Anchor Aparna Death: "ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ"
Kichcha Sudeepa: ಕನ್ನಡದ ನಟಿ, ನಿರೂಪಕಿ, ರಾಜ್ಯ ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಜುಲೈ 11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದಿದ್ದು, ಅಪರ್ಣಾ ನಿಧನಕ್ಕೆ ಇಡೀ ಸ್ಯಾಂಡಲ್‌ವುಡ್ ಸಂತಾಪ ಸೂಚಿಸಿದೆ. ಹಾಗೆಯೇ ಇದೀಗ ನಟ ಕಿಚ್ಚ ಸುದೀಪ್ ಅವರು ತಮ್ಮ ಟ್ವೀಟ್ ಮೂಲಕ "ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ" ಎಂದು ಬರೆದು ಸಂತಾಪ ಸೂಚಿಸಿದ್ದಾರೆ.
ನಿರೂಪಪಿ ಅಪರ್ಣಾ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗುರುವಾರ (ಜುಲೈ 11) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದ ಅಪರ್ಣಾ ಅವರು ತಮ್ಮ ಕಂಚಿನ ಕಂಟದ ಮೂಲಕ ಕನ್ನಡ ಜನರಿಗೆ ಅಚ್ಚುಮೆಚ್ಚಾಗಿದ್ದರು. ನಿರೂಪಣೆ ವೇಳೆ ಅವರ ಸುಮಧುರ ದನಿಯನ್ನು ಕೇಳಲೆಂದೇ ಜನರು ನೆರೆಯುತ್ತಿದ್ದು, ಅಲ್ಲದೆ ಅವರ ಆ ಸುಮಧುರ ದನಿ ಅಪಾರ ಅಭಿಮಾನಿ ಬಳಗವೇ ಇತ್ತು.

ಇನ್ನು ಈಗಾಗಲೇ ಕನ್ನಡ ಚಿತ್ರರಂದ ಸಿನಿ ತಾರೆಯರು, ರಾಜಕೀಯ ಗಣ್ಯರು ಅಪರ್ಣಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ಕಣ್ಣೀರಿಟ್ಟಿದ್ದಾರೆ. ಇನ್ನು ಇದೀಗ ನಟ ಕಿಚ್ಚ ಸುದೀಪ್ ಅವರು "ಅಪರ್ಣಾ ಮೇಡಮ್, ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ". ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
This is really sad.
— Kichcha Sudeepa (@KicchaSudeep) July 12, 2024
Aparna mam,,,
"ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ".
Prayers for her soul.🙏🏼
Deepest condolences to her family.
"ನಾಡಿನ ಅತ್ಯಂತ ಪ್ರಖ್ಯಾತ ಬಹು ಭಾಷಾ ನಿರೂಪಕಿ, ಉತ್ತಮ ನಟಿ, ನಮ್ಮ ಪರಿಷತ್ತು ಮತ್ತು ಬಹು ಮುಖ್ಯ ಸಮಾರಂಭಗಳಲ್ಲಿ ತುಂಬಾ ಸೃಜನ ಶೀಲ ನಿರೂಪಕಿಯಾಗಿದ್ದರು. ಅಲ್ಲದೆ ಅನೇಕ ರಾಷ್ಟ್ರೀಯ ಸಮಾರಂಭಗಳಲ್ಲಿಯೂ ತನ್ನ ಸ್ಪಷ್ಟ ಹಾಗೂ ಸುಂದರ ಕನ್ನಡದಿಂದ ಸಮಾರಂಭಗಳಿಗೆ ಒಂದು ವಿಶಿಷ್ಟ ಮೆರುಗನ್ನು ತಂದುಕೊಡುತ್ತಿದ್ದ ಅಪರೂಪದ ಕಲಾವಿದೆ ಶ್ರೀಮತಿ ಅಪರ್ಣಾ ಅವರ ನಿಧನದ ಸುದ್ದಿ ತುಂಬಾ ಅಘಾತ ತಂದಿದೆ. ಆವರ ಕುಟುಂಬಕ್ಕೆ ದು:ಖ ತಡೆದುಕೊಳ್ಳುವ ಶಕ್ತಿ ತುಂಬೋಣ ಎಂದು ಹುಲಿಕಲ್ ನಟರಾಜ್ ಕಣ್ಣೀರಿಟ್ಟಿದ್ದಾರೆ.
1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾ ಮೂಲಕ ಚಂದನವನಕ್ಕೆ ಅಪರ್ಣಾ ಟವರು ಆಗಮಿಸಿದ್ದು, ಬಳಿಕ ತುಂಬಾ ಚಿತ್ರಗಳಲ್ಲಿ ನಟನೆ ಮಾಡಿದರು. ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು 7,000ಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದಾರೆ.
ಅಪರ್ಣಾ ಅವರು ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ.ಎಸ್. ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣಾ, ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿದ್ದು, ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದು, ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಇನ್ನು ತಂದೆಯ ನಿಧನದ ಬಳಿಕ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದು ನೆಲೆಸಿದ್ದು, ಬಳಿಕ ನಾಗರಾಜ್ ವಸ್ತಾರೆ ಜೊತೆಗೆ ವಿವಾಹ ಆದರು. ಆದರೆ, ಈ ಜೋಡಿಗೆ ಮಕ್ಕಳಾಗಿಲ್ಲ. ಆ ಕೊರಗೂ ಅಪರ್ಣಾ ಅವರನ್ನು ಕಾಡಿತ್ತು.
ಅವರು ಆಕಾಶವಾಣಿಯಲ್ಲಿ ನಿರೂಪಣೆ ಮಾಡಿ ಎಲ್ಲರ ಮನೆ ಮಾತಾಗಿದ್ದರಾಗಿದ್ದರು. 1993-2010ರ ವರೆಗೂ ಆಕಾಶವಾಣಿಯಲ್ಲಿ ಕೆಲಸ ಮಾಡಿದ ಅವರು, ಟಿ.ಎನ್ ಸೀತಾರಾಮ್ ಅವರ ಮಾಯಾಮೃಗ, ಮುಕ್ತ ಧಾರವಾಹಿಗಳಲ್ಲೂ ನಟನೆ ಮಾಡುವ ಅವಕಾಶವನ್ನು ಪಡೆದುಕೊಂಡರು. ಜೊತೆಗೆ ನಿರೂಪಣೆ, ಆರೋಗ್ಯ ಕಾರ್ಯಕ್ರಮಗಳು, ನೇರಪ್ರಸಾರ ಕಾರ್ಯಕ್ರಮಗಳು, ಸಂದರ್ಶನಗಳನ್ನೂ ನಡೆಸಿಕೊಟ್ಟರು. ಅಲ್ಲದೆ, ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಮಜಾಟಾಕೀಸ್ ಮೂಲಕ ಇನ್ನೂ ಎತ್ತರಕ್ಕೆ ಬೆಳೆದರು.












Click it and Unblock the Notifications