Get Updates
Get notified of breaking news, exclusive insights, and must-see stories!

ಪುನೀತ್‌ ದೊಡ್ಡ ಸ್ಟಾರ್‌ ಆದ್ರೂ ಆ ಕೆಲಸ ಮಾಡಿದ್ರು: ನಟಿ ಅನುಪಮಾ ಪರಮೇಶ್ವರನ್‌ ಹೇಳಿದ್ದೇನು?

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (ಅಪ್ಪು) ಅವರು ಸದ್ಯ ನಮ್ಮೊಂದಿಗೆ ಇಲ್ಲ. ಆದರೆ ಅಭಿಮಾನಿಗಳ ಹೃದಯದಲ್ಲಿ ನಗುವಿನ ಒಡೆಯನಾಗಿ ಜೀವಂತವಾಗಿದ್ದಾರೆ. ಇನ್ನು ಅಪ್ಪು ಅವರು ಸರಳತೆಯ ಸರದಾರ ಎಂದೂ ಕರೆಸಿಕೊಂಡಿದ್ದರು. ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್‌ ಅವರು ಪುನೀತ್‌ ಅವರ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಹಾಡುಗಳು ಇಂದಿಗೂ ಅಪ್ಪು ಅಭಿಮಾನಿಗಳ ಫೇವರೇಟ್‌. ಅಪ್ಪು ಅವರನ್ನು ಹತ್ತಿರದಿಂದ ಕಂಡಿದ್ದ ಅನುಪಮಾ ಅವರು ಅಚ್ಚರಿ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ. ದೊಡ್ಡ ಸ್ಟಾರ್‌ ಆಗಿದ್ದ ಅಪ್ಪು ಅವರು ಅದನ್ನು ಮಾಡಬಾರದಿತ್ತು ಎಂದಿದ್ದಾರೆ.

ನಟಿ ಅನುಪಮಾ ಅವರು ತೆಲುಗು ಸಂದರ್ಶನದಲ್ಲಿ ಪುನೀತ್‌ ಅವರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಟಸಾರ್ವಭೌಮ ಶೂಟಿಂಗ್‌ ವೇಳೆ ನಡೆದ ಸಂಗತಿಯೊಂದನ್ನು ಅನುಪಮಾ ನೆನೆದಿದ್ದು, ಅಪ್ಪು ಅವರು ಸೆಟ್‌ನಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎಂದು ಸ್ಮರಿಸಿದ್ದಾರೆ. ಅವರು ಆಗಲೇ ದೊಡ್ಡ ಸೂಪರ್‌ ಸ್ಟಾರ್‌ ಆಗಿದ್ದವರು. ನಟಸಾರ್ವಭೌಮ ಸಿನಿಮಾವನ್ನು ಒಂದು ಚಿಕ್ಕ ಜಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.

being-a-big-star-puneeth-rajkumar-did-this-what-actress-anupama-parameswaran-revealed

ಮಾತು ಮಂದುವರಿಸಿದ ಅನುಪಮಾ, ಸಣ್ಣ ಜಾಗದಲ್ಲಿ ಶೂಟಿಂಗ್‌ ನಡೆಯುತ್ತಿದ್ದ ಕಾರಣ ಅಲ್ಲಿ ಕೂರಲು ಜಾಗ ಇರಲಿಲ್ಲ. ಒಂದು ಚೇರ್‌ ಮಾತ್ರ ಇತ್ತು. ನನ್ನೊಂದಿಗೆ ಶೂಟಿಂಗ್‌ಗೆ ನನ್ನ ತಾಯಿ ಕೂಡ ಬಂದಿದ್ದರು. ಅವರು ಆ ಚೇರ್‌ ಮೇಲೆ ಕುಳಿತಿದ್ದರು. ಇದೇ ಸಮಯಕ್ಕೆ ಅಲ್ಲಿಗೆ ಪುನೀತ್‌ ಸರ್‌ ಬಂದ್ರು. ಇದನ್ನು ಕಂಡು ನನ್ನಮ್ಮ ಕೂಡಲೇ ಎದ್ದು ನಿಂತರು. ಆದರೆ ಪುನೀತ್‌ ಅವರು ನನ್ನ ತಾಯಿಯನ್ನ ಮತ್ತೆ ಚೇರ್‌ ಮೇಲೆ ಕೂರಿಸಿದರು. ನಂತರ ಅವರು ಪಕ್ಕದ ಫುಟ್‌ಪಾತ್‌ ಮೇಲೆ ಹೋಗಿ ಕುಳಿತುಕೊಂಡರು ಎಂದು ಅನುಪಮಾ ಹೇಳಿದ್ದಾರೆ. ಪುನೀತ್‌ ಅವರು ಆಗಲೇ ದೊಡ್ಡ ಸ್ಟಾರ್‌ ಆಗಿದ್ದವರು. ಅವರು ಹೀಗೆಲ್ಲ ಮಾಡುವ ಅಗತ್ಯವೇ ಇರಲಿಲ್ಲ. ಮುಖ್ಯವಾಗಿ ಈಗಿನ ಜನರೇಶನ್​ ನಟರಿಗೆ ಅಪ್ಪು ಅವರಂತಹ ಮನಸ್ಥಿತಿ ಇಲ್ಲ ಎಂದು ಅನುಪಮಾ ಅಪ್ಪು ಸರಳತೆಯನ್ನು ಬಿಚ್ಚಿಟ್ಟಿದ್ದಾರೆ.

'ಆ ದೃಶ್ಯಕ್ಕಾಗಿ ಆ ಬಟ್ಟೆ ಧರಿಸಲು ಇಷ್ಟವಿರಲಿಲ್ಲ'

ಅನುಪಮಾ ಅವರು ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದು, ಟಾಲಿವುಡ್ ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಟಿಲ್ಲು ಸ್ಕ್ವೇರ್‌ ಸಿನಿಮಾದಲ್ಲಿ ಅನುಪಮಾ ಅವರು ನಟ ಸಿದ್ಧು ಜೊನ್ನಲಗಡ್ಡ ಅವರೊಂದಿಗೆ ಸಖತ್‌ ಬೋಲ್ಡ್‌ ಅವತಾರದಿಂದ ಗಮನ ಸೆಳೆದಿದ್ದರು. ಈ ಹಾಸ್ಯ ಪ್ರಧಾನ ಚಿತ್ರದಲ್ಲಿ ಅನುಪಮಾ ಅಂತಹ ದೃಶ್ಯಗಳಲ್ಲಿ ನಟಿಸಲು ಹಿಂಜರಿಯಲಿಲ್ಲ. ಈ ಸಿನಿಮಾ ದೊಡ್ಡ ಬ್ಲಾಕ್‌ಬಸ್ಟರ್ ಹಿಟ್‌ ಕೂಡ ಆಯ್ತು. ಜನರು ನಾನು ಆ ಪಾತ್ರ ಮಾಡಿದ್ದನ್ನು ಇಷ್ಟಪಡಲಿಲ್ಲ ಎಂದು ಹೇಳಿದ್ದಾರೆ.

ಆ ಸಿನಿಮಾ ಒಪ್ಪಿಕೊಳ್ಳಲು ನನಗೆ ಬಹಳ ಸಮಯ ಹಿಡಿಯಿತು. ನಾನು ಎರಡು ಮನಸ್ಸಿನಲ್ಲಿದ್ದೆ, ನನ್ನ ಪಾತ್ರವನ್ನು ಅತ್ಯಂತ ಆತ್ಮವಿಶ್ವಾಸದಿಂದ ನಿರ್ವಹಿಸಲು ನನಗೆ ಸಾಧ್ಯವಾಗಲಿಲ್ಲ. ಆ ಪಾತ್ರ ನನ್ನ ನಿಜ ಜೀವನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಆ ಉಡುಪುಗಳನ್ನು ಧರಿಸಲು ನನಗೆ ಇಷ್ಟವಿರಲಿಲ್ಲ. ನಾನು ಸಾಮಾನ್ಯವಾಗಿ ಅಂತಹ ಬಟ್ಟೆ ಧರಿಸುತ್ತಿರಲಿಲ್ಲ ಎಂದಿದ್ದಾರೆ. ಚೆನ್ನಾಗಿ ಕಾಣಲು ಸಮಯ ಕಳೆಯುವುದು ನನಗೆ ಇಷ್ಟವಿಲ್ಲದ ಕೆಲಸ. ನಾನು ಆ ಪಾತ್ರ ನಿರ್ವಹಿಸಿದರೆ ಜನರು ನನ್ನ ಬಗ್ಗೆ ಏನು ಯೋಚಿಸಬಹುದು ಎಂಬುದು ಸಹ ನನಗೆ ಗೊತ್ತಿತ್ತು. ನಾನು ಆ ಪಾತ್ರವನ್ನು ನಿರ್ವಹಿಸುವುದನ್ನು ಜನರು ಇಷ್ಟಪಡಲಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+