ಅಮೃತಧಾರೆ ಸೀರಿಯಲ್ ಮುಕ್ತಾಯ; ಭಾವುಕರಾದ ರಾಜೇಶ್ ನಟರಂಗ: ಅಭಿಮಾನಿಗಳಿಗೆ ಹೊಸ ಪ್ರಾಜೆಕ್ಟ್‌ ಬಗ್ಗೆ ಹೇಳಿದ್ದೇನು?

ಕನ್ನಡಿಗರ ಮೆಚ್ಚಿನ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್ ಮುಕ್ತಾಯವಾಗಿದೆ. ಕೊನೆಯ ಸಂಚಿಕೆಗಳು ಪ್ರಸಾರವಾಗುತ್ತಿವೆ. ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ಆಗಿ ಮಿಂಚಿರುವ ರಾಜೇಶ್ ನಟರಂಗ ಅವರು ಅಮೃತಧಾರೆ ಸೀರಿಯಲ್‌ನೊಂದಿಗಿನ ತಮ್ಮ ಪಯಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನ ಕೊನೆಯ ಸಂಚಿಕೆಗಳು ಪ್ರಸಾರವಾಗುತ್ತಿವೆ. "ನನ್ನೊಲವ ಅಮೃತಧಾರೆ' ಎನ್ನುವ ಸಾಲುಗಳೊಂದಿಗೆ ನಟ, ರಂಗಕರ್ಮಿ ರಾಜೇಶ್ ನಟರಂಗ ಅವರು ತಮ್ಮ ಅಮೃತಧಾರೆ ಪಯಣದ ಸುಂದರ ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Amruthadhaare Serial Ends Rajesh Nataranga Gets Emotional Hints at His Next Project for Fans

ಅಮೃತಧಾರೆ ಸೀರಿಯಲ್‌ನ ಚಿತ್ರೀಕರಣ ಮುಕ್ತಾಯವಾಗಿದೆ. ಎಲ್ಲದಕ್ಕೂ ಒಂದು ಮುಕ್ತಾಯ ಎನ್ನುವುದು ಇರುತ್ತದೆ. ಹಾಗಾಗಿ, ಅಮೃತಧಾರೆಯ ಮುಕ್ತಾಯದ ಸಮಯವೂ ಇದೀಗ ಬಂದಿದೆ. ಇನ್ನೊಂದಷ್ಟು ಕಂತುಗಳು ಪ್ರಸಾರವಾಗಲಿವೆ. ಯಾರೂ ಬೇಸರ ಮಾಡಿಕೊಳ್ಳಬೇಡಿ. ನಾನು ಮಾತನಾಡಬೇಕಾಗಿರುವುದು ಬದುಕಿದ್ದ ರೀತಿಯ ಬಗ್ಗೆ ಈ ಧಾರಾವಾಹಿಯನ್ನು ನೀವು ಬದುಕಿಸಿದ್ದ ಬಗ್ಗೆ ನಿಮ್ಮ ಎಲ್ಲರಿಗೂ ಧನ್ಯವಾದ.

ನಾನು ನಟನಾಗಿದ್ದೆ ಆದರೆ ಕಳೆದ ಮೂರುವರೆ ವರ್ಷಗಳಿಂದ ಗೌತಮ್ ದಿವಾನ್ ಆಗಿ ನನ್ನನ್ನು ಬದುಕಿಸಿದ ಆ ಪಾತ್ರಕ್ಕೆ ಧನ್ಯವಾದ ಹೇಳುತ್ತೇನೆ. ಈ ಧಾರಾವಾಹಿಯಲ್ಲಿ ಅಭಿನಯಿಸಿದ ಎಲ್ಲ ಹಿರಿಯ, ಕಿರಿಯ ಕಲಾವಿದರಿಗೆ ಧನ್ಯವಾದ. ಮುಖ್ಯವಾಗಿ ಭೂಮಿಕಾ ಪಾತ್ರ ಮಾಡಿದ ಛಾಯಾಸಿಂಗ್ ಅವರಿಗೂ ತುಂಬು ಹೃದಯದ ಧನ್ಯವಾದಗಳು ಅಂತ ರಾಜೇಶ್ ಅವರು ಹೇಳಿದ್ದಾರೆ.

ಮುಂದುವರಿದು ನನಗೂ ನಂಬಿಕೆ ಇರಲಿಲ್ಲ. 20 ವರ್ಷಗಳ ಮೇಲಾಗಿತ್ತು. ಇಷ್ಟು ಸುದೀರ್ಘ ಅವಧಿಯ ನಂತರ ಕಿರುತೆರೆಗೆ ಬಂದಿದ್ದೆ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೋ, ನನ್ನನ್ನು ಹೇಗೆ ನೋಡುತ್ತಾರೋ ಎನ್ನುವ ಅನುಮಾನಗಳಿತ್ತು. ಆದರೆ ಎಲ್ಲರೂ ಬಹಳ ಪ್ರೀತಿ ಕೊಟ್ಟು ಪೋಷಣೆ ಮಾಡಿದ್ದೀರಿ. 1,100ಕ್ಕೂ ಹೆಚ್ಚು ಸಂಚಿಕೆಗಳನ್ನು ನೋಡಿದ್ದೀರಿ. ಇಷ್ಟಪಟ್ಟಿದ್ದೀರಿ.. ಅದಕ್ಕೆ ನನಗೆ ಮಾತುಗಳೇ ಇಲ್ಲ. 10 ಸೆಕೆಂಡ್ಸ್‌ 20 ಸೆಕೆಂಡ್ಸ್‌ನ ರೀಲ್ಸ್‌ ನೋಡಿ ಮೆಚ್ಚುವ ಈ ಸಮಯದಲ್ಲಿ, ಸುಮಾರು 20 ಲಕ್ಷಕ್ಕೂ ಹೆಚ್ಚು ಸೆಕೆಂಡ್‌ಗಳನ್ನು ನೀವು ನಮ್ಮೊಂದಿಗೆ ಕಳೆದಿದ್ದೀರಿ. ಇದು ಬಹಳ ದೊಡ್ಡ ಸಮಯ. ನಿಮ್ಮ ಆಯಸ್ಸಿನ ಒಂದು ಭಾಗವನ್ನೇ ನಮಗೆ ಕೊಟ್ಟಿದ್ದೀರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು.

ಅಷ್ಟೇ ಅಲ್ಲ ನಾವು ಚೆನ್ನಾಗಿ ಮಾಡಿದಾಗ ಮೆಚ್ಚಿಕೊಂಡಿದ್ದೀರಿ. ಸರಿ ಇಲ್ಲದಾಗ ಟೀಕಿಸಿದ್ದೀರಿ, ಹಂಗಿಸಿದ್ದೀರಿ ಎಲ್ಲದಕ್ಕೂ ಧನ್ಯವಾದ. ಇದಕ್ಕೆ ನೀವು ಅರ್ಹರು. ನಿಮ್ಮ ಪ್ರೋತ್ಸಾಹ, ತಪ್ಪನ್ನು ತಿಳಿಸುವ ವಿಷಯ ಎಲ್ಲವೂ ಮುಖ್ಯವಾಗುತ್ತದೆ. ನೀವೇ ನಮ್ಮ ಗುರುಗಳು. ಇದು ಭಾಷೆಯನ್ನು ಮೀರಿ ಈ ಧಾರಾವಾಹಿ ರೀಚ್‌ ಆಗಿದೆ. ತಮಿಳು ಹಾಗೂ ಮರಾಠಿ ಭಾಷಿಕರೂ ಸಹ ಈ ಸೀರಿಯಲ್‌ನ ನೋಡಿ ನನಗೆ ಮೆಸೇಜ್ ಮಾಡಿರುವುದು ಇದೆ.

Amruthadhaare Serial: ಅಮೃತಧಾರೆ ಶೀಘ್ರ ಮುಕ್ತಾಯ ನಟಿ ಛಾಯಾಸಿಂಗ್ ಹೇಳಿದ್ದೇನು, ಇಲ್ಲಿದೆ ಹೊಸ ಅಪ್ಡೇಟ್ಸ್‌
Amruthadhaare Serial: ಅಮೃತಧಾರೆ ಶೀಘ್ರ ಮುಕ್ತಾಯ ನಟಿ ಛಾಯಾಸಿಂಗ್ ಹೇಳಿದ್ದೇನು, ಇಲ್ಲಿದೆ ಹೊಸ ಅಪ್ಡೇಟ್ಸ್‌

ನಾನಾ ದೇಶಗಳಿಂದ ಎಲ್ಲೋ ಇರುವ ಕನ್ನಡಿಗರು, ಕನ್ನಡ ಬರದೆ ಇರುವವರು ಸಹ ಈ ಸೀರಿಯಲ್‌ನ ನೋಡಿ ಇಷ್ಟಪಟ್ಟಿದ್ದಾರೆ. ಆ ಪಾತ್ರಗಳನ್ನ ತಮ್ಮ ಜೀವನಕ್ಕೆ ಹೋಲಿಕೆ ಮಾಡಿಕೊಂಡಿದ್ದಾರೆ. ತೆರೆಯ ಹಿಂದೆ ಕೆಲಸ ಮಾಡಿದ ಹಾಗೂ ಜೀ ಕನ್ನಡ ವಾಹಿನಿಯ ಎಲ್ಲರಿಗೂ ಧನ್ಯವಾದ.

ಸೋಷಿಯಲ್ ಮೀಡಿಯಾದಲ್ಲಿ ಪೇಜ್ ಕ್ರಿಯೇಟ್ ಮಾಡಿ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ. ಎಲ್ಲರೂ ಇದೇ ರೀತಿ ನಿಮ್ಮ ಸಹಕಾರವನ್ನು ಕೊಡಿ ಅಂತಲೂ ನಟ ರಾಜೇಶ್‌ನಟರಂಗ ಅವರು ಹೇಳಿದ್ದಾರೆ. ಈಗ ಹೊಸ ಪಾತ್ರದ ಹುಡುಕಾಟವಾಗುತ್ತದೆ. ಆದರೆ ಒಂದಂತೂ ಹೇಳುತ್ತೇನೆ.

ಸುಧಾರಾಣಿ ಮೇಡಂ ಈ ಸೀರಿಯಲ್‌ ಬಿಟ್ಬಿಡಿ ಪ್ಲೀಸ್‌ ಅಂತಿರೋದೇಕೆ ಪ್ರೇಕ್ಷಕರು
ಸುಧಾರಾಣಿ ಮೇಡಂ ಈ ಸೀರಿಯಲ್‌ ಬಿಟ್ಬಿಡಿ ಪ್ಲೀಸ್‌ ಅಂತಿರೋದೇಕೆ ಪ್ರೇಕ್ಷಕರು

ನೀವು ವಹಿಸಿರುವ ಜವಾಬ್ದಾರಿನ ನಾನು ಎಂದಿಗೂ ಮರೆಯಲ್ಲ. ನಾನು ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ. ಅಮೃತಧಾರೆ ಸೀರಿಯಲ್ ತೆರೆಯ ಮೇಲೆ ನಿಂತಿರಬಹುದು. ಆದರೆ ನಿಮ್ಮ ಜೀವನದಲ್ಲಿ ಯಾವಾಗಲೂ ನಡೆಯುತ್ತಿರಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು, ಶುಭವಾಗಲಿ ಅಂತ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+