸ್ಪರ್ಧಿ ಗೋಲ್ಡ್‌ ಸುರೇಶ್ ಕಾಲು ನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲಿಗೆ ಚೈತ್ರಾ ಕುಂದಾಪುರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸುರೇಶ್‌ ಅವರ ಆರೋಗ್ಯವನ್ನು ವಿಚಾರಣೆ ಮಾಡಿದ್ದರು. ಬಳಿಕ ಯಾರೆಲ್ಲಾ ಭೇಟಿ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಗೋಲ್ಡ್ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಬೆಟ್‌ ಮೇಲೆ ಮಲಗಿರುವ ಅವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದಾದ ಬಳಿಕವೇ ಇಡೀ ರಾಜ್ಯಕ್ಕೆ ಗೋಲ್ಡ್ ಸುರೇಶ್‌ ಅವರು ಆಸ್ಪತ್ರೆಗೆ ಸೇರಿದ್ದಾರೆ ಅಂತಾ.

Bigg Boss Contestants Visit Gold Suresh at Hospital

ಗೋಲ್ಡ್ ಸುರೇಶ್ ಅವರು ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ಗಳನ್ನು ಉತ್ತಮವಾಗಿ ಆಡುವ ಮೂಲಕ ಇಡೀ ರಾಜ್ಯದ ಜನರ ಮನ ಗೆದ್ದಿದ್ದರು. ಆದರೆ ಇದೀಗ ಅವರು ಆಸ್ಪತ್ರೆಯಲ್ಲಿ ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಟಾಸ್ಕ್‌ ಆಡುವಾಗಲೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಇನ್ನು ಕಾಲು ನೋವು ಹೆಚ್ಚಾಗಿದ್ದರಿಂದ ಸುರೇಶ್ ಅವರಿಗೆ ಸರ್ಜರಿ ಅಗತ್ಯವುದೆ ಎಂದು ವೈದ್ಯರು ಸೂಚನೇ ನೀಡಿದ್ದರು. ವೈದ್ಯರ ಸಲಹೆಯ ಮೇರೆಗೆ ಗೋಲ್ಡ್ ಸುರೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಅವರು ಎರಡು ದಿನಗಳ ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ನಿರೀಕ್ಷೆಯಿದೆ. ಬಳಿಕ ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಅವರಿಗೆ ಸಲಹೆ ನೀಡಿದ್ದಾರಂತೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಕೂಡ ಹಾರೈಸಿದ್ದಾರೆ. ಮತ್ತೊಂದೆಡೆ ಚೈತ್ರಾ ಕುಂದಾಪುರ ಬೆನ್ನಲ್ಲೇ ಐಶ್ವರ್ಯ ಸಿಂಧೋಗಿ, ತುಕಾಲಿ ಸಂತೋಷ್ ಹಾಗೂ ಮಾನಸ ತುಕಾಲಿ ಆಸ್ಪತ್ರೆಗೆ ಭೇಟಿ ಕೊಟ್ಟು ಗೋಲ್ಡ್ ಸುರೇಶ್ ಆರೋಗ್ಯ ವಿಚಾರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅವರು ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಕ್ಯಾಪ್ಟನ್ ಆಗಿ ಮನೆಯಲ್ಲಿ ಖುಷಿಯಾಗಿದ್ದ ಗೋಲ್ಡ್ ಸುರೇಶ್‌ ಅವರನ್ನು ಕಾರಣಾಂತರಗಳಿಂದ ಬಿಗ್‌ ಬಾಸ್‌ ಮನೆಯಿಂದ ದಿಢೀರ್ ಹೊರ ಕಳುಹಿಸಲಾಯಿತು. ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ ಎಂದು ಅನೌನ್ಸ್‌ ಮಾಡುವ ಮೂಲಕ ಅವನ್ನು ಹೊರಗಡೆ ಕಳುಹಿಸಲಾಗಿತ್ತು. ಆಗ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಹೊರ ಬಂದಿದ್ದರು.

ಎಲಿಮಿನೇಟ್​ ಆಗಿ ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗುವುದು ಬೇರೆ. ಆದರೆ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣದಿಂದ ಬಿಗ್ ಬಾಸ್​ ಮನೆಗೆ ವಿದಾಯ ಹೇಳುವುದು ನಿಜಕ್ಕೂ ಬೇಸರದ ಸಂಗತಿ. ಗೋಲ್ಡ್ ಸುರೇಶ್ ಅವರಿಗೆ ಈ ಪರಿಸ್ಥಿತಿ ಬಂದಿದೆ. ಚೆನ್ನಾಗಿ ಆಟ ಆಡುತ್ತಿರುವಾಗಲೇ ಅವರು ಬಿಗ್ ಬಾಸ್​ ಶೋನಿಂದ ಹೊರಗೆ ಬರಬೇಕಾಯಿತು. ಡಿಸೆಂಬರ್​ 16ರ ಸಂಚಿಕೆಯಲ್ಲಿ ಅವರು ದೊಡ್ಮನೆ ಬಿಟ್ಟು ಹೊರಬಂದಿದ್ದನ್ನು ತೋರಿಸಲಾಗಿತ್ತು.

ಸಾಮಾನ್ಯವಾಗಿ ಬಿಗ್ ಬಾಸ್ ಆಟದಿಂದ ಯಾರೇ ಎಲಿಮಿನೇಟ್​ ಆದರೂ ಅವರನ್ನು ವೇದಿಕೆಗೆ ಕರೆದು ಸುದೀಪ್​ ಮಾತನಾಡಿಸುತ್ತಾರೆ. ಆದರೆ ಈ ರೀತಿ ಅನಿವಾರ್ಯ ಕಾರಣಗಳಿಂದ ಮನೆ ಬಿಟ್ಟು ತೆರಳಬೇಕಾದ ಸಂದರ್ಭ ಬಂದರೆ ಆಗ ಕಿಚ್ಚ ಸುದೀಪ್ ಜೊತೆ ಮಾತನಾಡುವ ಅವಕಾಶ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಗೋಲ್ಡ್ ಸುರೇಶ್ ಸಹ ಅಂತಹ ಚಾನ್ಸ್ ಮಿಸ್​ ಮಾಡಿಕೊಂಡು ದೊಡ್ಮನೆಯಿಂದ ಹೊರಗೆ ಕಾಲಿಟ್ಟಿದ್ದರು.

ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಗೋಲ್ಡ್ ಸುರೇಶ್ ಅವರು ಕೂಡಲೇ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಬರಬೇಕೆಂದು ಬಿಗ್ ಬಾಸ್ ಆದೇಶ ನೀಡಿದರು. ಅವರಿಗೆ 77ನೇ ದಿನದಲ್ಲಿ ಎಲ್ಲರೂ ಭಾವುಕ ವಿದಾಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+