BBK-12: ಬಿಗ್‌ಬಾಸ್‌ ಮೇಲೆ ಕೆಲವರ ಕಣ್ಣು ಬಿದ್ದಿರಬಹುದು: ಸುದೀಪ್‌ ಕೌಂಟರ್‌ ಕೊಟ್ಟಿದ್ಯಾರಿಗೆ?

Bigg Boss Kannada 12: ಬಿಗ್‌ಬಾಸ್‌ ಕನ್ನಡ ಸೀಸನ್‌-12 ನಡೆಯುತ್ತಿರುವ ಬಿಡದಿ ಬಳಿಯ ಜಾಲಿವುಡ್‌ ಸ್ಟುಡಿಯೋಗೆ ಇತ್ತೀಚೆಗೆ ಕಾನೂನು ಸಂಕಷ್ಟ ಎದುರಾಗಿತ್ತು. ನಿಯಮ ಪಾಲಿಸದ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೋಟಿಸ್‌ ನೀಡಿ ಸ್ಟುಡಿಯೋಗೆ ಬೀಗ ಹಾಕಿಸಿದ್ರು. ಹೀಗಾಗಿ ಬಿಗ್‌ಬಾಸ್‌ ಕಾರ್ಯಕ್ರಮ ಕೂಡ ಅರ್ಧಕ್ಕೆ ನಿಂತಿತ್ತು. ಸ್ಪರ್ಧಿಗಳನ್ನ ರಾತ್ರೋರಾತ್ರಿ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿತ್ತು. ಬಳಿಕ ಕಾನೂನು ತೊಡಕು ಪರಿಹರಿಸಿಕೊಂಡು ಬಿಗ್‌ಬಾಸ್‌ ಮತ್ತೆ ಆರಂಭವಾಗಿದೆ. ಈ ವೇದಿಕೆಯಲ್ಲಿ ಮಾತನಾಡಿರುವ ಕಿಚ್ಚ ಸುದೀಪ್‌, ಬಿಗ್‌ಬಾಸ್‌ ಶೋ ಮೇಲೆ ಕೆಲವರಿಗೆ ಕಣ್ಣುಬಿದ್ದಿರಬಹುದು ಎಂದು ಕೌಂಟರ್‌ ನೀಡಿದ್ದಾರೆ.

ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಿದ ಬೆಳವಣಿಗೆ ನಡೆದಾಗ ಇದು ರಾಜಕೀಯ ತಿರುವು ಪಡೆದುಕೊಂಡಿತ್ತು. ಈ ಹಿಂದೆ ಸುದೀಪ್‌ ಹಾಗೂ ಡಿಕೆ ಶಿವಕುಮಾರ್‌ ನಡುವೆ ಟಾಕ್‌ವಾರ್‌ಗೆ ಕಾರಣವಾಗಿದ್ದ ನಟ್ಟು ಬೋಲ್ಟ್‌ ಟೈಟ್‌ ಹೇಳಿಕೆ ತಳುಕು ಹಾಕಿಕೊಂಡಿತ್ತು. ಜೆಡಿಎಸ್‌ ಕೂಡ ಡಿಕೆ ಶಿವಕುಮಾರ್‌ ಸೇಡಿನಿಂದ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪ ಮಾಡಿತ್ತು.

BBK-12 Kiccha Sudeep Bigg Boss Controversy Some People Might Have An Eye On The Show

ಅಚ್ಚರಿ ಎಂದರೆ ಡಿಕೆ ಶಿವಕುಮಾರ್‌ ಅವರೇ ಬಿಗ್‌ಬಾಸ್‌ಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು. ಬಳಿಕ ಸುದೀಪ್‌ ಕೂಡ ಡಿಕೆ ಶಿವಕುಮಾರ್‌ ಅವರಿಗೆ ಧನ್ಯವಾದ ತಿಳಿಸಿದ್ದರು. ಅದೇನೇ ಇರಲಿ, ಬಿಗ್‌ಬಾಸ್‌ ಮತ್ತೆ ಶುರುವಾಗಿದೆ. ಸುದೀಪ್‌ ಎಂದಿನಂತೆ ನಿರೂಪಣೆ ಮುಂದುವರಿಸಿದ್ದಾರೆ. ಈ ವೇಳೆ ಇತ್ತೀಚಿನ ವಿವಾದದ ಬಗ್ಗೆಯೂ ಅವರು ಮಾತನಾಡಿದ್ದಾರೆ.

'ಸಮಸ್ಯೆ ಬಿಗ್​​ಬಾಸ್​ನದ್ದಲ್ಲ'

'ಕೆಲ ದಿನಗಳ ಹಿಂದೆ ಎದುರಾದ ಸಮಸ್ಯೆಗೂ ಬಿಗ್​​ಬಾಸ್​​ಗೂ ಯಾವುದೇ ಸಂಬಂಧ ಇಲ್ಲ. ಆದರೆ ಬಿಗ್​​ಬಾಸ್ ಅನ್ನೋದೇ ಒಂದು ಅಡ್ರೆಸ್ ಆಗಿರುವಾಗ ಕೆಲವರು ಆ ಅಡ್ರೆಸ್ ಅನ್ನು ಕ್ಲೋಸ್ ಮಾಡುವ ಪ್ರಯತ್ನ ಮಾಡಿದ್ರು. ಆದರೆ ಅದು ಸಾಧ್ಯವಿಲ್ಲ ಎಂದು ಸುದೀಪ್‌ ಹೇಳಿದ್ದಾರೆ. 12 ಸೀಸನ್​​ಗಳಿಂದಲೂ ಬಿಗ್‌ಬಾಸ್‌ ಕೇವಲ ಶೋ ಆಗಿ ಉಳಿದಿಲ್ಲ. ಇದು ಸಾವಿರಾರು ಜನರಿಗೆ ಕೆಲಸ ಕೊಟ್ಟಿದೆ. ಹಲವರ ಬದುಕನ್ನ ಬದಲಾಯಿಸಿದೆ. ಹೀಗಿರುವಾಗ ಕೆಲವರ ಕಣ್ಣು ನಮ್ಮ ಶೋ ಮೇಲೆ ಬಿದ್ದಿರಲೂಬಹುದು' ಎಂದು ಹೇಳಿದ್ದಾರೆ.

'ಬಿಗ್‌ಬಾಸ್‌ಗೆ ಸಮಸ್ಯೆ ಆದಾಗ ಅದಕ್ಕೂ ಶೋಗೂ, ಕಲರ್ಸ್‌ ವಾಹಿನಿಗೂ, ನಮಗೂ ಯಾವುದೇ ರೀತಿ ಸಂಬಂಧ ಇಲ್ಲ. ಆ ಸಮಸ್ಯೆ ನಮ್ಮಿಂದ ಆಗಿದ್ದಲ್ಲ. ನಮ್ಮಿಂದ ನಿಯಮ ಉಲ್ಲಂಘನೆಯಾಗಿಲ್ಲ. ಅದು ಬಿಗ್‌ಬಾಸ್‌ ಕಾರ್ಯಕ್ರಮ ನಡೆಯುತ್ತಿರುವ ಜಾಗದವರ ಸಮಸ್ಯೆ. ಬಿಗ್‌ಬಾಸ್‌ ಎಷ್ಟೋ ಜನರಿಗೆ ದಾರಿದೀಪ ಆಗಿದೆ ಅಂದಾಗ ಎಷ್ಟೋ ಜನರ ಕಣ್ಣು ಕುಕ್ಕಿರುತ್ತೆ' ಎಂದು ಕಿಚ್ಚ ಟಾಂಗ್‌ ನೀಡಿದ್ದಾರೆ.

ಡಿಕೆ ಸಾಹೇಬ್ರಿಗೆ ಧನ್ಯವಾದ

'ಸಮಸ್ಯೆ ಒಂದು ಎದುರಾದಾಗ ನಮಗೆ ಬೆಂಬಲ ನೀಡಿದ, ಸಹಾಯ ನೀಡಿದವರ ಹೆಸರನ್ನು ನಾನು ತೆಗೆದುಕೊಳ್ಳಲೇ ಬೇಕು. 'ನಮ್ಮ ಡಿಕೆ ಸಾಹೇಬರಿಗೆ ಹಾಗೂ ಆತ್ಮೀಯ ಗೆಳೆಯ ನಲಪಾಡ್ ಅವರಿಗೆ ಧನ್ಯವಾದಗಳು. ಜೊತೆಗೆ ಈ ವಿವಾದದಲ್ಲಿ ಬಿಗ್​​ಬಾಸ್ ಪಾತ್ರ ಏನಿಲ್ಲ. ಬಿಗ್​​ಬಾಸ್ ಕಡೆಯಿಂದ ತಪ್ಪು ಆಗಿಲ್ಲ ಎಂದು ಸ್ಪಷ್ಟಪಡಿಸಿದ, ಬಿಗ್​​ಬಾಸ್ ಮತ್ತೆ ಶುರುವಾಗಲು ನೆರವಾದ ಆಡಳಿತ ವಿಭಾಗದ ಅಧಿಕಾರಿಗಳಿಗೆ ಧನ್ಯವಾದಗಳು' ಎಂದರು ಸುದೀಪ್.

ನಮಗೆ ಸಮಸ್ಯೆ ಎದುರಾದಾಗ ಬೆಂಬಲ ಸಹಾಯ ನೀಡಿದವರ ಹೆಸರನ್ನು ನಾನು ತೆಗೆದುಕೊಳ್ಳಲೇಬೇಕು. ನಮ್ಮ ಡಿ.ಕೆ.ಶಿವಕುಮಾರ್‌ ಸಾಹೇಬರಿಗೆ, ಆತ್ಮೀಯ ಗೆಳೆಯ ನಲಪಾಡ್ ಅವರಿಗೆ ಧನ್ಯವಾದಗಳು. ಈ ವಿವಾದದಲ್ಲಿ ಬಿಗ್​​ಬಾಸ್‌ನ ಪಾತ್ರ ಏನಿಲ್ಲ. ಬಿಗ್​​ಬಾಸ್ ಕಡೆಯಿಂದ ತಪ್ಪಾಗಿಲ್ಲ. ಬಿಗ್​​ಬಾಸ್ ಮತ್ತೆ ಶುರುವಾಗಲು ನೆರವಾದ ಆಡಳಿತ ವಿಭಾಗದ ಅಧಿಕಾರಿಗಳಿಗೂ ಧನ್ಯವಾದಗಳು ಎಂದಿದ್ದಾರೆ ಸುದೀಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+