BBK 12: ಯಾರೂ ಊಹಿಸದ ಸ್ಪರ್ಧಿ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್
ಬಿಗ್‌ಬಾಸ್ ಸೀಸನ್-12ರಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಯಾರೂ ಊಹಿಸದ ಸ್ಪರ್ಧಿಯೊಬ್ಬರು ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆಯಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರು ರಿವೀಲ್ ಆಗಿದೆ. ಎಂದಿನಂತೆ ಈ ವಾರವೂ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಆದರೆ ಈ ಸ್ಪರ್ಧಿ ಇಷ್ಟು ಬೇಗ ಬಿಗ್‌ಬಾಸ್ ಪಯಣ ಮುಗಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಇತ್ತೀಚೆಗಷ್ಟೇ ಮೂವರು ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಈಗ ಮತ್ತೊಬ್ಬ ಪ್ರಬಲ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಉತ್ತರ ಕರ್ನಾಟಕದ ಮಾತಿನ ಮಲ್ಲಿ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದು, ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಮಲ್ಲಮ್ಮ ಅವರು ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಉತ್ತರ ಕರ್ನಾಟಕದ ಅಪ್ಪಟ ಹಳ್ಳಿಯ ಪ್ರತಿಭೆಯಾಗಿದ್ದ ಮಲ್ಲಮ್ಮ ಅವರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು ತಮ್ಮ ಮಾತಿನ ಮೂಲಕ ಮನೆಮಾತಾಗಿದ್ದರು. ತಮ್ಮ ಮಾತಿನಿಂದಲೇ ಅವರು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದರು. ಇದು ಅವರನ್ನು ಬಿಗ್‌ಬಾಸ್‌ವರೆಗೆ ಕರೆದಂತಿತ್ತು.
ಸೂಪರ್ ಸಂಡೇ ವಿತ್ ಬಾದ್‌ಷಾ ಸಂಚಿಕೆಯಲ್ಲಿ ಸುದೀಪ್ ಅವರು ಈ ವಾರ ಮನೆಯಲ್ಲಿ ಸೇಫ್ ಆಗಿರುವ ಸ್ಪರ್ಧಿಗಳ ಹೆಸರನ್ನು ಘೋಷಿಸುತ್ತಾ ಬಂದರು. ಕೊನೆಯಲ್ಲಿ ಮಲ್ಲಮ್ಮ ಹಾಗೂ ಮಾಳು ನಿಪನಾಳ ಉಳಿದುಕೊಂಡರು. ನಿಮ್ಮಿಬ್ಬರಲ್ಲಿ ಈ ವಾರ ಮನೆಯಿಂದ ಹೊರಗೆ ಹೋಗೋದು ಅಂತ ವಿಟಿ ಮೂಲಕ ನಿರ್ಧರಿಸಲಾಯಿತು. ಅಲ್ಲದೆ ನೀವಿಬ್ಬರು ಚೆನ್ನಾಗಿ ಆಟವಾಡಿಲ್ಲ ಅಂತ ಭಾವಿಸಬೇಡಿ, ಇಬ್ಬರೂ ಚೆನ್ನಾಗಿ ಆಡಿದ್ದೀರಿ ಎಂದು ಧೈರ್ಯ ತುಂಬಿದರು. ಅಂತಿಮವಾಗಿ ಮಲ್ಲಮ್ಮ ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆದರು.
ಮಲ್ಲಮ್ಮ ಅವರನ್ನು ವಿಶೇಷ ಗೌರವದೊಂದಿಗೆ ಬಿಗ್‌ಬಾಸ್ ಮನೆಯಿಂದ ಬೀಳ್ಕೊಡಲಾಯಿತು.ಮಲ್ಲಮ್ಮ ಅವರಿಗಾಗಿ ವಿಶೇಷ ಚಪ್ಪರ ತರಿಸಿ ಅವರನ್ನು ಅದರ ಕೆಳಗಿ ನಿಲ್ಲಿಸಿ ಗೌರವಿಸಲಾಯಿತು. "ಬಿಗ್‌ಬಾಸ್ ಮನೆಗೆ ನೂರಾರು ಮಂದಿ ಬಂದಿದ್ದಾರೆ. ಆದರೆ ಅವರೆಲ್ಲರಿಗಿಂತ ನೀವು ಭಿನ್ನರು. ನೀವು ಬಿಗ್‌ಬಾಸ್ ಮನೆಗೆ ಬರಲು ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಅಗತ್ಯ ಇಲ್ಲ, ವ್ಯಕ್ತಿತ್ವ ಇದ್ದರೆ ಸಾಕು ಎನ್ನುವುದನ್ನು ತೋರಿಸಿದ್ದೀರಿ. ಶೋಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತು ಮಾಡಿದ್ದೀರಿ. ನೀವು ಬಿಗ್‌ಬಾಸ್ ಮನೆಯ ಹೆಮ್ಮೆಯ ಸ್ಪರ್ಧಿ. ಈ ಮನೆ ಸದಾ ನಿಮ್ಮದು, ಬಿಗ್‌ಬಾಸ್ ಕೂಡ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ. ನಿಮ್ಮ ಹೊರಗಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ವಿದಾಯ ಹೇಳಿದೆ.
ಮಲ್ಲಮ್ಮ ಅವರು ಮನೆಯಿಂದ ಹೊರಗೆ ಹೋಗುವಾದ ರಕ್ಷಿತಾ ಶೆಟ್ಟಿ ಸೇರಿದಂತೆ ಹಲವು ಕಣ್ಣೀರಿಟ್ಟರು. ಇಡೀ ಮನೆಮಂದಿ ಮಲ್ಲಮ್ಮ ಅವರನ್ನು ಭಾವುಕವಾಗಿ ಹೊರಗೆ ಕಳಿಸಿಕೊಟ್ಟರು. ಅಲ್ಲಿ ಸುದೀಪ್ ವೇದಿಕೆಗೆ ಬಂದ ಮಲ್ಲಮ್ಮ ಅವರು ಬೇಸರ ಹಂಚಿಕೊಂಡರು. " ಎಲ್ಲರೂ ಅಮ್ಮ ಅಮ್ಮ ಎಂದು ನನ್ನ ಪ್ರತ್ಯೇಕವಾಗಿ ಇಟ್ಟುಬಿಟ್ಟರು" ಎಂದು ಬೇಸರ ತೋಡಿಕೊಂಡರು. ಬಳಿಕ ಸುದೀಪ್ ಅವರು ಮಲ್ಲಮ್ಮ ಅವರ ಆಟದ ಬಗ್ಗೆ ಶ್ಲಾಘಿಸಿ ಅಲ್ಲಿಂದ ಕಳಿಸಿಕೊಟ್ಟಿದ್ದಾರೆ. ಇಲ್ಲಿಗೆ ಮಲ್ಲಮ್ಮ ಅವರ ಪಯಣ ಮುಗಿದಿದೆ.












Click it and Unblock the Notifications