'ನನ್ನ ನಡತೆ ಬಗ್ಗೆ ಮಾತಾಡಿದ್ರು': ಅನುಪಮಾ ಗೌಡ ಗುಡ್‌ಬೈ ಹೇಳಿದ್ದು ಯಾರ ಸ್ನೇಹಕ್ಕೆ?
ಕಿರುತೆರೆಯ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಪಮಾ ಗೌಡ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬಹಳ ಕಷ್ಟಪಟ್ಟು ಜೀವನ ಕಟ್ಟಿಕೊಂಡಿರುವ ಅನುಪಮಾ ಗೌಡ ಈಗ ಇಷ್ಟಪಟ್ಟು ಜೀವಿಸುತ್ತಿದ್ದಾರೆ. ಎಲ್ಲರನ್ನೂ ಆತ್ಮೀಯದಿಂದ ಕಾಣುವ ಅನುಪಮಾ ಗೌಡ, ತಾವು ನಂಬಿದ ಸ್ನೇಹ ಅತಿಯಾದ ನೋವು ಕೊಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ನನಗೆ ಸ್ನೇಹದಲ್ಲಿ ಕೆಟ್ಟ ಅನುಭವ ಆಗಿರುವುದು ಹುಡುಗಿಯರ ಜೊತೆ. ಇತ್ತೀಚಿಗೆ ಒಂದು ಫ್ರೆಂಡ್‌ಶಿಪ್‌ಅನ್ನು ಹೇಳಿಯೇ ಬ್ರೇಕ್ ಮಾಡಿದೆ. ನನ್ನ ಜೀವನದಲ್ಲಿ ಇನ್ನು ನಿನ್ನ ಅವಶ್ಯಕತೆ ಇಲ್ಲ ಅಂತಾ ಹೇಳಿ ಅವರ ಸ್ನೇಹ ಮುರಿದುಕೊಂಡೆ. ಯಾಕೆಂದರೆ ಒಬ್ಬರ ಜೊತೆ ಸ್ನೇಹ ಆಯ್ತು ಅಂದರೆ ಅವರ ಜೊತೆ ತುಂಬಾ ಕ್ಲೋಸ್ ಆಗುತ್ತೇನೆ ನಾನು. ಆ ವ್ಯಕ್ತಿಯ ಹತ್ತಿರ ಎಲ್ಲವನ್ನೂ ಹೇಳಿಕೊಂಡಿರುತ್ತೇನೆ. ಎಲ್ಲವನ್ನೂ ತೋರಿಸುತ್ತೇನೆ. ದಿನ ಜೀವನದಲ್ಲಿ ಏನೇನಾಯ್ತು ಎಲ್ಲವನ್ನೂ ಹೇಳಿಕೊಂಡಿರುತ್ತೇನೆ'.

'ನನ್ನ ಜೀವನವನ್ನು ಹೀಗೆ ಕಟ್ಟಿಕೊಳ್ಳಬೇಕು ಅಂತಾ ಹೇಳಿಕೊಂಡಿರುತ್ತೇನೆ. ಅದೇ ನಾನು ಹಿಂದೆ ತಿರುಗಿದಾಗ ಬರೀ ಜಡ್ಜ್‌ಮೆಂಟ್‌ಗಳನ್ನೇ ಪಾಸ್ ಮಾಡಿರುತ್ತಾರೆ. ಜೊತೆಗಿದ್ದಾಗ ಓ ನೀನಂದ್ರೆ ನನ್ನ ಪ್ರಾಣ, ಅದು..ಇದು ನೀನಿಲ್ಲ ಅಂದರೆ ಹೇಗೆ ಅಂತೆಲ್ಲಾ ಹೇಳುವವರು, ಅಲ್ಲಿಂದ ನಾನು ಹೋದಾಗ ಅವಳ ನಡತೆ ಹೇಗೆ ಗೊತ್ತಾ ಅಂತಾ ಮಾತನಾಡುತ್ತಾರೆ. ಅದು ಕೂಡ ಜೊತೆಯಲ್ಲೇ ಇದ್ದವರು'.
'ಅವರು ಈ ರೀತಿ ಎಲ್ಲಾ ನನ್ನ ಬಗ್ಗೆ ಹೇಳಿರುವುದು ಗೊತ್ತಾಗಿತ್ತು. ಆ ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ. ಆದರೆ ಆ ವ್ಯಕ್ತಿ ಮಾತನಾಡಿದ್ದಾರೆ. ಅವರು ಮಾತನಾಡಿದ್ದಾರೆ ಅಂತಾ ಹೇಗೆ ಗೊತ್ತಾಗುತ್ತದೆ ಅಂದರೆ ನೀವು ಜೊತೆಯಲ್ಲಿದ್ದಾಗ ಇನ್ನೊಬ್ಬರ ಬಗ್ಗೆ ಮಾತನಾಡಿರುತ್ತಾರೆ. ಅವರು ಜೊತೆಯಲಿದ್ದು ಹೋದ ಮೇಲೆ ಮಾತನಾಡಿರುತ್ತಾರೆ. ಅದರಿಂದಲೇ ಅವರ ಬುದ್ಧಿ ಗೊತ್ತಾಗುತ್ತದೆ' ಎಂದರು.

'ಎಲ್ಲಾ ಸಂದರ್ಭಗಳು ನನಗೆ ನೆನಪಿದೆ ನಾನಲ್ಲಿ ಏನೋ ಹೇಳಿ ಹೋಗಿರುತ್ತೇನೆ. ಆದರೆ ಅವರಿಂದ ಅಲ್ಲಿ ಬೇರೆ ಏನೋ ಆಗಿರುತ್ತದೆ. ನನಗೆ ಬೇರೆ ಏನೋ ಮಾತನಾಡಲಿ ಬೇಜಾರಿಲ್ಲ..ನನ್ನ ಮನೆಯೊಳಗಡೆ ನಿನ್ನನ್ನು ಸೇರಿಸಿದ ಮೇಲೆ ನನ್ನ ನಡತೆ ಬಗ್ಗೆ ಮಾತನಾಡಿದಾಗ ನನಗೆ ಹುಚ್ಚು ಹಿಡಿಯುತ್ತದೆ. ನನ್ನ ಮನೆ ನನಗೆ ಪವಿತ್ರ ಜಾಗ, ಅಲ್ಲಿ ನಾನು ನಾನಾಗಿರುತ್ತೇನೆ. ನನ್ನ ಮನೆಯೊಳಗಡೆ ನಾನು ಎಲ್ಲರನ್ನೂ ಸೇರಿಸುವುದಿಲ್ಲ..ಅಲ್ಲಿ ನನ್ನವರು ಮಾತ್ರ ಇರಬೇಕು. ಹೀಗಾಗಿ ನಾನು ಯಾರನ್ನೂ ಮನೆಗೆ ಕರೆಯುವುದಿಲ್ಲ. ಹೀಗಿರುವಾಗ ನಿಮ್ಮನ್ನು ನನ್ನ ಮನೆಯೊಳಗೆ ಬಿಟ್ಟಿದ್ದೇನೆ ಅಂದರೆ ನೀವು ನನಗೆ ಅಷ್ಟು ಆತ್ಮೀಯರು ಅಂತಾ ಅರ್ಥ. ಅಂತದರಲ್ಲಿ ನನ್ನ್ ನಡತೆ ಬಗ್ಗೆ ಮಾತನಾಡಿದ ಮೇಲೆ ಅಂತವರ ಜೊತೆ ನನಗೆ ಸ್ನೇಹದ ಅಗತ್ಯ ಇಲ್ಲ' ಎಂದು ಹೇಳಿದರು.
'ನಾನು ಆ ವ್ಯಕ್ತಿಗೆ ಎರಡು ಮೂರು ಸಲ ಅವಕಾಶ ಕೊಟ್ಟಿದ್ದೆ. ಪ್ರತಿ ಸಲ ಅವಕಾಶ ಕೊಟ್ಟಾಗಲೂ ಅವರಿಗೆ ಮತ್ತಷ್ಟು ಕ್ಲೋಸ್ ಆಗಿದ್ದೇನೆ. ಅದನ್ನು ಅವರು ದುರುಪಯೋಗ ಪಡಿಸಿಕೊಂಡು, ಏನೋ ಉದ್ದೇಶದಿಂದ ಹೀಗೆ ಮಾಡಿದರೆ ಎಷ್ಟು ನೋವಾಗುತ್ತದೆ. ಒಬ್ಬ ವ್ಯಕ್ತಿಗೆ ಮನಸಾರೆ ಎಲ್ಲಾ ಮಾಡಿದ್ದೆ, ಆ ವ್ಯಕ್ತಿ ಜೊತೆಗೆ ಇದ್ದು ಹೀಗೆ ಮಾತನಾಡಿದಾಗ ಎರಡು ಮೂರು ದಿನ ನಿರಂತರವಾಗಿ ಅತ್ತಿದ್ದೇನೆ. ಅವರಿಗೆ ನನ್ನ ಜೀವನದಲ್ಲಿ ಬೇರೆ ಸ್ಥಾನ ಕೊಟ್ಟಿದ್ದೆ. ಅವರಿಗೆ ನೋವು ಅಂದಾಗ ನನ್ನ ಕೆಲಸ ಎಲ್ಲಾ ಬಿಟ್ಟು ಹೋಗಿದ್ದೆ ನಾನು' ಎಂದು ತಮಗೆ ಸ್ನೇಹದಲ್ಲಿ ಆದ ಕಹಿ ಅನುಭವವನ್ನು ಅನುಪಮಾ ಗೌಡ ಹಂಚಿಕೊಂಡಿದ್ದಾರೆ.












Click it and Unblock the Notifications