ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಆ್ಯಂಕರ್ ಅನುಶ್ರೀ ಹೇಳಿದ್ದು ಏನು?
ವಿಕೃತ ಮನಸ್ಸು ಇರುವವರು ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಪೋಸ್ಟ್ ಹಾಕುತ್ತಾ ಸಮಾಜದ ನೆಮ್ಮದಿ ಹಾಳು ಮಾಡುತ್ತಾರೆ. ಅದೇ ರೀತಿ ದೊಡ್ಮನೆ ಸೊಸೆ & ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರ ಬಗ್ಗೆಯೂ ಇದೇ ರೀತಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಒಬ್ಬ ಕಿಡಿಗೇಡಿ. ಈ ಬಗ್ಗೆ ದೊಡ್ಡ ಕಿಚ್ಚು ಹೊತ್ತಿಕೊಂಡಿದ್ದು, ಅಶ್ವಿನಿ ಪುನೀತ್ ಪರ ಕನ್ನಡಿಗರು ನಿಂತಿದ್ದಾರೆ. ಹೀಗಿದ್ದಾಗಲೇ ಆ್ಯಂಕರ್ ಅನುಶ್ರೀ ಹೇಳಿದ್ದು ಏನು ಗೊತ್ತೆ? ಮುಂದೆ ಓದಿ.
ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಈಗ ಗರಂ ಆಗಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್‌ರ ಪತ್ನಿ ಅಶ್ವಿನಿ ಪುನೀತ್ ಅವರ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪ ಹಿನ್ನೆಲೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ನೇರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ಧಗಳನ್ನ ಬಳಸುವವರ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಘಟನೆ ಬಗ್ಗೆ ಆ್ಯಂಕರ್ ಅನುಶ್ರೀ ಖಡಕ್ ಉತ್ತರ ನೀಡಿ, ಅಶ್ವಿನಿ ಪುನೀತ್ ಅವರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

'ಹೆಣ್ಣಾಗಿ ಹುಟ್ಟೋದು ಒಂದು ವರ'
ಈ ಬಗ್ಗೆ ಪೋಸ್ಟ್ ಹಾಕಿರುವ ಆ್ಯಂಕರ್ ಅನುಶ್ರೀ ಅವರು, 'ಹೆಣ್ಣಾಗಿ ಹುಟ್ಟೋದು ಒಂದು ವರ .... ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ ... ಇದೆಲ್ಲ ಗಾಳಿ ಮಾತುಗಳ ಹೆಮ್ಮರ !!! ಈ ಜಾಗದಲ್ಲಿ ನಿಮ್ಮ ತಾಯಿ ಮಡದಿ ಅಥವಾ ಸಹೋದರಿ ಇದ್ದಿದ್ದರೆ ??? ಹೆಣ್ಣಿಗೆ ಗೌರವ ಸಿಗೋದು ... ಒಂದು ಕನಸು ಅಷ್ಟೇ ... ಈ ಕೆಟ್ಟೆ ಬೆಳವಣಿಗೆಗೆ ಕೊನೆಯಿಲ್ಲವೇ ?? ಸ್ತ್ರೀ ಅಂದರೆ ಅಷ್ಟೇ ಸಾಕೆ !!! ಹೆಣ್ಣೆಂದರೆ ಅಂಬಿಕೆ ... ನಿಜ ಮಾಡಿ ಈ ಮೂಢನಂಬಿಕೆ 🙏 Mam we are always with u' ಎಂದು ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಅನುಶ್ರೀ.
ಕನ್ನಡಿಗರ ಪ್ರೀತಿಯ ವ್ಯಕ್ತಿತ್ವ ಅಪ್ಪು!
ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಮನೆ ಡಾ. ರಾಜ್‌ಕುಮಾರ್ ಕುಟುಂಬದ ಕಿರಿಯ ಮಗ ಡಾ. ಪುನೀತ್ ರಾಜ್‌ಕುಮಾರ್ ಅವರು ಎಲ್ಲಾ ವಿಚಾರದಲ್ಲಿ ಕನ್ನಡಿಗರಿಗೆ ಮಾದರಿ. ಹೀಗಾಗಿ, ಕನ್ನಡ ಅಭಿಮಾನಿಗಳ ಕಣ ಕಣದಲ್ಲಿ ಬೆರೆತು ಹೋಗಿದ್ದಾರೆ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು. ಹೀಗಿದ್ದಾಗಲೇ ಪುನೀತ್ ಅವರ ಪತ್ನಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿ, ಸೈಕೋ ಮನಸ್ಥಿತಿ ಇರುವ ವ್ಯಕ್ತಿತ್ವಗಳು ಮನಸ್ಸಿಗೆ ಬಂದಂತೆ ಮಾತನಾಡಿವೆ.
ಹೀಗೆ ವಿಕೃತವಾಗಿ ಪೋಸ್ಟ್ ಹಾಕಿದ ನಂತರ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಈ ಬಗ್ಗೆ ಕನ್ನಡಿಗರು ಒಟ್ಟಾಗಿ ಬುದ್ಧಿ ಕಲಿಸಲು ಮುಂದಾಗಿದ್ದಾರೆ. ಹಾಗೇ ಸೆಲೆಬ್ರಿಟಿಗಳು ಕೂಡ ಇದರ ಬಗ್ಗೆ ಒಗ್ಗಟ್ಟಿನಿಂದ ಅಶ್ವಿನಿ ಪುನೀತ್ ಅವರ ಬೆನ್ನಿಗೆ ನಿಂತು, ಕಿಡಿಗೇಡಿಗಳಿಗೆ ಬುದ್ಧಿ ಹೇಳ್ತಿದ್ದಾರೆ. ಇದೇ ವೇಳೆ ಆ್ಯಂಕರ್ ಅನುಶ್ರೀ ಅವರು ಕೂಡ ಮಹತ್ವದ ಪೋಸ್ಟ್ ಹಾಕಿದ್ದಾರೆ.
ಒಟ್ನಲ್ಲಿ ಇಂತಹ ಘಟನೆಗಳು ಸ್ವಸ್ಥ ಸಮಾಜದಲ್ಲಿ ನಡೆಯಬಾರದು ಎಂಬುದೇ ಕನ್ನಡಿಗರ, ಕನ್ನಡ ನೆಲದ ಪ್ರಜೆಗಳ ಆಗ್ರಹ. ಯಾಕಂದ್ರೆ ಕನ್ನಡ ನಾಡು ಹೆಣ್ಣಿಗೆ ಗೌರವ ಕೊಡುವಲ್ಲಿ, ಸದಾ ಮುಂದೆ ಇರುವ ರಾಜ್ಯವಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ಭದ್ರತೆಗೆ ಹೆಸರಾಗಿ, ಅತ್ಯುತ್ತಮ ಗೌರವ ಪಡೆಯುತ್ತಿದೆ. ಹೀಗಿದ್ದಾಗ ಯಾರೋ ಕೆಲವು ಕಿಡಿಗೇಡಿಗಳು ಈ ರೀತಿಯ ಪೋಸ್ಟ್ ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications