ಚಿಕ್ಕಣ್ಣನ ಸಿನಿಮಾಗೆ ಮಹಾ ಮೋಸ: ನಿರ್ಮಾಪಕ ಉಮಾಪತಿ ಫುಲ್ ಗರಂ!

ಚಿಕ್ಕಣ್ಣ ಈಗ ಹೀರೋ ಆಗಿ ಮಿಂಚುತ್ತಿದ್ದಾರೆ 'ಉಪಾಧ್ಯಕ್ಷ' ಸಿನಿಮಾ ಮೂಲಕ ಚಿಕ್ಕಣ್ಣಗೆ ಹೊಸ ಹುರುಪು ಸಿಕ್ಕಿದೆ. ಆದರೆ ಇದೇ ಸಮಯದಲ್ಲಿ ಚಿಕ್ಕಣ್ಣನ 'ಉಪಾಧ್ಯಕ್ಷ' ಸಿನಿಮಾಗೆ, ಮಹಾಮೋಸ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮಾತು ಕೇಳಿ ಈಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಫುಲ್ ಗರಂ ಆಗಿದ್ದಾರೆ. ಹಾಗಾದರೆ ಚಿಕ್ಕಣ್ಣನ ಸಿನಿಮಾಗೆ ಮೋಸ ಆಗಿದ್ದು ಹೇಗೆ? ಮುಂದೆ ಓದಿ.

2014ರಲ್ಲಿ ಚಿಕ್ಕಣ್ಣ & ಶರಣ್ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕೊಟ್ಟಿತ್ತು 'ಅಧ್ಯಕ್ಷ' ಸಿನಿಮಾ ಮೂಲಕ ಇಬ್ಬರೂ ಸಕ್ಸಸ್ ಪಡೆದಿದ್ದರು. ಅಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಸಕ್ಸಸ್ ಪಡೆದಿತ್ತು. 10 ವರ್ಷ ನಂತರ 'ಅಧ್ಯಕ್ಷ' ಸಿನಿಮಾ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿ ಅಬ್ಬರಿಸಿದೆ. ಈ ಬಾರಿ ಚಿಕ್ಕಣ್ಣ ಅವರನ್ನೇ ಹೀರೋ ಮಾಡಿ ಮಿಂಚುವಂತೆ ಮಾಡಲಾಗಿದೆ. ಆದ್ರೆ ಇದೇ ಸಮಯದಲ್ಲಿ ನಟ ಚಿಕ್ಕಣ್ಣ ಸಿನಿಮಾಗೆ ದೊಡ್ಡ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Allegedly Private Theater Is Cheating Chikkanna Starrer Movie Upadhyaksha By Not Giving Ticket

ಥಿಯೇಟರ್ ಮಾಲೀಕರಿಂದಲೇ ಮೋಸ?

ಹೌದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ತಿಳಿಸುವಂತೆ ಕೊಪ್ಪಳದ ಖಾಸಗಿ ಥಿಯೇಟರ್ ಮಾಲೀಕರ ಸಮೇತ ಕ್ಯಾಷಿಯರ್ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಕೊಪ್ಪಳದ ಖಾಸಗಿ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಟಿಕೆಟ್ ಕೊಡದೆ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾ ತೋರಿಸಲಾಗುತ್ತಿದೆ ಎನ್ನಲಾಗಿದೆ. ಹಣ ಪಡೆದರು ಕೂಡ ಥಿಯೇಟರ್ ಮಾಲೀಕರು ಹೀಗೆ ಪ್ರೇಕ್ಷಕರಿಗೆ ಟಿಕೆಟ್ ಕೊಡದೆ, ಬರೀ ದುಡ್ಡು ಪಡೆದು ಸಿನಿಮಾ ತೋರಿಸಿದ್ದಾರೆ. ಈ ಮೂಲಕ ನಿರ್ಮಾಪಕರಿಗೆ ಮೋಸ ಮಾಡಿ, ಚಿಕ್ಕಣ್ಣನ ಸಿನಿಮಾಗೂ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ನಿರ್ಮಾಪಕ ಉಮಾಪತಿ ಫುಲ್ ಗರಂ

ಇನ್ನು ಈ ವಿಡಿಯೋ ಬಗ್ಗೆ ನಿರ್ಮಾಪಕರಾದ ಉಮಾಪತಿ ಅವರು ಕೂಡ ರಿಯಾಕ್ಷನ್ ಅನ್ನ ಕೊಟ್ಟಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಧ್ವನಿ ಎನ್ನಲಾದ ಆಡಿಯೋ ಒಂದು ಹೈಲೈಟ್ ಆಗುತ್ತಿದೆ. ಈ ಆಡಿಯೋ ಪ್ರಕಾರ, ಥಿಯೇಟರ್ ಮಾಲೀಕರು ಇದೀಗ ಉಪಾಧ್ಯಕ್ಷ ಸಿನಿಮಾಗೆ ಮಾಡುತ್ತಿರುವ ದೋಖಾ ಬಗ್ಗೆ ಉಮಾಪತಿ ಗರಂ ಆಗಿದ್ದಾರೆ. ಅಲ್ಲದೆ ಇದೇ ರೀತಿ ಆದರೆ ನಿರ್ಮಾಪಕರು ಬದುಕುವುದು ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ. ಥಿಯೇಟರ್ ಮಾಲೀಕರ ವಿರುದ್ಧ ಗರಂ ಆಗಿದ್ದಾರೆ.

10 ಕೋಟಿ ರೂಪಾಯಿ ಕಲೆಕ್ಷನ್?

ಚಿಕ್ಕಣ್ಣ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಿಡುಗಡೆಯಾಗಿ 2 ವಾರಕ್ಕೆ ಸುಮಾರು 10 ಕೋಟಿ, ಕಲೆಕ್ಷನ್ ಮಾಡಿದೆ ಎನ್ನುವ ಮಾತು ಓಡಾಡುತ್ತಿದೆ. ಹೀಗೆ 10 ಕೋಟಿ ರೂಪಾಯಿ ಗಳಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಓಡಾಡುತ್ತಿದೆ. ಆದರೆ ಈ ಕುರಿತು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಉಪಾಧ್ಯಕ್ಷ ಚಿತ್ರ ಎಷ್ಟು ಗಳಿಸಿದೆ ಎಂಬುದರ ಬಗ್ಗೆ ಚರ್ಚೆ ಜೋರಿದೆ. ಈಗಲೂ ಈ ಸಿನಿಮಾ ಹತ್ತಾರು ಚಿತ್ರ ಮಂದಿರದಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇಷ್ಟೆಲ್ಲದರ ನಡುವೆ ಥಿಯೇಟರ್ ಮಾಲೀಕರ ವಿರುದ್ಧ, ಮೋಸ ಮಾಡಿದ ಆರೋಪ ಕೇಳಿಬಂದಿದೆ.

Allegedly Private Theater Is Cheating Chikkanna Starrer Movie Upadhyaksha By Not Giving Ticket

ನಟ ಶರಣ್ ಕೂಡ ಗೆಳೆಯನ ಸಿನಿಮಾಗೆ, ಅಂದರೆ ಚಿಕ್ಕಣ್ಣನ 'ಉಪಾಧ್ಯಕ್ಷ' ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಉಪಾಧ್ಯಕ್ಷ ಚಿತ್ರದಲ್ಲಿ ಶರಣ್ ಅವರು ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು, ಇಡೀ ಕ್ಲೈಮ್ಯಾಕ್ಸ್‌ಗೆ ದೊಡ್ಡ ತಿರುವು ನೀಡುತ್ತಾರೆ. ಈ ಪಾತ್ರಕ್ಕಾಗಿ, ಶರಣ್ ಒಂದು ರೂಪಾಯಿ ಕೂಡ ಪಡೆದಿಲ್ಲ ಎನ್ನುವುದು ಮತ್ತೊಂದು ವಿಶೇಷ. ಹೀಗೆ ಹಲವು ವಿಶೇಷತೆ ಹೊಂದಿರುವ ಚಿಕ್ಕಣ್ಣ ಹೀರೋ ಆಗಿರುವ ಮೊದಲ ಸಿನಿಮಾಗೆ ಕೊಪ್ಪಳದ ಥಿಯೇಟರ್ ಒಂದರಲ್ಲಿ ದೊಡ್ಡ ಮೋಸ ಆಗಿದೆ ಅನ್ನೋ ಆರೋಪ ಸಂಚಲನ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+