AR Rahman Divorce: ಡಿವೋರ್ಸ್ ಬಗ್ಗೆ ಎ.ಆರ್ ರೆಹಮಾನ್ ಫಸ್ಟ್ ರಿಯಾಕ್ಷನ್, ಮುರಿದ ಹೃದಯಗಳು ಒಂದಾಗಲ್ಲ !
AR Rahman and Saira Banu divorce: ಭಾರತೀಯ ಸಂಗೀತ ಕ್ಷೇತ್ರದ ಮಾಂತ್ರಿಕ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ಅವರ ದಾಂಪತ್ಯ ಜೀವನ ಮುರಿದಿದೆ. ಪತ್ನಿ ಸಾಯಿರಾ ಬಾನು ಅವರು ಎ.ಆರ್ ರೆಹಮಾನ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ಇದು ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಇದೀಗ ಎ.ಆರ್ ರೆಹಮಾನ್ ಅವರು ಇದೇ ಮೊದಲ ಬಾರಿ ಅವರ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಎ.ಆರ್ ರೆಹಮಾನ್ ಅವರು ತಮಿಳುನಾಡಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಎವರ್ ಗ್ರೀನ್ ಹಾಡುಗಳಿಗೆ ಅವರು ಜೀವ ತುಂಬಿದ್ದರು. ಆದರೆ, ಅವರ ಜೀವನದಲ್ಲಿ ಇದೀಗ ಶೋಕ ಗೀತೆಯೊಂದು ಶುರುವಾಗಿದೆ.
ಇವರಿಬ್ಬರದ್ದು ಸುದೀರ್ಘ 29 ವರ್ಷಗಳ ಪಯಣ. ಈ ಸುದೀರ್ಘ ಪಯಣದಲ್ಲಿ ಇಬ್ಬರು ಅನ್ಯೂನ್ಯವಾಗಿ ಸಾಗಿದ್ದರು. ರೆಹಮಾನ್ ಅವರ ಹಲವು ಯಶಸ್ಸು, ಏಳು - ಬೀಳುಗಳಲ್ಲಿ ಅವರ ಪತ್ನಿ ಸಾಯಿರಾ ಬಾನು ಅವರು ಜೊತೆಯಾಗಿದ್ದರು. ರೆಹಮಾನ್ ಸಂಗೀತ ಕ್ಷೇತ್ರದ ಮಾಂತ್ರಿಕ ನಿಜ. ಆದರೆ, ಅವರೂ ಸೋಲಿನ ನೋವುಂಡಿದ್ದಾರೆ. ಅವರು ಒಂದು ಹಂತದಲ್ಲಿ ಸೋಲುಗಳಿಂದ ಆಘಾತಕ್ಕೆ ಒಳಗಾಗಿದ್ದೂ ಇದೆ. ಆದರೆ, ಆ ಎಲ್ಲಾ ಪಯಣದಲ್ಲೂ ಸಾಯಿರಾ ಅವರು ಅವರೊಂದಿಗೆ ಇದ್ದರು. ಆದರೆ, ನೆನ್ನೆ ನವೆಂಬರ್ 19ರಂದು ಇಬ್ಬರೂ ದೂರವಾಗುವ ಸುದ್ದಿ ಬಂದಿದೆ.

ದಾಂಪತ್ಯ ಪಯಣವನ್ನು ಮುರಿದುಕೊಳ್ಳುತ್ತಿರುವ ಬಗ್ಗೆ ಎ.ಆರ್ ರೆಹಮಾನ್ ಅವರು, ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೆಹಮಾನ್ ಅವರ ಮಡದಿ ಸಾಯಿರಾ ಅವರು ಗಂಡನಿಂದ ಬೇರೆಯಾಗುತ್ತಿದ್ದೇನೆ ಎಂದು ಘೋಷಿಸಿಕೊಂಡಿದ್ದರು. ಸಾಯಿರಾ ಅವರ ವಕೀಲ ಶಾ ಎನ್ನುವವರು ವಿಚ್ಛೇದನ ವಂದನಾ ಪಡೆಯುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು.
ದಂಪತಿಗಳಿಬ್ಬರೂ ಸೌಮ್ಯ ಸ್ವಭಾವದವರು, ಇಬ್ಬರ ಅನ್ಯೂನ್ಯತೆ ಹಾಗೂ ಪ್ರೀತಿಯನ್ನು ನೋಡಿ ಹಲವರು ಅಸೂಯೆ ಪಡುವಷ್ಟು ಇಬ್ಬರೂ ಒಂದಾಗಿದ್ದರು. ಇಬ್ಬರೂ ಎಂದೂ ಅವರ ವೈಯಕ್ತಿಕ ಜೀವನದ ವಿಷಯಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಅಥವಾ ಮಾತನಾಡಿದ್ದೇ ಇಲ್ಲ ಎನ್ನುವಷ್ಟು ವಿರಳ ಎನ್ನಬಹುದು. ಸಂದರ್ಶನ ಹಾಗೂ ಸಭೆ, ಸಮಾರಂಭಗಳಲ್ಲೂ ಇಬ್ಬರೂ ವಿವಾದಕ್ಕೆ ಒಳಗಾಗುವ ವಿಷಯಗಳ ಬಗ್ಗೆ ಒಮ್ಮೆಯೂ ಮಾತನಾಡಿರಲಿಲ್ಲ. ಅಷ್ಟೊಂದು ನಾಜೂಕಾಗಿ ಇಬ್ಬರು ವೈಯಕ್ತಿಕ ಜೀವನ ಹಾಗೂ ಸಾರ್ವಜನಿಕ ಜೀವನದ ನಡುವೆ ಒಂದು ಗೆರೆ ಎಳೆದುಕೊಂಡಿದ್ದರು. ವಿಚ್ಛೇದನದ ವಿಷಯವನ್ನೂ ಅಷ್ಟೇ ನಾಜೂಕಾಗಿಯೇ ನಿಭಾಯಿಸಿದ್ದಾರೆ.

ವಿಚ್ಛೇದನ ಬಗ್ಗೆ .ಆರ್ ರೆಹಮಾನ್ ಹೇಳಿದ್ದೇನು ?
ಸಾಯಿರಾ ಬಾನು ಅವರಿಂದ ಎ.ಆರ್ ರೆಹಮಾನ್ ಅವರು ದೂರವಾಗುತ್ತಿರುವುದು ಡಿವೋರ್ಸ್ ಪಡೆದುಕೊಳ್ಳುತ್ತಿರುವುದು ಇದೀಗ ಅಧಿಕೃತವಾಗಿದೆ. ಡೈವೋರ್ಸ್‌ನ ಬಗ್ಗೆ ಎ.ಆರ್ ರೆಹಮಾನ್ ಟ್ವೀಟ್ ಮಾಡಿ ಮನದ ನೋವನ್ನು ಹಂಚಿಕೊಂಡಿದ್ದಾರೆ.
ನಾವಿಬ್ಬರೂ ಅನ್ಯೂನ್ಯವಾಗಿ 30 ವರ್ಷದ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಕನಸು ಕಂಡಿದ್ದೆವು. ಆದರೆ, ಇದೆಲ್ಲವೂ ಅನಿರೀಕ್ಷಿತ ಅಂತ್ಯ ಕಂಡಿದೆ ಎಂದೆನಿಸುತ್ತದೆ ಎಂದು ರೆಹಮಾನ್ ಹೇಳಿದ್ದಾರೆ. ಮುಂದುವರಿದು, ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ (ದೇವರಿಗೂ ಮರುಕ ಹುಟ್ಟಿರಬಹುದು) ಅಲುಗಾಡಿರಬಹುದು. ಆದರೆ, ಈ ಬಿರುಕಿನ ಪರಿಸ್ಥಿತಿಯಲ್ಲಿ ಒಡೆದ ಹೃದಯಗಳು ಮತ್ತೆ ಸೇರಲು ಸಾಧ್ಯವಿಲ್ಲ. ನಾವೇ ಅದಕ್ಕೊಂದು ಅರ್ಥವನ್ನು ಕಂಡುಕೊಳ್ಳುತ್ತೇವೆ. ಒಡೆದಿರುವ ತುಣುಕುಗಳು ಮತ್ತೆ ಒಂದಾಗಲು ಸಾಧ್ಯವಿಲ್ಲ. ನನ್ನೆಲ್ಲ ಸ್ನೇಹಿತರಿಗೂ ಈ ಸಮಯದಲ್ಲಿ ನಮ್ಮೊಂದಿಗೆ ಇರುವುದಕ್ಕೆ ಹಾಗೂ ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕೆ ಧನ್ಯವಾದಗಳು. ನಾವು ಈ ನಾಜೂಕಿನ ದಾರಿಯಲ್ಲಿ ಸಾಗಲಿದ್ದೇವೆ.. ಎಂದು ಹೇಳಿದ್ದಾರೆ.
ಕೊನೆಯಲ್ಲಿ #arrsairaabreakup ಎನ್ನುವ ಹ್ಯಾಷ್ ಟ್ಯಾಗ್ ಅನ್ನೂ ರೆಹಮಾನ್ ಅವರು ಬಳಸಿದ್ದಾರೆ.












Click it and Unblock the Notifications