Actor Darshan Bail: ನಟ ದರ್ಶನ್ & ಪವಿತ್ರಾ ಗೌಡಗೆ ಇಂದು ಮಹತ್ವದ ದಿನ
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಇನ್ನು ಇಂದು (ಅಕ್ಟೋಬರ್ 4) ಪ್ರಕರಣ ಎ1 ಆರೋಪಿ ಪವಿತ್ರಾ ಗೌಡ & ಎ2 ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಇವರಿಬ್ಬರಿಗೆ ಇದು ಮಹತ್ವದ ದಿನವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ನಟ ದ ದರ್ಶನ್ ಯಾವಾಗ ಹೊರಗಡೆ ಬರುತ್ತಾರೆಯೋ ಎಂದು ಕಾತರದಿಂದ ಕಾದುಕುಳಿತಿದ್ದಾರೆ.

ಕಳೆದ ಬಾರಿ ದರ್ಶನ್‌ಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿ, ಅವನನ್ನು ಕರೆದುಕೊಂಡು ಬರಲು ಆಪ್ತರು ಹೆಲಿಕಾಪ್ಟರ್ ಬುಕ್ ಮಾಡಿದ್ದರು ಎಂದು ತಿಳಿದುಬಂದಿತ್ತು. ಆದರೆ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 4ಕ್ಕೆ ಮುಂದೂಡಿಕೆಯಾಗಿತ್ತು. ಇದರಿಂದ ಆಪ್ತರು ದರ್ಶನ್‌ನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಬರುವ ಆಸೆ ನಿರಾಸೆಯಾಗಿತ್ತು.
ಇನ್ನು ಇಂದು (ಅಕ್ಟೋಬರ್ 4) ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ದರ್ಶನ್‌ಗೆ ಜಾಮೀನು ಸಿಗಲಿದೆ ಎನ್ನುವ ಭರವಸೆಯಲ್ಲಿ ಅಭಿಮಾನಿಗಳು ಹಾಗೂ ಪತ್ನಿ ವಿಜಯಲಕ್ಷ್ಮಿ, ಕುಟುಂಬಸ್ಥರು ಸೇರಿದಂತೆ ಆಪ್ತರು ಇದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿದ್ದು, ಇಂದು (ಅಕ್ಟೋಬರ್ 4) ಎಸ್‌ಪಿಪಿ ಪ್ರತಿವಾದ ಮಂಡಿಸಲಿದ್ದಾರೆ. ಆದರೆ, ದರ್ಶನ್ ಪರ ವಕೀಲರು ವಾದ ಮಂಡಿಸುವುದಕ್ಕೆ ಸಮಯಾವಕಾಶ ಕೇಳಿದ್ದರಿಂದ ಇಂದಿಗೆ ವಿಚಾರಣೆ ಮುಂಡೂಡಿಕೆ ಮಾಡಲಾಗಿತ್ತು. ಆದ್ದರಿಂದ ಇಂದು ನಡೆಯುವ ಜಾಮೀನು ಅರ್ಜಿ ವಿಚಾರಣೆ ಭಾರೀ ಮಹತ್ವ ಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 30ರಂದು 57ನೇ ಸೆಷನ್ ಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರು ವಾದ ಮಂಡನೆ ಮಾಡಲು ಅವಕಾಶ ಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದ್ದು, ಈ ಹಿನ್ನೆಲೆ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು.











Click it and Unblock the Notifications