Nishvika Naidu: ರಶ್ಮಿಕಾ ಸಾಲಿಗೆ ನಟಿ ನಿಶ್ವಿಕಾ!, ಸಕ್ಸಸ್‌ಗಾಗಿ ಮದ್ಯ, ಮಾಂಸ ನೈವೇದ್ಯಕ್ಕಿಟ್ಟು ಮನೆಯಲ್ಲಿ ವಿಶೇಷ ಯಾಗ
ಬೆಂಗಳೂರು, ಜೂನ್ 23: ಕನ್ನಡದ ನಟಿಯರು ಬೇರೆ ಬೇರೆ ಚಿತ್ರರಂಗಗಳಲ್ಲಿ ಹೆಸರು ಮಾಡುತ್ತಿದ್ದಾರೆ. ಈಗಾಗಲೇ ಈ ಸಾಲಿಗೆ ಅನೇಕರು ಸೇರಿದ್ದಾರೆ. ಹೀಗೆ ಕನ್ನಡದಿಂದ ಬೇರೆ ಚಿತ್ರರಂಗದಲ್ಲಿ ಹೆಸರು ಮಾಡುವ ಮುನ್ನ ಮನೆಯಲ್ಲಿ ಯಾಗ, ವಿಶೇಷ ಪೂಜೆ ಮಾಡುವ ಸಂಸ್ಕೃತಿಯೊಂದು ಸದ್ದಿಲ್ಲದೆ ಬೆಳೆಯುತ್ತಿದೆ. ಇದೀಗ ಈ ಸಾಲಿಗೆ ನಟಿ ರಶ್ಮಿಕಾ ಮಂದಣ್ಣಾ (Rashmika Mandanna) ಬಳಿಕ ಕನ್ನಡದ ನಟಿ ನಿಶ್ವಿಕಾ ನಾಯ್ಡು (Nishvika Naidu) ಸೇರಿದ್ದಾರೆ.
ಹೌದು, ಹಲವು ಸ್ಯಾಂಡಲ್‌ವುಡ್ ನಲ್ಲಿ ಕೆಲವು ಹಿಟ್ ಚಿತ್ರಗಳನ್ನು ನೀಡಿರುವ ನಟಿ ನಿಶ್ವಿಕಾ ನಾಯ್ಡು ಅವರು ಸದ್ಯ ಟಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ವಿಷಯ ಗೊತ್ತೆ ಇದೆ. ಇದರ ಸಲುವಾಗಿ ಅವರು ಮನೆಯಲ್ಲಿ ಮಾಂಸ, ಮದ್ಯವನ್ನೆಲ್ಲ ಇಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ.

ನಟಿ ನಿಶ್ವಿಕಾ ಮನೆಯಲ್ಲಿ ಪೂಜೆ ಮಾಡಿದ್ದು, ಜ್ಯೂತಿಷಿ ವೇಣು ಸ್ವಾಮಿ. ಇವರು ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ಮನೆಯಲ್ಲಿ ಇದೇ ರೀತಿಯ ಯಾಗ, ಪೂಜೆ ನೆರವೇರಿಸಿದ್ದರು. ಬಳಿಕ ರಶ್ಮಿಕಾ ಬಹುಭಾಷಾ ನಟಿಯಾಗಿ, ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ ಎಂಬುದು ನಂಬಿಕೆ.
ನಿಶ್ವಿಕಾ ನಾಯ್ಡುಗೆ ವೇಣು ಸ್ವಾಮಿ ಅಭಯ
ನಟಿ ನಿಶ್ವಿಕಾ ನಾಯ್ಡು ಅವರು ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕಾರಣಕ್ಕಾಗಿ ಅವರು ಮನೆಯಲ್ಲಿ ಮದ್ಯ, ಮಾಂಸ ಇಟ್ಟು ಯಾಗ, ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಪೂಜೆ ಬಳಿಕ ವೇಣು ಸ್ವಾಮಿ ನಟಿ ನಿಶ್ವಿಕಾ ಅವರಿಗೆ ಆಶೀರ್ವದಿಸಿದ್ದಾರೆ. ವೃತ್ತಿ ಜೀವನದಲ್ಲಿ ಸಕ್ಸಸ್ ಕಾಣುವಂತೆ ಹಾರೈಸಿದ್ದಾರೆ. ನಿಮ್ಮ ಆಶೀರ್ವಾದ ಇದ್ದಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ನಟ ನಿಶ್ಚಿಕಾ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡದ 'ಅಮ್ಮ ಐಲವ್ ಯು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ನಿಶ್ಚಿಕಾ ನಾಯ್ಡು, ನಂತರ ಪಡ್ಡೆಹುಲಿ, ಜಂಟಲ್ ಮ್ಯಾನ್, ದಿಲ್ ಪಸಂದ್, ವಾಸು ನಾನ್ ಪಕ್ಕಾ ಕಮರ್ಷಿಯಲ್ ನಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ 'ಕರಟಕ ದಮನಕ'ದಲ್ಲಿ ನಟ ಕಮ್ ಅದ್ಭುತ ಡಾನ್ಸ್ ಪ್ರಭುದೇವ್ ಅವರೊಂದಿಗೆ ನಟಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ವೇಣು ಸ್ವಾಮಿ ಜನಪ್ರಿಯತೆ..!
ಈ ಪೂಜೆಗಳಿಂದ ನಟಿಯರ ಜೊತೆಗೆ ಈ ತೆಲುಗಿನ ಜ್ಯೋತಿಷಿ ವೇಣು ಸ್ವಾಮಿಯ ಇಮೇಜ್ ಸಹ ಬದಲಾಗುತ್ತಿದೆ. ಸ್ಟಾರ್ ಸ್ವಾಮೀಜಿ ಅಂತ ಮುಂದೆ ಕರೆದರೂ ಅಚ್ಚರಿ ಇಲ್ಲ. ಸದ್ಯ ನಿಶ್ಚಿಕಾ ನಾಯ್ಡು ಅವರ ಮನೆಯಲ್ಲಿ ಪೂಜೆ ನೆರವೇರಿಸಿದ್ದರ ಬಗ್ಗೆ ಫೋಟೋಗಳನ್ನು ವೇಣು ಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವು ಇದೀಗ ವೈರಲ್ ಆಗುತ್ತಿವೆ.
ಜಗತ್ತು ತಂತ್ರಜ್ಞಾನದತ್ತ ಮುಖ ಮಾಡಿದರೂ ಸಹಿತ ಇಂದಿನ ದಿನಮಾನಗಳಲ್ಲಿ ಜ್ಯೋತಿಷ್ಯವನ್ನು ನಂಬಿದವರು ಅನೇಕರಿದ್ದಾರೆ. ಅದರಲ್ಲಿ ನಟ ನಟಿಯರು ಇದ್ದಾರೆ ಎಂದರೆ ನಂಬಲೇ ಬೇಕು. ಸದ್ಯ ನಟಿಯರ ಪಾಲಿಗೆ ಈ ವೇಣು ಸ್ವಾಮಿ ಅವರು ಮನೆಯಲ್ಲೇ ಮಾಡುವ ವಿಶೇಷ ಪೂಜೆ, ಯಾಗ ವರ್ಕೌಟ್ ಆಗುತ್ತಿದೆ ಎಂದು ಅವರೆಲ್ಲ ನಂಬಿದ್ದಾರೆ.
ರಶ್ಮಿಕಾಗೆ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ
ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡೇತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸುತ್ತಿದ್ದಂತೆ ಅವರ ಹೈದರಾಬಾದ್ ಮನೆಯಲ್ಲಿ ಇದೇ ವೇಣು ಸ್ವಾಮಿ ಅವರು ಪೂಜೆ ಮಾಡಿದ್ದರು. ಅಲ್ಲದೇ ಅವರಿಗೆ ಈ ಹಿಂದೆ ನಡೆದಿದ್ದ ಎಂಗೇಜ್‌ಮೆಂಟ್‌ನಿಂದ ಹೊರ ಬರುವಂತೆ, ಅವರೊಂದಿಗೆ ರಶ್ಮಿಕಾ ಭವಿಷ್ಯ ಇಲ್ಲ ಎಂದು ಹೇಳಿ ಇದೇ ವೇಣು ಸ್ವಾಮಿ ಆಶೀರ್ವದಿಸಿದ್ದರು ಎಂದು ತಿಳಿದು ಬಂದಿದೆ. ಈ ಪೂಜೆ ಬಳಿಕ ನಟಿ ರಶ್ಮಿಕಾ ಪ್ಯಾನ್ ಇಂಡಿಯಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಕ್ಸಸ್ ಕಂಡಿದ್ದಾರೆ.












Click it and Unblock the Notifications