Anchor Anushree: ಈ ದಿನವೇ ಅನುಶ್ರೀ ಬಾಳಸಂಗಾತಿ ಪರಿಚಯ: ಸುಳಿವು ಕೊಟ್ಟ ನಿರೂಪಕಿ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಯಾವಾಗ? ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಇಷ್ಟು ವರ್ಷಗಳು ತಮ್ಮ ಕೆಲಸದಲ್ಲೇ ಬ್ಯೂಸಿಯಾಗಿದ್ದ ಅನುಶ್ರೀ ಮದುವೆಯ ಬಗ್ಗೆ ಹಾರಿಕೆ ಉತ್ತರ ಕೊಡುತ್ತಿದ್ದರು. ಅಲ್ಲದೇ ಪ್ರತಿ ಸಾರಿ ಮದುವೆ ಕುರಿತು ಪ್ರಶ್ನೆಗೆ 'ಯೂಟ್ಯೂಬ್‌ನಲ್ಲಿ ಅನುಶ್ರೀ ಅಂತಾ ಸರ್ಚ್ ಕೊಟ್ಟರೆ, ಆ್ಯಂಕರ್ ಅನುಶ್ರೀ ಮದುವೆ ವಿಡಿಯೋ ನೋಡಿ..ಅನುಶ್ರೀ ಪತಿ ಇವರೇ.. ಎನ್ನುವ ಸಾಲು ಸಾಲು ವಿಡಿಯೋಗಳು ಬರುತ್ತದೆ' ಎಂದು ತಮಾಷೆ ಮಾಡುತ್ತಿದ್ದರು.
ತಮ್ಮ ತಾಯಿ ಜೀವನದಲ್ಲಿ ಪಟ್ಟ ಕಷ್ಟ ನೋಡಿದ ಅನುಶ್ರೀ ಮದುವೆ, ಸಂಸಾರದ ಬಗ್ಗೆ ತೀರಾ ನಿರಾಸಕ್ತಿ ತೋರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನುಶ್ರೀ ಮದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಜೀ ಕನ್ನಡ ಕಾರ್ಯಕ್ರಮಗಳಲ್ಲಿ ಈ ವರ್ಷ ಮದುವೆಯಾಗುವ ಬಗ್ಗೆ ತಿಳಿಸಿದ್ದರು. ದಾಂಪತ್ಯ ಜೀವನದತ್ತ ಒಲವು ತೋರುತ್ತಿರುವ ಅನುಶ್ರೀಗೆ ವರ ಹುಡುಕುತ್ತಿದ್ದೇವೆ ಎಂದು ಕಾರ್ಯಕ್ರಮವೊಂದರಲ್ಲಿ ನಟ ಶಿವರಾಜ್ ಕುಮಾರ್ ಅವರು ಸಹ ಹೇಳಿದ್ದರು. ಹೀಗಾಗಿ ಅನುಶ್ರೀ ಈ ವರ್ಷ ಹಸೆಮಣೆ ಏರುವುದು ಬಹುತೇಕ ಖಚಿತವಾಗಿದೆ.

ಆ್ಯಂಕರ್ ಅನುಶ್ರೀ ಮದುವೆ ಎನ್ನುತ್ತಿದ್ದಂತೆ ಹುಡುಗ ಯಾರಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಕುತೂಹಲಕ್ಕೂ ಕೂಡ ಇನ್ನೂ ಮೂರು ದಿನದಲ್ಲಿ ತೆರೆ ಬೀಳಲಿದೆ. ಹೌದು ಅಪ್ಪಟ ಅಪ್ಪು ಅಭಿಮಾನಿಯಾಗಿರುವ ಆ್ಯಂಕರ್ ಅನುಶ್ರೀ ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬದ ದಿನ ಅಂದರೆ ಮಾರ್ಚ್ 17 ಸೋಮವಾರ ತಮ್ಮ ಬಾಳಸಂಗಾತಿಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಬಗ್ಗೆ ಸಣ್ಣ ಸುಳಿವು ಅನುಶ್ರೀ ಬಿಟ್ಟುಕೊಟ್ಟಿದ್ದಾರೆ.

ಈ ಹಿಂದೆ ಅನುಶ್ರೀ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ್ದರು. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಟಿ ನಯನಾ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರನ್ನು ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ಗೆ ಅತಿಥಿಗಳನ್ನಾಗಿ ಕರೆದು ಮಾತನಾಡುವಾಗ ಅನುಶ್ರೀ ಮದುವೆಯ ವಿಚಾರ ಬಂದಿದ್ದು, ನಟ ಸೂರಜ್ 'ಬಹುಶಃ ಮುಂದಿನ ಫೆಬ್ರವರಿಗೆ ಅನುಶ್ರೀ ಅವರ ಮದುವೆ ಇರಬಹುದು' ಎಂದಿದ್ದಾರೆ. ಆಗ ಅನುಶ್ರೀ 'ಇಲ್ಲ ಕಣ್ರೋ ನಾನು ಅಪ್ಪು ಸರ್ ಫ್ಯಾನ್ ಆಗಿರೋದ್ರಿಂದ ಮಾರ್ಚ್‌ನಲ್ಲಿ' ಎಂದು ರಾಗ ಎಳೆದಿದ್ದಾರೆ. ಹೀಗಾಗಿ ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ದಿನವೇ ಅನುಶ್ರೀ ತಮ್ಮ ಬಾಳಸಂಗಾತಿಯನ್ನು ಪರಿಚಯಿಸುದರ ಜೊತೆಗೆ ಮದುವೆಯ ದಿನಾಂಕವನ್ನು ಕೂಡ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications