Anchor Anushree: ರಾಕೇಶ.. ನಿನ್ನ ಮುಗುಳ್ನಗು ಅಮರ: ತಮ್ಮನ ಮೃತದೇಹ ಕಂಡು ಕಣ್ಣೀರಿಟ್ಟ ಅನುಶ್ರೀ

ಹಠಾತ್‌ ಹೃದಯಾಘಾತದಿಂದ ನಿಧನರಾದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸೀಸನ್-‌3ರ ವಿನ್ನರ್‌ ಹಾಗೂ ಹಾಸ್ಯ ಕಲಾವಿದ ರಾಕೇಶ್‌ ಪೂಜಾರಿ ಅವರ ಅಂತ್ಯಕ್ರಿಯೆ ಉಡುಪಿಯ ಹೂಡೆಯಲ್ಲಿ ನೆರವೇರಿದೆ. ರಾಕೇಶ್‌ ಅವರ ನಿಧನಕ್ಕೆ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ತಂಡ ಕೂಡ ರಾಕೇಶ್‌ ಅವರ ನಿವಾಸಕ್ಕೆ ತೆರಳಿ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿತ್ತು. ಈ ಶೋನ ನಿರೂಪಕಿಯಾಗಿದ್ದ ಅನುಶ್ರೀ ಕೂಡ ರಾಕೇಶ್‌ ಅವರ ಹುಟ್ಟೂರಿಗೆ ತೆರಳಿ ಅಂತಿಮ ದರ್ಶನ ಪಡೆದರು. ಈ ವೇಳೆ ನೋವು ತಡೆಯಲಾರದೆ ಅನುಶ್ರೀ ಬಿಕ್ಕಳಿಸಿ ಅತ್ತರು. ರಾಕೇಶ್‌ ಜೊತೆಗಿನ ಒಡನಾಟವನ್ನು ನೆನೆದು ಕಣ್ಣೀರಿಟ್ಟರು.

ರಾಕೇಶ್‌ ನಮ್ಮ ಕರಾವಳಿಯ ಅಪ್ಪಟ ಪ್ರತಿಭೆ. ಅಕ್ಕ, ಅಕ್ಕ ಎಂದು ಬಾಯಿ ತುಂಬಾ ನನ್ನನ್ನು ಕರೆಯುತ್ತಿದ್ದ. ಈಗ ನಾನು ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ಅವನು ತಮಾಷೆಗೂ ಕೂಡ ಯಾರ ಮನಸ್ಸಿಗೆ ನೋವು ಮಾಡುತ್ತಿರಲಿಲ್ಲ. ಆತ ಕನ್ನಡದ ಶೈಲಿಯನ್ನು ಹಾಗೆಯೇ ಉಳಿಸಿಕೊಂಡಿದ್ದ. ದೇವರು ರಾಕೇಶ್‌ನಂತಹ ಒಳ್ಳೆಯವರನ್ನು ಬೇಗ ಕರೆಸಿಕೊಂಡಿದ್ದಾನೆ ಎಂದು ಅನುಶ್ರೀ ಭಾವುಕರಾದರು.

Anchor Anushree Gets Emotional Seeing Brother Rakesh Poojary Dead Body

ರಾಕೇಶ್‌ ತಮಾಷೆಗೂ ಯಾರ ಮನಸ್ಸನ್ನೂ ನೋಯಿಸಿದವನಲ್ಲ. ಒಳ್ಳೆಯವರಿಗೆ ಕಾಲ ಇಲ್ಲ, ರಾಕೇಶ್‌ ತಾಯಿ ಮತ್ತು ತಂಗಿಗೆ ನಾವೆಲ್ಲರೂ ಶಕ್ತಿಯಾಗಿ ನಿಲ್ಲಬೇಕಿದೆ. ರಾಕೇಶ್‌ನ ನಗು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅವನು ಡಿಂಪಲ್ ಡಿಂಪಲ್ ಎಂದು ಡ್ಯಾನ್ಸ್ ಮಾಡುತ್ತಿದ್ದು ಇನ್ನೂ ಕಣ್ಣಮುಂದೆ ಬರುತ್ತಿದೆ. ರಾಕೇಶ್‌ ಅರ್ಜುನ್ ಜನ್ಯ ಅವರ ಮಿಮಿಕ್ರಿಯನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದ. ಅವನು ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ ವ್ಯಕ್ತಿ ಎಂದು ಅನುಶ್ರೀ ನೆನೆದರು.

ರಾಕೇಶ್‌ ಅರ್ಧದಿನದಲ್ಲೇ ಸ್ಕಿಟ್‌ನ ಎಲ್ಲ ಡೈಲಾಗ್‌ಗಳನ್ನು ಸರಾಗವಾಗಿ ಕಲಿತುಬಿಡುತ್ತಿದ್ದ. ಅಂತಹ ಕಲಾವಿದ ರಾಕೇಶ್‌, ರಿಷಬ್‌ ಶೆಟ್ಟಿ ಅವರ ಕಾಂತಾರ ಚಾಪ್ಟರ್‌ ಒಂದರಲ್ಲಿ ರಾಕೇಶ್‌ಗೆ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ಅವನು ಯಾವಾಗಲೂ ನಮ್ಮ ಕ್ಯಾರವ್ಯಾನ್‌ನಲ್ಲೇ ಇರುತ್ತಿದ್ದ, ನಮ್ಮ ಜೊತೆಯಲ್ಲೇ ರಾಕಿ ಊಟ ಮಾಡುತ್ತಿದ್ದ. ತಮ್ಮನಂತೆ ಜೊತೆಯಲ್ಲೇ ಇದ್ದ ರಾಕೇಶ್‌ ಇನ್ನು ಇಲ್ಲ ಅನ್ನೋದು ತುಂಬಾ ನೋವು ತಂದಿದೆ ಎಂದು ಸ್ಮರಿಸಿದರು.

Anchor Anushree Gets Emotional Seeing Brother Rakesh Poojary Dead Body

ಹೋಗಿ ಬಾ ತಮ್ಮ: ಅನುಶ್ರೀ ಪೋಸ್ಟ್‌

"ರಾಕೇಶ.. ನಗು ಆರೋಗ್ಯವಾಗಿರುತ್ತೀಯ, ನಗಿಸು ಸುಖವಾಗಿರುತ್ತೀಯ, ಇದೆಲ್ಲ ಸುಳ್ಳು ಅಲ್ವಾ ಮಾರಾಯ? ನಿಂಗೆ ಹೇಗೆ ಹೇಳಲಿ ವಿದಾಯ? ಒಂದಂತೂ ಸತ್ಯ ರಾಕಿ, ನಿನ್ನ ಮುಗುಳ್ನಗು ಅಮರ, ಹೋಗಿ ಬಾ ತಮ್ಮ" ಎಂದು ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಕೇಶ್‌ ಜೊತೆಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನೂ ಅನುಶ್ರೀ ಪೋಸ್ಟ್‌ ಮಾಡಿದ್ದಾರೆ.

ರಾಕೇಶ್‌ ಪೂಜಾರಿ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ನಿರ್ದೇಶಕ ಯೋಗರಾಜ್ ಭಟ್, ಅನುಶ್ರೀ, ರಕ್ಷಿತಾ ಪ್ರೇಮ್, ಕಾಮಿಡಿ ಕಿಲಾಡಿಗಳು ನಯನ ಸೇರಿದಂತೆ ತಂಡದ ಬಳಗವೆಲ್ಲ ರಾಕೇಶ್‌ ಅವರ ಅಂತಿಮ ದರ್ಶನ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+