ಕುಮಾರಸ್ವಾಮಿ ಪರಿಚಯ ಎಂದು ಚಂದನ್‌ ಗೌಡಗೆ ವಂಚಿಸಿದ್ರಾ ಡ್ರೋನ್‌ ಪ್ರತಾಪ್‌?: ದೂರು ದಾಖಲು

ಬೆಂಗಳೂರು, ಫೆಬ್ರವರಿ 03: ಕನ್ನಡ ಬಿಗ್‌ ಬಾಸ್ ಸೀಜನ್‌ 10ರ ರನ್ನರ್‌ ಅಪ್‌ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವ ನೆಪದಲ್ಲಿ ಡ್ರೋನ್ ಪ್ರತಾಪ್ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

ಬೆಂಗಳೂರಿನ ಟಿ.ದಾಸರಹಳ್ಳಿ ಚಂದನ್ ಕುಮಾರ್ ಗೌಡ ಎನ್ನುವವರು ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್‌ ಅವರಿಗೆ ದೂರು ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪರಿಚಯವಿದೆ ಎಂದು ಹೇಳಿಕೊಂಡಿರುವ ಡ್ರೋನ್ ಪ್ರತಾಪ್, ನಾನು ಆಗಾಗ ಕುಮಾರಸ್ವಾಮಿ ಅವರನ್ನು ಫಾರ್ಮ್ ಹೌಸ್‌ಗೆ ಹೋಗಿ ಭೇಟಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Another Case Filed Against Drone Prathap In Bengaluru Commissioner Office

ಚಂದನ್ ಕುಮಾರ್ ಗೌಡಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದ ಡ್ರೋನ್ ಪ್ರತಾಪ್ ಎರಡು ಲಕ್ಷ ಹಣ ಪಡೆದು ಬಿಗ್ ಬಾಸ್‌ನಿಂದ ಹೊರಬಂದ ನಂತರ ಕರೆ ಸ್ವೀಕರಿಸದೇ ಹಣ ಹಿಂದಿರುಗಿಸದೆ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಂದನ್ ಕುಮಾರ್ ಗೌಡ ದೂರು ನೀಡಿದ್ದಾರೆ.

ಚಂದನ್ ಗೌಡ ಕೊಟ್ಟ ದೂರಿನಲ್ಲೇನಿದೆ..?

ವಿಷಯ: ಪ್ರತಾಪ್. ಎನ್.ಎಂ. (ಅ) ಡ್ರೋನ್‌ ಪ್ರತಾಪ್‌ರವರು ಹಣ ಪಡೆದು ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುವುದಾಗಿ ಹೇಳಿ ಮೋಸ ಹಾಗೂ ವಂಚನೆ ಮಾಡಿರುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಾಪ್. ಎನ್.ಎಂ. (ಅ) ಡ್ರೋನ್‌ ಪ್ರತಾಪ್ ಆದ ಇವರು ಜಿಲ್ಲಾ ಪಂಚಾಯತ್ ತಳಗವಾದಿ ಟಿಕೆಟ್ ಕೊಡಿಸುವುದಾಗಿ ಹೇಳಿ ನನ್ನಿಂದ ಸುಮಾರು. ರೂ. 2.00 ಲಕ್ಷ ರೂಪಾಯಿ ನಗದು ರೂಪದಲ್ಲಿ ಪಡೆದು ತನಗೆ ಮಾನ್ಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರವರು ಪರಿಚಯವಿದ್ದು ಅವರ ಫಾರಂ ಹೌಸ್‌ನಲ್ಲಿ ಆಗಾಗ ಭೇಟಿ ನೀಡುವುದಾಗಿ ತಿಳಿಸಿದ್ದಾನೆ.

ನನ್ನಿಂದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಷೋ ಮನೆಗೆ ಆಯ್ಕೆ ಆಗಲು ಪ್ರಚಾರ ಬೇಕೆಂದು ನನ್ನ ಸಹಾಯ ಕೇಳಿರುತ್ತಾನೆ. ಆದ್ದರಿಂದ ನಾನು ಅವನಿಗೆ ಬಿಗ್ ಬಾಸ್ ಮನೆಗೆ ಹೋಗಲು ನಾನು ನನ್ನ ಮನೆಯಲ್ಲಿ ಅವನನ್ನು ಇರಿಸಿಕೊಂಡು ಸ್ಥಳೀಯವಾಗಿ ಅವನಿಗೆ ಡ್ರೋನ್‌ ಹಾರಿಸಲು ಸಲುವಾಗಿ ಸ್ಥಳೀಯ ಸಹಕಾರ ಹಾಗೂ ಸಹಾಯ ಮಾಡಿರುತ್ತೇನೆ.

ನಾನು ಸ್ವ-ಇಚ್ಛೆಯಿಂದ ಅವನು ಗೆದ್ದು ಬರಲೆಂದು ಆಶಿಸಿ ಅವನ ಪರವಾಗಿ ಪ್ರಚಾರ ಮಾಡಿ ಹಾಗೂ ಮತ ಹಾಕಲು ವಿವಿಧ ಮಾಧ್ಯಮ ಮೂಲಕ ಹಾಗೂ ಸ್ನೇಹ ಬಳಗದಲ್ಲೂ ಬೇಡಿ ಕೊಂಡಿರುತ್ತೇನೆ. ಇಷ್ಟೆಲ್ಲಾ ನನ್ನನ್ನು ಉಪಯೋಗಿಸಿಕೊಂಡಿದ್ದು ಸಹ ಅಲ್ಲಿಂದ ಬಂದ ನಂತರ ಸುಮಾರು ಬಾರಿ ಅವರ ದೂರವಾಣಿ ಸಂಖ್ಯೆಗೆ ಕರೆ ಹಾಗೂ ಮೆಸೇಜ್‌ ಕಳುಹಿಸಿದರು ಸಹ ಉತ್ತರಿಸುತ್ತಿಲ್ಲ, ಇದರಿಂದ ಮನನೊಂದು ನನಗಾಗಿರುವ ಮೋಸ ಮತ್ತು ವಂಚನೆ ಮಾಡಿರುವ ಬಗ್ಗೆ ಸೂಕ್ತ ನ್ಯಾಯ ಒದಗಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+