Anushka Shetty: ಸಿನಿಮಾ ಸೋಲಿನಿಂದ ಅನುಷ್ಕಾ ಶೆಟ್ಟಿ‌ ಶಾಕಿಂಗ್‌ ನಿರ್ಧಾರ, ಅಭಿಮಾನಿಗಳಿಗೆ ಬೇಸರ

ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಇತ್ತೀಚೆಗೆ ಅವರ ಬಹುನಿರೀಕ್ಷಿತ ಘಾಟಿ ಸಿನಿಮಾ ರಿಲೀಸ್‌ ಆಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಇದು ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಬಾಹುಬಲಿ ನಂತರ ಅನುಷ್ಕಾ ಶೆಟ್ಟಿ ಹಲವು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮತ್ತೆ ವಾಪಸ್‌ ಆಗಿದ್ದ ಅವರು ಘಾಟಿ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟಿದ್ದರು. ಆದರೆ ಸಿನಿಮಾ ಸೋಲಿನ ಬೆನ್ನಲ್ಲೇ ಅವರು ಶಾಕಿಂಗ್‌ ನಿರ್ಧಾರ ತೆಗೆದುಕೊಂಡಿದ್ದಾರೆ.

ಅನುಷ್ಕಾ ಅವರ ಬಹುನಿರೀಕ್ಷಿತ ಚಿತ್ರ ಘಾಟಿ ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ಈ ಚಿತ್ರವು ಒಂದು ವಾರದಲ್ಲಿ ಭಾರತದಲ್ಲಿ ಕೇವಲ 6.64 ಕೋಟಿ ಗಳಿಸಿತು. ಕ್ರಿಶ್ ಜಾಗರ್ಲಮುಡಿ ಬರೆದು ನಿರ್ದೇಶಿಸಿದ ಘಾಟಿ ಚಿತ್ರದಲ್ಲಿ ವಿಕ್ರಮ್ ಪ್ರಭು ಜೊತೆಗೆ ಅನುಷ್ಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ಈ ಚಿತ್ರವನ್ನು ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ವಿಭಿನ್ನ ಪಾತ್ರದ ಮೂಲಕ ತಯಾರಾಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೌಂಡ್‌ ಮಾಡುವ ನಿರೀಕ್ಷೆಯಲ್ಲಿತ್ತು.

Anushka Shetty Shocking Decision After Movie Flop Fans Disappointed

ಇಂದು ಎಕ್ಸ್‌ನಲ್ಲಿ ವಿಶೇಷವಾದ ಕೈಬರಹದ ಫೋಟೋ ಹಂಚಿಕೊಳ್ಳುವ ಮೂಲಕ ಅನುಷ್ಕಾ ಶೆಟ್ಟಿ ತಮ್ಮ ಮುಂದಿನ ನಿರ್ಧಾರ ಘೋಷಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಘಾಟಿಯ ನೀರಸ ಪ್ರದರ್ಶನದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಸೋಷಿಯಲ್‌ ಮೀಡಿಯಾಗಳಿಗೆ ಗುಡ್‌ಬೈ ಹೇಳಿದ್ದು, ಬ್ರೇಕ್‌ ಪಡೆಯುವುದಾಗಿ ನಟಿ ಅನುಷ್ಕಾ ಶೆಟ್ಟಿ ಘೋಷಿಸಿದ್ದಾರೆ.

ಪತ್ರದಲ್ಲೇನಿದೆ?

ಜಗತ್ತಿಗೆ ಮತ್ತೆ ಸಂಪರ್ಕ ಸಾಧಿಸಲು ಮತ್ತು ಸ್ಕ್ರೋಲಿಂಗ್ ಮೀರಿ ಕೆಲಸ ಮಾಡಲು ವಿರಾಮ ತೆಗೆದುಕೊಳ್ಳುವುದಾಗಿ ಅನುಷ್ಕಾ ಬರೆದಿದ್ದಾರೆ. ನೀಲಿ ಬೆಳಕನ್ನು ಮೇಣದಬತ್ತಿಯ ಬೆಳಕಿಗೆ ವ್ಯಾಪಾರ ಮಾಡುತ್ತಿದ್ದೇನೆ ಎಂದು ಸ್ಮೈಲ್ ಎಮೋಜಿ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ, ಜಗತ್ತಿಗೆ ಮತ್ತೆ ಸಂಪರ್ಕ ಸಾಧಿಸಲು ಮತ್ತು ಸ್ಕ್ರೋಲಿಂಗ್ ಮೀರಿ ಕೆಲಸ ಮಾಡಲು, ನಾವೆಲ್ಲರೂ ನಿಜವಾಗಿಯೂ ಪ್ರಾರಂಭಿಸಿದ ಸ್ಥಳಕ್ಕೆ ಮರಳುತ್ತಿದ್ದೇನೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಹೆಚ್ಚಿನ ಕಥೆಗಳು ಮತ್ತು ಹೆಚ್ಚಿನ ಪ್ರೀತಿಯೊಂದಿಗೆ ಭೇಟಿಯಾಗುತ್ತೇವೆ. ಯಾವಾಗಲೂ ನಗು, ಪ್ರೀತಿ ಶಾಶ್ವತವಾಗಿರಲಿ. ನಿಮ್ಮ ಅನುಷ್ಕಾ ಶೆಟ್ಟಿ ಎಂದು ಅವರು ಬರೆದಿದ್ದಾರೆ.

ಅನುಷ್ಕಾ ಅವರ ಮುಂದಿನ ಸಿನಿಮಾ ರೋಜಿನ್ ಥಾಮಸ್ ಅವರ ಹಾರರ್ ಫ್ಯಾಂಟಸಿ ಥ್ರಿಲ್ಲರ್ ಕಥನರ್ - ದಿ ವೈಲ್ಡ್ ಸೋರ್ಸರರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಅನುಷ್ಕಾ ಅವರ ಮಲಯಾಳಂ ಚೊಚ್ಚಲ ಪ್ರವೇಶವಾಗಲಿದೆ. ಈ ಚಿತ್ರದಲ್ಲಿ ಅವರು ನೀಲಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅನುಷ್ಕಾ ಜೊತೆಗೆ, ಈ ಚಿತ್ರದಲ್ಲಿ ಜಯಸೂರ್ಯ, ಪ್ರಭುದೇವ ಮತ್ತು ವಿನೀತ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಿಂದ ಅನುಷ್ಕಾ ಬ್ರೇಕ್‌ ಪಡೆದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+