Aishwarya Rai: ಐಶ್ವರ್ಯ ರೈ - ಅಭಿಷೇಕ್ ಬಚ್ಚನ್ ಡಿವೋರ್ಸ್: ಶಾಕಿಂಗ್ ಹೇಳಿಕೆ ಕೊಟ್ಟ ಬಬ್ಚನ್!
Aishwarya Rai - Abhishek Bachchan Divorce: ಕನ್ನಡತಿ, ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ಅವರ ಬಾಳಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ವಿಚಾರವು ಕಳೆದ ಎರಡು ಮೂರು ವರ್ಷಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾ ನಟ - ನಟಿಯರು ಡಿವೋರ್ಸ್ ತೆಗೆದುಕೊಳ್ಳುತ್ತಿರುವುದರ ನಡುವೆ ಈ ವಿಚಾರವು ಪದೇ ಪದೇ ಚರ್ಚೆಯ ಮುನ್ನೆಲೆಗೆ ಬರುತ್ತಲ್ಲೇ ಇದೆ. ಇದೀಗ ಈ ವಿಚಾರವಾಗಿ ಕೊನೆಗೂ ಐಶ್ವರ್ಯ ಅವರ ಪತ್ನಿ ಹಾಗೂ ನಟ ಅಭಿಷೇಕ್ ಬಚ್ಚನ್ ಅವರು ಈ ಬಗ್ಗೆ ಶಾಕಿಂಗ್ ರಿಪ್ಲೈ ಕೊಟ್ಟಿದ್ದಾರೆ. ನಟಿ ಐಶ್ವರ್ಯ ಹಾಗೂ ನಟ ಅಭಿಷೇಕ್ ಬಚ್ಚನ್ ಅವರ ನಡುವೆ ವಿವಾಹವಾಗಿ ಅವರಿಗೆ ಮುದ್ದಾದ ಆರಾಧ್ಯ ಎನ್ನುವ ಮಗಳು ಇದ್ದಾಳೆ. ಆದರೆ ಕಳೆದ ಕೆಲವು ವರ್ಷಗಳಿಂದಲೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಅವರ ದೂರವಾಗಲಿದ್ದಾರೆ ಎನ್ನುವ ವಿಚಾರವು ಚರ್ಚೆಯಾಗುತ್ತಲ್ಲೇ ಇದೆ. ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಅಭಿಷೇಕ್ ಅವರು ರಿಯಾಕ್ಟ್ ಮಾಡಿದ್ದಾರೆ.
ನಟಿ ಐಶ್ವರ್ಯ ಅವರದ್ದು ಇಂದಿಗೂ ಮಾಸದ ಸಹಜ ಸೌಂದರ್ಯ ಮತ್ತು ಅದೇ ಅಭಿನಯ. ಚಿತ್ರರಂಗದಲ್ಲಿ ಮಿಂಚಿರುವ ಅವರು ವೈಯಕ್ತಿಕ ಜೀವನದಲ್ಲೂ ಸಂತೋಷವಾಗಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತು ಬಾಲಿವುಡ್‌ನಲ್ಲಿ ಆಗಾಗ ಕೇಳುವುದು ಇದೆ. ಅಲ್ಲದೇ ಐಶ್ವರ್ಯು ಅವರ ಅತ್ತೆ ಮತ್ತು ಮಾವ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಅವರೊಂದಿಗೆ ಹೊಂದಾಣಿಕೆಯಿಂದ ಸಾಗುತ್ತಿಲ್ಲ. ಬಿಗ್ ಬಿ ಕುಟುಂಬದಲ್ಲಿ ಅಸಮಾಧಾನ ಮನೆ ಮಾಡಿದೆ ಎನ್ನುವ ಗಾಳಿ ಸುದ್ದಿಗಳು ಸಹ ಕೇಳಿ ಬಂದಿದ್ದವು. ಈ ಎಲ್ಲಾ ಸುದ್ದಿಗಳಿಗೂ ಅಭಿಷೇಕ್ ಅವರು ಇದೀಗ ತಿಲಾಂಜಲಿ ಹಾಡಿದ್ದಾರೆ.

ಡಿವೋರ್ಸ್ ಸುದ್ದಿಗೆ ರಿಯಾಕ್ಟ್ ಮಾಡಿರುವ ಅಭಿಷೇಕ್ ಬಚ್ಚನ್ ಅವರು, ಸತ್ಯ ಈಗ ಯಾರಿಗೂ ಬೇಕಾಗಿಲ್ಲ ಎಂದಿದ್ದಾರೆ. ETimesಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನನ್ನ ಬಗ್ಗೆ ಏನದರೂ ಮಾತನಾಡಲಿ. ಅದರ ಬಗ್ಗೆ ನನಗೇನು ಬೇಸರವಿಲ್ಲ. ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ. ಆದರೆ ಈಗ ನನಗೂ ಒಂದು ಕುಟುಂಬವಿದೆ. ನನ್ನ ಕುಟುಂಬದ ಬಗ್ಗೆ ಮಾತನಾಡುವಾಗ ಬೇಸರವಾಗುತ್ತದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಮೂಲಕ ಅತ್ಯಂತ ಸ್ಪಷ್ಟವಾಗಿ ನಾವಿಬ್ಬರೂ ಒಂದಾಗಿ ಸಾಗಲಿದ್ದೇವೆ ಎಂದಿದ್ದಾರೆ.
ಈಗ ನಾನು ಈ ವಿಚಾರವಾಗಿ ಏನೇ ಮಾತನಾಡಿದರೂ ಅಥವಾ ಸ್ಪಷ್ಟೀಕರಣವನ್ನು ಕೊಟ್ಟರೂ ಅದರಿಂದ ಯಾವ ಪ್ರಯೋಜನವೂ ಇಲ್ಲ. ಸತ್ಯವನ್ನು ಮರೆ ಮಾಚಲಾಗುತ್ತಿದೆ. ಯಾಕೆಂದರೆ ಇಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಬಿಕರಿ ಆಗುತ್ತಿದೆ. ಒಳ್ಳೆಯ ಆಲೋಚನೆ & ಸುದ್ದಿಗಳಿಗಿಂತ ಜನರಿಗೆ ನಕಾರಾತ್ಮಕವಾದ ವಿಷಯಗಳೇ ಹೆಚ್ಚು ಇಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾರಿಂದಲೂ ನನ್ನ ಜೀವನ ನಡೆಯುತ್ತಿಲ್ಲ. ನಾನು ನನ್ನವರಿಗೆ ಮಾತ್ರ ಜವಾಬ್ದಾರಿಯುತನಾಗಿದ್ದೇನೆ. ನಮ್ಮ ಕುಟುಂಬದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ದೇವರಿಗೆ ಅವರೇ ಉತ್ತರವನ್ನು ಕೊಡಬೇಕು ಎಂದು ಅಭಿಷೇಕ್ ಅವರು ಹೇಳಿದ್ದಾರೆ.












Click it and Unblock the Notifications