Anchor Anushree: ರವಿ ಚಂದ್ರನ್ ಮಾತಿಗೆ ಆ್ಯಂಕರ್ ಅನುಶ್ರೀ ತಬ್ಬಿಬ್ಬಾಗಿದ್ಯಾಕೆ?
ಕನ್ನಡ ಸಿನಿರಂಗದ ಕ್ರೇಜಿಸ್ಟಾರ್ ನಟ, ನಿರ್ದೇಶಕ ರವಿಚಂದ್ರನ್ ಚಿಕ್ಕ ವಯಸ್ಸಿನಿಂದಲೂ ಒಂದು ಆಸೆ ಈಡೇರಿಯೇ ಇಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್ ಆದ್ರೂ ರವಿಚಂದ್ರನ್ ಅವರಿಗೆ ಆ ಆಸೆ ಯಾಕೆ ಈಡೇರಲಿಲ್ಲ ಎಂದು ರವಿಚಂದ್ರನ್ ಹೇಳಿದ್ದು, ರವಿಮಾಮನ ಮಾತಿಗೆ ನಟಿ ಹಾಗೂ ಆಂಕರ್ ಅನುಶ್ರಿ ಅವರು ತಬ್ಬಿಬ್ಬಾಗಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟ, ನಿರ್ದೇಶಕ ರವಿಚಂದ್ರನ್ ಅವರಿಗೆ 'ಒಂದು ಫಾರ್ಮ್ ಹೌಸ್ ಕಟ್ಬೇಕು, ಅಲ್ಲಿ ಕುದುರೆ ಸಾಕ್ಬೇಕು ಎನ್ನುವ ಆಸೆ ಇದೆಯಂತೆ. ಆದರೆ, ಈವರೆಗೂ ಆ ಆಸೆ ಈಡೇರಿಯೇ ಇಲ್ವಂತೆ. ಒಂದು ಫಾರ್ಮ್ ಹೌಸ್ ಕಟ್ಬೇಕು, ಅಲ್ಲಿ ಕುದುರೆ ಸಾಕ್ಬೇಕು ಅನ್ನೋದು ನನ್ನ ಚಿಕ್ಕ ವಯಸ್ಸಿಂದ್ಲೇ ಇರೋ ಆಸೆ. ದೇವ್ರು ನನಗೆ ಮಣ್ಣಿನ ಋಣನೇ ಕೊಡ್ಲಿಲ್ಲ ಎಂದು ನಟ ಹಾಗೂ ನಿರ್ದೇಶಕ ರವಿಚಂದ್ರನ್ ಹೇಳಿದ್ದಾರೆ. ಆಗ ಎದುರಿಗೇ ಇದ್ದ ಆಂಕರ್ ಅನುಶ್ರೀ 'ಅಲ್ಲ, ಎಂತೆಂಥ ರಿಚ್ಚೆಷ್ಟ್ ಸಿನಿಮಾಗಳನ್ನು ಮಾಡಿರೋ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್ ನೀವು, ನಿಮಗೆ ಒಂದು ಫಾರ್ಮ್ ಹೌಸ್ ತಗೊಳ್ಳೋಕೆ ಆಗಿಲ್ಲ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ.

ನಟ ರವಿಚಂದ್ರನ್ ಅವರು ಯಾವುದನ್ನೂ ಕೂಡ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಅಥವಾ ಸೀರಿಯಸ್ ಆಗಿದ್ದರೂ ಅದನ್ನೇ ಮೆಂಟೇನ್ ಮಾಡೋದಿಲ್ಲ, ತಕ್ಷಣವೇ ಬೇರೆ ಮೂಡ್‌ಗೆ ಹೋಗಿಬಿಡುತ್ತಾರೆ ಎಂಬ ಮಾತು ಅವರ ಬಗ್ಗೆ ಯಾವಾಗಲೂ ಕೇಳಿ ಬರುತ್ತವೆ. ನಂಗೆ ಹೆಣ್ಣಿನ ಋಣ ಕೊಟ್ಬಿಟ್ಟ ದೇವ್ರು, ಮಣ್ಣಿನ ಋಣ ಕೊಡ್ಲಿಲ್ಲ ಎಂದು ನಟ ರವಿಚಂದ್ರನ್ ಅವರು ಅನುಶ್ರೀ ಎದುರು ನಗೆ ಚಟಾಕಿ ಹಾರಿಸಿದ್ದಾರೆ. ಅಲ್ಲಿ ಸೇರಿದ್ದ ಎಲ್ಲರೂ ಸಿಕ್ಕಾಪಟ್ಟೆ ನಕ್ಕರು. ಸ್ವತಃ ಆಂಕರ್ ಅನುಶ್ರೀ ಅವರು ತಲೆಮೇಲೆ ಕೈ ಇಟ್ಟುಕೊಂಡು ನಕ್ಕರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಚಿತ್ರರಂಗದ ಕನಸುಗಾರ, ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ರವಿಮಾಮ ಹೀಗೆ ಹಲವು ಬಿರುದಾವಳಿಯಿಂದ ಕರೆಸಿಕೊಳ್ಳುವ ನಟ ಹಾಗೂ ನಿರ್ದೇಶಕ ರವಿಚಂದ್ರನ್ ಅವರು ಹುಟ್ಟು ಶ್ರೀಮಂತ ಅವರ ತಂದೆ ವೀರಾಸ್ವಾಮಿಯವರು ಖ್ಯಾತ ನಿರ್ಮಾಪಕರು. ಈಶ್ವರಿ ಸಂಸ್ಥೆ ಮೂಲಕ ಅವರು ಬಹಳಷ್ಟು ಸಿನಿಮಾಗಳನ್ನು ಮಾಡಿದ್ದಾರೆ, ಹಣ ಹಾಗೂ ಆಸ್ತಿ ಮಾಡಿದ್ದಾರೆ. ಮಗ ವಿ ರವಿಚಂದ್ರನ್ ಅವರು ದಯರಾದೃಷ್ಟ ಎಂಬಂತೆ ಅಪ್ಪನ ಹಣವನ್ನು ತಮ್ಮ ಅತಿಯಾದ ಸಿನಿಮಾ ಪ್ರೀತಿಯಿಂದಲೇ ಕಳೆದುಕೊಂಡರು ಎಂದು ಹೇಳಲಾಗಿದೆ.
ಸ್ಯಾಂಡಲ್‌ವುಡ್ ಪ್ರಿಯರು ನಟ ರವಿಚಂದ್ರನ್ ಅವರಿಗೆ 'ಕ್ರೇಜಿ ಸ್ಟಾರ್' ಎಂಬ ಬಿರುದು ನೀಡಿದ್ದಾರೆ. ರವಿಚಂದ್ರನ್ ಅವರ ಸಿನಿಮಾ ಕ್ರೇಜ್ ಮೂಲಕ ಕನ್ನಡ ಸಿನಿಮಾರಂಗ ಶ್ರೀಮಂತವಾಯ್ತು. ಆದರೆ, ವೈಯಕ್ತಿಕವಾಗಿ ಅವರು ಬಡವರಾದ್ರು ಎಂದು ಹೇಳಬಹುದೇನೋ? ನಟ ರವಿಚಂದ್ರನ್ ಅವರು ಕನ್ನಡ ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಹೇಳಲಾಗಿದೆ.












Click it and Unblock the Notifications