ಸಾಮಾಜಿಕ ಜಾಲತಾಣದಲ್ಲಿ ಒಂದು ಒಳ್ಳೆಯ ವಿಷಯ ನೋಡಿದೆ- ಆ್ಯಂಕರ್ ಅನುಶ್ರೀ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಆ್ಯಂಕರ್ ಅನುಶ್ರೀ ಮದುವೆ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಅನುಶ್ರೀ ಕನ್ನಡದ ಸ್ಟಾರ್ ನಿರೂಪಕಿಯಾಗಿದ್ದು ಹಲವಾರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರ ನಿರೂಪಣೆಗೆ ಸಾಕಷ್ಟು ಜನ ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ. ವಿಶೇಷವಾಗಿ ಕೆಲ ಬಾರಿ ಅರ್ಜುನ್ ಜನ್ಯಾ ಜಡ್ಜ್‌ಮೆಂಟ್‌ಗೆ ಕುಳಿತಾಗ ಅನುಶ್ರೀ ಕಾಮಿಡಿ ಮಾತುಗಳು ಕಾರ್ಯಕ್ರಮದಲ್ಲಿ ಎಲ್ಲರಿಗೂ ನಗು ತರಿಸುವುದಂತು ನಿಜ. ಇವರಿಬ್ಬರ ಕಾಮಿಡಿ ಅನೇಕ ಊಹಾಪೋಹಗಳನ್ನು ಹುಟ್ಟಿಸಿದೆ. ಇಂತಹ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿರುವ ಹೊತ್ತಲ್ಲಿ ಅನುಶ್ರೀ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಹೌದು ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ 'ಸರಿಗಮಪ' ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್‌ಗಳಲ್ಲಿ ಅನುಶ್ರೀ ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಅನುಶ್ರೀ ವೇದಿಕೆ ಮೇಲೆ ನಿರೂಪಣೆ ಮಾಡ್ತಾಯಿದ್ದರೆ ಅರ್ಜುನ್ ಜನ್ಯಾ, ರಾಜೇಶ್ ಕೃಷ್ಣನ್ ಕಾರ್ಯಕ್ರಮದ ಜಡ್ಜ್‌ಗಳಾಗಿರುತ್ತಾರೆ. ಅನುಶ್ರೀ ನಿರೂಪಣೆ ಜೊತೆಗೆ ಅರ್ಜುನ್ ಜನ್ಯಾ ಅವರಿಗೆ ಕಾಮಿಡಿಯಾಗಿ ಪ್ರಪೋಸ್ ಮಾಡಿ ಕಾಲೆಳೆಯುತ್ತಿದ್ದರೆ ನೋಡೋರಿಗೆ ಅದೆನೋ ಒಂದು ರೀತಿ ಖುಷಿ. ಪ್ರತಿಯೊಂದು ಸಂಚಿಕೆಯಲ್ಲಿ ಈ ಕಾಮಿಡಿ ಇಲ್ದೆ ಕಾರ್ಯಕ್ರಮ ಮುಗಿಯೋದೇ ಇಲ್ಲ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಸುಳ್ಳು ಸುದ್ದಿಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಅನುಶ್ರೀ ಮದುವೆ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿ ಬರುತ್ತಿವೆ. ಹೀಗೆ ಅನುಶ್ರೀ ಮದುವೆ ವಿಚಾರ ಹೆಚ್ಚು ಸುದ್ದಿಯಲ್ಲಿರುವಾಗಲೇ ಅವರು ತಾವು ಇದೇ ವರ್ಷ ಮದುವೆ ಆಗುವುದಾಗಿ ಹೇಳಿಕೊಂಡಿರುವುದು ಭಾರೀ ಸುದ್ದಿಯಾಗಿತ್ತು.
ಇದೀಗ ಅನುಶ್ರೀ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಒಂದೊಳ್ಳೆ ಸ್ಥಳಕ್ಕೆ ವಿಸಿಟ್ ಮಾಡಿದ್ದಾರೆ. ಹಾಗಾದರೆ ಆ ವಿಡಿಯೋದಲ್ಲಿ ಅನುಶ್ರೀ ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯೋಣ.

ತಮ್ಮ ಇನ್‌ಸ್ಟಾಗ್ರಾಮ್್ನಲ್ಲಿ ಅನುಶ್ರೀ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, 'ಸಾಕಷ್ಟು ಬಾರಿ ನಾವು ಸಾಮಾಜಿಕ ಜಾಲತಾಣದಲ್ಲಿ ಬೇಡದೇ ಇರುವ ವಿಷಯಗಳನ್ನು ನೋಡುತ್ತಿರುತ್ತೇವೆ. ತುಂಬ ದಿನಗಳ ನಂತರ ನಾನು ಒಂದು ಒಳ್ಳೆಯ ವಿಷಯ ನೋಡಿದೆ 'ರಾಗಿ ಕಣ' ಅನ್ನೋ ಜಾಗದ ಬಗ್ಗೆ. ಎರಡು ವಾರದ ಹಿಂದೆ ನೋಡಿದೆ. ಎರಡು ವಾರದಿಂದ ಬರಬೇಕು ಅಂದುಕೊಂಡಿದ್ದೆ. ಆದರೆ ಆಗಿಲ್ಲ. ಈಗ ಬಿಡುವಾಯ್ತು ಬಂದೆ. 'ರಾಗಿ ಕಣ' ಒಂದು ಅದ್ಭುತವಾದ ಜಾಗ. ಸಿಟಿಯ ಸೌಂಡ್ ಪೊಲ್ಯೂಷನ್ ಮಧ್ಯದಲ್ಲಿ ಇಂತಹ ನಿಸರ್ಗ ಇರುವುದು ಖುಷಿ ಆಯ್ತು. ಇಲ್ಲಿ ಆರ್ಗಾನಿಕ್ ವೆಜಿಟೆಬಲ್, ಫ್ರೂಟ್ಸ್, ದವಸ ಧಾನ್ಯಗಳನ್ನು ರೈತರಿಂದ ನೇರವಾಗಿ ತಂದು ಮಾರಾಟ ಮಾಡುತ್ತಾರೆ. ಅಲ್ಲದೆ ತಿಂಡಿ ತಿನಿಸು, ಹ್ಯಾಂಡ್ ಮೇಡ್ ಸಾರಿಗಳನ್ನು ಮಾರಾಟ ಮಾಡುತ್ತಾರೆ. ಎಲ್ಲವೂ ಇಲ್ಲಿ ಅದ್ಭುತವಾಗಿದೆ' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ತಾಯಿ ಇಬ್ಬರು ಇಲ್ಲಿಗೆ ಬಂದು ರೈತರು ಬೆಳೆದ ಈ ಆರ್ಗಾನಿಕ್ ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಿದ್ವಿ ತುಂಬಾ ಖುಷಿ ಆಯ್ತು ನನಗೆ ಎಂದು ಅನುಶ್ರೀ ವಿಡಿಯೋದಲ್ಲಿ ಮಾತನಾಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ತುಂಬಾ ಜನರಿಂದ ಲೈಕ್ಸ್ ಬಂದಿದ್ದು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಹಲವಾರು ಕಾಮೆಂಟ್‌ಗಳು ಬಂದಿವೆ.
ಈ ವಿಡಿಯೋದಲ್ಲಿ ಅನುಶ್ರೀ ಹೇಳಿದ ಮೊದಲ ಸಾಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಎಲ್ಲಾ ಸುದ್ದಿಗಳು ನಿಜವಾದದ್ದು ಅಲ್ಲ ಅನ್ನೋದನ್ನು ಹೇಳಿದ್ದಾರೆ.
ಒಟ್ಟಿನಲ್ಲಿ ನಿರೂಪಣೆಯಲ್ಲಿ ಸದಾ ಬ್ಯೂಸಿ ಆಗಿರುವ ಅನುಶ್ರೀ ಕೊಂಚ ಬಿಡುವು ಮಾಡಿಕೊಂಡು ರಾಗಿ ಕಣಕ್ಕೆ ಹೋಗಿ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಸಾಧ್ಯವಾದರೆ ಈ ರಾಗಿ ಕಣಕ್ಕೆ ನೀವು ಕೂಡ ಭೇಟಿ ನೀಡಿ ಅಂತಲೂ ಸಲಹೆ ನೀಡಿದ್ದಾರೆ.












Click it and Unblock the Notifications