BIG BOSS: ಬಿಗ್ ಬಾಸ್ ಸೀಸನ್ 11ಕ್ಕೆ ತುಕಾಲಿ ಸಂತೋಷ್ ಪತ್ನಿ ಬರ್ಲೇಬೇಕು-ಇದು ಯಾರ ಒತ್ತಾಯ ಗೊತ್ತಾ?-ಮಾಹಿತಿ
ಕನ್ನಡ ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್ ಅತೀ ದೊಡ್ಡ ಶೋ ಆಗಿದೆ. ಈಗಾಗಲೇ 9 ಸೀಸನ್‌ಗಳು ಐಶಸ್ವಿಯಾಗಿ ಮುಕ್ತಯವಾಗಿದ್ದು, ಇವೆಲ್ಲಕ್ಕಿಂತ ಈ ಬಾರಿಯ ಸೀಸನ್ 10 ಮಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸೀಸನ್ ಫಿನಾಲೆಯ ಕೊನೆ ದಿನ ಇದಾಗಿದ್ದು, ಐದು ಜನರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಈಗಾಗಲೇ ನಿನ್ನೆಯಷ್ಟೇ (ಜನವರಿ 28) ತುಕಾಲಿ ಸಂತೋಷ್ ಮನೆಯಿಂದ ಹೊರಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ತುಕಾಲಿ ಸಂತೋಷ್ ಅವರ ಪತ್ನಿ 11ರ ಸೀಸನ್‌ಗೆ ಬರಲೇಬೇಕು ಎನ್ನುವ ಕೂಗುಗಳು ಎದ್ದಿವೆ.
ತುಕಾಲಿ ಸಂತೋಷ್ ಅವರು ಈಗಾಗಲೇ ಹೊರಗಡೆ ಹೋಗಿದ್ದು, ಇದೀಗ ಮನೆಯಲ್ಲಿ ಇನ್ನು ಟಾಪ್ 5 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಸಂಗೀತ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್, ಹಳ್ಳಿಕಾರ್ ಎಂದು ಹೆಸರುಚಾಸಿಯಾಗಿರುವ ವರ್ತೂರ್ ಸಂತೋಷ್, ಡ್ರೋನ್ ಪ್ರತಾಪ್ ಟಾಪ್ 5ರ ಪಟ್ಟಿಯಲ್ಲಿದ್ದಾರೆ. ಇನ್ನು ಇಂದು (ಜನವರಿ 29) ಇವರಲ್ಲಿ ಒಬ್ಬರು ಮಾತ್ರ ವಿನ್ನರ್ ಸ್ಪರ್ಧಿಯಾಗಲಿದ್ದಾರೆ.

ಬಿಗ್ ಬಾಸ್ ಮನೆಯಲ್ಲಂತೂ ತುಕಾಲಿ ಸಂತೋಷ್, ವರ್ತೂರ್ ಸಂತೋಷ್ ಸಂತೋಷ್ ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಒಂದೇ ಕುಟುಂಬದ ಅಣ್ಣ, ತಮ್ಮಂದಿರಂತೆ ಇದ್ದರು. ಇದೆಲ್ಲದ್ದಕ್ಕೂ ಮೀರಿ ಉತ್ತಮ ಸ್ನೇಹಿತರಾಗಿದ್ದರು. ಇನ್ನು ತನ್ನ ಕುಚುಕು ಈ ದೊಡ್ಡ ಮೆನೆಯಿಂದ ಹೊರಹೋದ ತಕ್ಷಣ ವರ್ತೂರ್ ಕಣ್ಣಲ್ಲಿ ಕಣ್ಣೀರನ ಸುರಿಮಳೆಯೇ ಹರಿದಿತ್ತು. ಇವರಿಬಬ್ಬರು ಬೀನ್‌ಬ್ಯಾಗ್ ಸ್ನೇಹಿತರಂತಲೇ ಫೇಮಸ್ ಆಗಿದ್ದರು.
ಇವರಿಬ್ಬರು ಬಿಗ್ ಬಾಗ್ ಸೀಸನ್ 10 ಮುಗಿಯುವ ಹಂತ ತಲುಪಿದ್ದರೂ ಕೂಡ ಬೀನ್ ಬ್ಯಾಗ್ ಬಿಟ್ಟು ಇರುತ್ತಿರಲಿಲ್ಲ. ಜೊತೆಗೆ ಮಾತನಾಡುತ್ತಾ ತಮ್ಮ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲೂ ತುಕಾಲಿ ಸಂತೋಷ್ ಅವರು ಇಷ್ಟು ದಿನಗಳ ಕಾಲ ಒಂದಲ್ಲ ಒಂದು ವಿಚಾರವನ್ನು ಇಟ್ಟುಕೊಂಡು ಕಾಮಿಡಿ ಮಾಡುತ್ತಾ ಮನೆಯಲ್ಲಿದ್ದವರನ್ನು ರಂಜಿಸುತ್ತಲೇ ಬಂದಿದ್ದಾರೆ.
ಹಾಗೆಯೇ ತುಕಾಲಿ ಸಂತೋಷ್‌ಗಿಂತಲೂ ಅವರ ಹೆಂಡತಿಯೇನು ಕಾಮಿಡಿ ಮಾಡುವುದರಲ್ಲಿ ಕಡಿಮೆಯಿಲ್ಲ ಎನ್ನುವ ಮಾತುಗಳು ಈಗಾಗಲೇ ಎಲ್ಲಡೆ ಕೇಳಿಬರುತ್ತಿವೆ. ಅಲ್ಲದೆ ನೆಟ್ಟಿಗಳು ಸೀಸನ್ 10ಕ್ಕೆ ತುಕಾಲಿ ಸಂತೋಷ್ ಅವರ ಪತ್ನಿ ಬರಲೇಬೇಕು. ಅವರು ಬಂದರೆ ಆ ಸೀಸನ್ ಕೂಡ ಅದ್ಭುತವಾಗಿ ಮೂಡಿಬುರುವುದಂತೂ ಖಂಡಿತ ಅಂತಾ ಹೇಳುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ಬಂದ ತುಕಾಲಿ ಸಂತೋಷ್ ಅವರ ಪತ್ನಿಯ ಮಾತುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದು, ಅವರು ಮುಂದಿನ ಸೀಸನ್‌ಗೆ ಮನೆಗೆ ಬರಬೇಕೆಂದು ನೆಟ್ಟಿಗರು ಬಯಸುತ್ತಿದ್ದಾರೆ. ತುಕಾಲಿ ಸಂತೋಷ್ ಅವರ ಪತ್ನಿ ಅವರದ್ದದ್ದು ನೇರ ಮಾತು, ನೇರ ನುಡಿ. ಅವರು ಎಲ್ಲದಕ್ಕೂ ಹಾಸ್ಯದ ಟಚ್ ಕೊಟ್ಟು ತುಂಬಾ ಸರಳವಾಗಿ ಮಾತನಾಡುತ್ತಾರೆ. ಇದೀಗ ಇದೇ ವಿಚಾರವಾಗಿ ಅವರು ಸ್ಪರ್ಧಿಯಾಗಿ ಬರಬೇಕೆಂಬುದು ನೆಟ್ಟಿಗರ ಒತ್ತಾಯವಾಗಿದೆ.
ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಅವರ ಡೈಲಾಗ್‌ಗಳು, ಕೆಲವೊಂದು ಕಾಮಿಡಿಗೆ ಜನರು ಫಿದಾ ಆಗಿಬಿಟ್ಟಿದ್ದಾರೆ. ವಿಶೇಷವಾಗಿ ಮಾತಿನ ಮಧ್ಯೆಯೇ ಸರಾಗವಾಗಿ ಕಾಮಿಡಿ ಮಾಡುತ್ತಲೇ ಇದ್ದಾರೆ ಅವರು. ಬಿಗ್‌ಬಾಸ್ 10 ಗ್ರ್ಯಾಂಡ್ ಫಿನಾಲೆ ಇಂದು ನಡೆಯಲಿದೆ. ಇಷ್ಟೇ ಅಲ್ಲದೆ 5 ಜನರಲ್ಲಿ ಕಿಚ್ಚ ಸುದೀಪ್ ಅವರು ಯಾರ ಕೈ ಮೇಲೆತ್ತಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.
ಇನ್ನು ಸಮಾಜಿಕ ಜಾಲತಾಣಗಲ್ಲಿ ಹರಿದುಬರುತ್ತಿರುವ ಕಾಮೆಂಟ್‌ಗಳನ್ನಯ ಗಮನಿಸಿದರೆ ಕಾರ್ತಿಕ್ ಅವರು ವಿನ್ನರ್, ಸಂಗೀತಾ ಅವರು ಫಸ್ಟ್ ರನ್ನರ್ ಅಪ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗ್ರಾಂಡ್ ಫಿನಾಲೆ ವೀಕ್ಷಣ ಮಾಡಲು ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿದೆ.












Click it and Unblock the Notifications