Ashwini Gowda: ಸುದೀಪ್ ಅಣ್ಣ ಹೆಣ್ಮಕ್ಕಳ ಕೈ ಎತ್ತುತ್ತಾರೆ ಅಂದ್ಕೊಂಡಿದ್ದೆ, ನನ್ನನ್ನ ಕೈಬಿಟ್ಟರು ಎಂದ ಅಶ್ವಿನಿ ಗೌಡ
BBK 12 Ashwini Gowda: ಈಗಗಾಲೇ ಬಿಗ್‌ಬಾಸ್ ಕನ್ನಡ 12 ಮುಕ್ತಾಯ ಆಗಿದ್ದು, ಗಿಲ್ಲಿ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಎರಡನೇ ರನ್ನರ್ ಅಪ್ ಆಗಿರುವ ಅಶ್ವಿನಿ ಗೌಡ ಅವರು ಕೊಟ್ಟಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಅಶ್ವಿನಿ ಗೌಡ ಅವರು ತಮ್ಮ ಮಾತಿನ ಮೂಲಕ ಇಡೀ ಕರ್ನಾಟಕದ ಗಮನ ಸೆಳೆದಿದ್ದರು. 'ರಾಜಮಾತೆ' ಪಾತ್ರವನ್ನು ನಿಭಾಯಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಆದರೆ, ದಿನಕಳೆದಂತೆ ಅವರು ಎಲ್ಲೋ ಒಂದು ಕಳೆದುಹೋಗಿಬಿಟ್ಟರು. ಕೊನೆಯಲ್ಲಿ ಮತ್ತೆ ಗೇಮ್‌ಗಳಲ್ಲಿ ಉತ್ತಮವಾಗಿ ಆಡಿ ಗಮನ ಸೆಳೆದರು.

ಆದರೆ, ಫಿನಾಲೆ ವಾರದಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ಮೊದಲ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಆದರೆ, ಟ್ರೋಫಿ ವಿನ್ನರ್ ಪಟ್ಟ ಜನರು ನುಡಿದ ಭವಿಷ್ಯದಂತೆ ಗಿಲ್ಲಿ ನಟನಿಗೆ ದೊರೆಯಿತು. ಬಿಗ್‌ಬಾಸ್ ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಗಿಲ್ಲಿ ನಟ ಅಭಿಮಾನಿಗಳ ಸಾಗರವನ್ನು ಕಂಡು ದಂಗಾದರು. ಅಷ್ಟರ ಮಟ್ಟಿಗೆ ತಮ್ಮ ಕಾಮಿಡಿ ಮೂಲಕ ಜನರ ಮನಸು ಗೆದ್ದಿದ್ದಾರೆ. ಅವರಿಗೆ ಬರೀ ಕರ್ನಾಟಕ ಮಾತ್ರ ಅಷ್ಟೇ ಅಲ್ಲದೆ, ದೇಶ ವಿದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋಗಳೇ ಸಾಕ್ಷಿ.
ಅಶ್ವಿನಿ ಗೌಡ ನಾನೇ ವಿನ್ನರ್ ಅಂದಿದ್ದೇಕೆ?: ಇನ್ನೂ ಬಿಗ್‌ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ಅಶ್ವಿನಿ ಅವರು ಸಂದರ್ಶನಗಳಲ್ಲಿ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗಿವೆ. ಅದರಲ್ಲೂ ಬಿಗ್‌ಬಾಸ್ ವಿನ್ನರ್ ನಾನೇ ಆಗಬೇಕಿತ್ತು ಎನ್ನುವ ಹೇಳಿಕೆ ಭಾರೀ ವೈರಲ್ ಆಗಿದೆ. ಹೌದು, ಮಾಧ್ಯಮವೊಂದರ ಬಳಿ ಮಾತನಾಡಿದ ಅವರು, "ನನಗೆ ಬಂದಿರುವ ಮಾಹಿತಿ ಪ್ರಕಾರ, ನನಗೆ ಬಂದಿರುವ ವೋಟ್ ಹಾಗೂ ಅವರಿಗೆ ಬಂದಿರುವ ವೋಟ್‌ಗಳನ್ನು ಹೊರಗಡೆ ಇಟ್ಟರೆ ನಾನೇ ವಿನ್ನರ್," ಎಂದು ಹೇಳಿದ್ದಾರೆ.
ಮನಸಿಗೂ, ದೈಹಿಕವಾಗಿಯೂ ಗಾಯವಾಗಿದೆ: "ಇದು ಕಾಮಿಡಿ ಶೋ ಅಲ್ಲ, ಬಿಗ್‌ಬಾಸ್ ವ್ಯಕ್ತಿತ್ವಗಳ ಆಟ. ಆದರೆ, ಯಾವ ಮಾನದಂಡದ ಮೇಲೆ ಒಬ್ಬರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನನ್ನನ್ನ ನಾನು ಮನೆಗೆ ಸಮರ್ಪಿಸಿಕೊಂಡಿದ್ದೆ. ಮನಸಿಗೂ ಗಾಯವಾಗಿದೆ, ದೈಹಿಕವಾಗಿಯೂ ಗಾಯವಾಗಿದೆ. ಅದ್ಯಾವುದು ನನಗೆ ಲೆಕ್ಕಕ್ಕೆ ಬರಲಿಲ್ಲ. ಬಿಗ್‌ಬಾಸ್‌ಗೆ ಒಬ್ಬ ಟಫ್ ಕಂಟೆಂಡರ್ ಹೇಗಿರಬೇಕೋ ನಾನು ಹಾಗೇ ಇದ್ದೆ," ಎಂದು ಹೇಳಿದರು.
ಹೆಣ್ಮಕ್ಕಳ ಕೈ ಎತ್ತಲಿಲ್ಲ ಸುದೀಪ್ ಅಣ್ಣ: "ಇಲ್ಲಿಯವರೆಗೂ ಬಿಗ್‌ಬಾಸ್ ಮನಗೆ ಯಾವೊಬ್ಬ ಸ್ಟ್ರಾಂಗ್ ಕಂಟೆಂಡರ್ ಬಂದಿಲ್ಲ. ಇನ್ಮುಂದೆ ಬರುತ್ತಾರೆ ಅಂದ್ರೆ ನನ್ನನ್ನು ಮೀರಿಯೇ ಹೋಗಬೇಕು. ಆ ಹೆಮ್ಮೆ ನನಗಿದೆ. ಈ ಸಲ ಆದ್ರೂ ಸುದೀಪ್ ಅಣ್ಣ ಹೆಣ್ಮಕ್ಕಳ ಕೈ ಎತ್ತುತ್ತಾರೆ ಅಂತಾ ಅಂದ್ಕೊಂಡಿದ್ದೆ. ಆದರೆ, ನನ್ನನ್ನ ಕೈಬಿಡ್ತಾರೆ ಅಂತಾ ಅಂದುಕೊಂಡಿರಲಿಲ್ಲ," ಎಂದು ಹೇಳಿದರು.
"ಗಿಲ್ಲಿಯ ಆಟ, ವ್ಯಕ್ತಿತ್ವ ಮತ್ತು ಗೆಲುವಿನ ಬಗ್ಗೆ ಗೌರವವಿದೆ ಎಂದು ಅಶ್ವಿನಿ ಅವರು ಹೇಳಿದ್ದಾರೆ. ಇದೇ ವೇಳೆ "ಅವರು ಗೆದ್ದಿದ್ದಾರೆ, ಒಳ್ಳೆಯದಾಗಲಿ. ಆದರೆ, ನಿಜವಾದ ಬಡವರ ಮಕ್ಕಳು ಗೆಲ್ಲಬೇಕು ಎಂಬ ಟ್ಯಾಗ್‌ಲೈನ್ ನನಗೆ ಸಂಪೂರ್ಣವಾಗಿ ಸರಿ ಅನಿಸಲಿಲ್ಲ," ಎಂದು ಹೇಳಿದ್ದು, ಈ ಹೇಳಿಕೆಗಳೇ ಇದೇ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಗಿಲ್ಲಿ ನಟ ಅವರು ಅಶ್ವಿನಿ ಆರೋಪಗಳಿಗೆ ಪ್ರತಿಕ್ರಿಯಿಸಿ, "ಮಾತಿನ ಭರದಲ್ಲಿ ಅವರು ಹಾಗೆ ಹೇಳಿರಬಹುದು" ಎಂದಷ್ಟೇ ನೀಡಿದ್ದಾರೆ. ಈಗಾಗಲೇ ಗಿಲ್ಲಿ ಅವರಿಗೆ ಪ್ರಶಸ್ತಿ ಜೊತೆ ಸಾಕಷ್ಟು ಹಣ ಸಿಕ್ಕಿದೆ. ಅವರಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ, ಮೆರವಣಿಗೆಯನ್ನು ಸಹ ಮಾಡಿದ್ದು, ಈ ವೇಲೆ ಅಭಿಮಾನಿಗಳ ಸಾಗರವೇ ಕಂಡುಬಂದಿತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈಗಲೂ ಸಹ ಗಿಲ್ಲಿ ನಟ ಅವರನ್ನು ಭೇಟಿ ಆಗಲು ಅಭಿಮಾನಿಗಳ ದಂಡೇ ಹರಿದುಬರುತ್ತಿದೆ.
-
SSLC: ಹಿಂದಿ ಪರೀಕ್ಷೆಯಲ್ಲಿ ಅಂಕ ಲೆಕ್ಕಕ್ಕೆ ಇಲ್ಲ: ವಿದ್ಯಾರ್ಥಿಗಳ ಹೊರೆ ಇಳಿಕೆ, ಸರ್ಕಾರದ ನಿರ್ಧಾರಕ್ಕೆ ಬೆಂಬಲ ಕೊಟ್ಟ ಕರವೇ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications