BBK-12: ಸ್ಪರ್ಧಿಗಳು ಕೊಟ್ಟ ಶಾಕ್‌ಗೆ ಕಣ್ಣೀರಿಟ್ಟ ಅಶ್ವಿನಿ ಗೌಡ, ಅಸಲಿ ಆಟ ಈಗ ಶುರು!
Bigg Boss Kannada Season 12: ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಅಶ್ವಿನಿ ಗೌಡ ಅವರು ಆರಂಭದಿಂದಲೂ ಬಿಗ್‌ಬಾಸ್ ಮನೆಯಲ್ಲಿ ಅಬ್ಬರಿಸುತ್ತಿದ್ದರು. ಉಳಿದ ಸ್ಪರ್ಧಿಗಳೊಂದಿಗೆ ಹೆಚ್ಚು ಕಿರಿಕ್ ಮಾಡಿಕೊಂಡಿದ್ದೂ ಅವರೇ. ಇನ್ನು ರಕ್ಷಿತಾ ಶೆಟ್ಟಿ ಜೊತೆ ಅಶ್ವಿನಿ ಅವರ ಗಲಾಟೆ ತಾರಕಕ್ಕೇರಿತ್ತು. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಕೆಲವರು ಮನೆಯಿಂದ ಹೊರಗೆ ಬಂದರೆ, ಈಗಷ್ಟೇ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈಗ ಎಲ್ಲರ ದೃಷ್ಟಿ ಅಶ್ವಿನಿ ಗೌಡ ಅವರ ಮೇಲೆ ವಾಲಿದ್ದು, ಬಿಗ್ ಶಾಕ್ ನೀಡಿದ್ದಾರೆ. ಬಿಗ್‌ಬಾಸ್ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದು, ಅಲ್ಲದೆ ಯಾರು ಈ ರೇಸ್‌ನಿಂದ ಹೊರಗೆ ಉಳಿಯಬೇಕು ಎಂದು ಆಯ್ಕೆ ಮಾಡುವ ಅವಕಾಶವನ್ನೂ ಸ್ಪರ್ಧಿಗಳಿಗೆ ನೀಡಿದ್ದಾರೆ.
ಹೌದು ಈ ವಾರ ಬಿಗ್‌ಬಾಸ್ ಮನೆಯು ತಮ್ಮ ಮನೆಯ ಮೊಟ್ಟಮೊದಲ ಕ್ಯಾಪ್ಟನ್ ಅನ್ನು ಹೊಂದಲಿದೆ ಎಂದು ಹೇಳಿದೆ. ಇದನ್ನು ಕೇಳಿ ಮನೆಮಂದಿ ಎಲ್ಲರೂ ಶಾಕ್ ಆಗಿದ್ದಾರೆ. ಅಶ್ವಿನಿಗೌಡ ಕೂಡ ಕ್ಯಾಪ್ಟನ್ ರೇಸ್‌ನಲ್ಲಿ ಇರಬೇಕಾದ ಸ್ಪರ್ಧಿ ಎನ್ನುವುದು ಪ್ರೇಕ್ಷಕರ ಮಾತು. ಆದರೆ ಸ್ಪರ್ಧಿಗಳು ಅಶ್ವಿನಿ ಅವರಿಗೆ ಕ್ಯಾಪ್ಟನ್ ಪಟ್ಟ ತಪ್ಪಿಸಲು ಅಸ್ತ್ರ ಬಳಸಿದ್ದಾರೆ. ಅರ್ಹತೆ ಇಲ್ಲದ ಸ್ಪರ್ಧಿಯನ್ನ ಕ್ಯಾಪ್ಟನ್ಸಿಯಿಂದ ಹೊರಗೆ ಇಡಬೇಕು ಎಂದು ಸೂಚಿಸಿದ್ದು, ಬಹುತೇಕರು ಅಶ್ವಿನಿ ಗೌಡ ಅವರ ಹೆಸರನ್ನೇ ಸೂಚಿಸಿದ್ದಾರೆ. ಅಶ್ವಿನಿ ಅವರಿಗೆ ಕ್ಯಾಪ್ಟನ್ಸಿ ಕೊಟ್ಟರೆ ಡಾಮಿನೇಷನ್ ಮಾಡೋದು ಹೆಚ್ಚಾಗುತ್ತೆ ಎಂದು ಸ್ಪರ್ಧಿಗಳು ಕಾರಣ ನೀಡಿದ್ದಾರೆ.

ತುಂಬಾ ಕಷ್ಟಪಟ್ಟು ಆಟ ಆಡಿದ್ದೀನಿ. ರೇಸ್‌ಗೆ ಬಿಡಲ್ಲ ಅಂದ್ರೆ ಯಾವ ಕುದುರೆ ಗಟ್ಟಿ ಅಂತ ಹೇಗೆ ಗೊತ್ತಾಗುತ್ತೆ? ಎಂದು ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಅವಮಾನಗಳಾದಾಗ ಅದನ್ನು ಮರೆಯೋಕೆ ಆಗಲ್ಲ ಎಂದು ಜಾಹ್ನವಿ ಬಳಿ ಕಣ್ಣೀರಿಡುತ್ತಾ ಅಶ್ವಿನಿ ಹೇಳಿಕೊಂಡಿದ್ದಾರೆ. ಈ ಪ್ರೋಮೋ ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಅಸಲಿಗೆ ಅಶ್ವಿನಿ ಅವರನ್ನು ಕ್ಯಾಪ್ಟನ್ ರೇಸ್‌ನಿಂದ ನಿಜವಾಗಿಯೂ ಹೊರಗೆ ಇಡ್ತಾರಾ? ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ನನ್ನ ಗುಂಡಿ ನಾನೇ ತೋಡಿಕೊಂಡ್ನಾ?
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟ ಬಳಿಕ ಬಿಗ್‌ಬಾಸ್ ಮನೆಯ ಸ್ವರೂಪ ಬದಲಾಗಿದೆ. ಆಟದಲ್ಲಿ ಕೂಡ ಬದಲಾವಣೆ ಕಾಣುತ್ತಿದೆ. ಜಾಹ್ನವಿ ಕೂಡ ನನ್ನ ಗುಂಡಿ ನಾನೇ ತೋಡಿಕೊಂಡ್ನಾ ಎಂದು ಗಳಗಳನೆ ಅತ್ತಿದ್ದಾರೆ. ಆಗ ಅಶ್ವಿನಿ ಗೌಡ ಜಾಹ್ನವಿ ಅವರನ್ನು ಸಮಾಧಾನ ಮಾಡಿದ್ದಾರೆ. ಆ ರೀತಿ ಏನೂ ಇಲ್ಲ, ಮನೆಯಲ್ಲಿ ಬೇರೆ ಯಾರೂ ತಪ್ಪು ಮಾಡಿಲ್ವಾ? ಮೊದಲು ಅದರಿಂದ ಹೊರಗೆ ಬನ್ನಿ ಎಂದು ಧೈರ್ಯ ತುಂಬಿದ್ದಾರೆ.












Click it and Unblock the Notifications