ಪ್ರೀತಿ, ಸಂಬಂಧ ಬಲವಂತವಾಗಿ ಇರಬಾರದು: ನಟಿ ಅದಿತಿ ಪ್ರಭುದೇವ ಮಾತಿನ ಅರ್ಥವೇನು?
ಬೆಂಗಳೂರು, ಸೆಪ್ಟೆಂಬರ್ 06: ಸಂಬಂಧಗಳ ವಿಚಾರದಲ್ಲಿ ನಾನು ನಾನು ಯಾವ ಮೈಂಡ್‌ಸೆಟ್ ಅಲ್ಲಿ ಇದ್ದೀನಿ ಅಂದ್ರೆ, ನಾನು ನಿನ್ನ ಬದುಕಲ್ಲಿ ಬೇಕು ಎನ್ನುವ ಮನಸ್ಥಿತಿ ನಿನಗೆ ಇದೆ ಅಂದರೆ ನಾನು ಆ ಸಂಬಂಧದ ಬಗ್ಗೆ ಯೋಚಿಸುತ್ತೇನೆ. ಹಂಗಿದ್ದರೆ ನನಗೂ ನೀನು ಬೇಕು ಅಂತಾ. ಯಾವ ಸಂಬಂಧ ಆಗಲಿ, ಕೆಲಸ ಆಗಲಿ, ಇಷ್ಟ ಇಲ್ಲದೇ ನಾನು ಅದನ್ನು ಮಾಡಲು ಹೋಗಲ್ಲ ಎಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.
Rapid Rashmi ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಪ್ರೀತಿ ಮತ್ತು ಸಂಬಂಧವನ್ನು ಬಲವಂತವಾಗಿ ಇಟ್ಟುಕೊಳ್ಳಲಾಗುವುದಿಲ್ಲ. ಅದು ತಂದೆ-ತಾಯಿ ಆಗಿರಬಹುದು, ಗಂಡ ಆಗಿರಬಹುದು, ಅತ್ತೆ-ಮಾವ ಆಗಿರಬಹುದು, ಸಹೋದರ ಸಂಬಂಧ, ಗೆಳತನವಾಗರಬಹುದು , ನಾವು ಕೆಲಸ ಮಾಡುವ ಜಾಗದಲ್ಲಿ ಎಷ್ಟೊಂದು ಸಂಬಂಧಗಳಿರುತ್ತದೆ. ನಿನಗೆ ನನ್ನ ಮೇಲೆ ಗೌರವ ಇದೆ. ನಿನಗೆ ನಾನು ಬೇಕು, ನಿನಗೆ ನಾನು ಬೇಕು ಅಂದರೆ ಮಾತ್ರ ನಾನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ನನ್ನ ಆಲೋಚನೆ ಏನು ಅಂದರೆ ನಿನಗೆ ನಾನು ಬೇಕು ಎನ್ನುವ ಮನಸ್ಥಿತಿ ಇಲ್ಲದೇ ಇದ್ದಾಗ ಅದ್ಯಾವುದೇ ಸಂಬಂಧ ಇದ್ದರೂ ಬಿಟ್ಟು ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ನಿಮಗೆ ನೀವು ನೋವು ಮಾಡಿಕೊಳ್ಳಬೇಡಿ. ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವ ಕೆಲಸವನ್ನು ಮಾಡಬೇಡಿ. ಸಂಬಂಧಗಳನ್ನು ಇಟ್ಟುಕೊಳ್ಳಬೇಡಿ ಎನ್ನುವುದು ನನ್ನ ಒಂದು ಸಲಹೆ. ನಾನು ಇದನ್ನೇ ಫಾಲೋ ಮಾಡುತ್ತೇನೆ ಎಂದು ಹೇಳಿದರು.
ಸಂಬಂಧಗಳೊಂದಿಗೆ ಎಮೋಷನಲ್ ಆಗಿರುವುದು ಬೇರೆ, ಆ ಸಂಬಂಧಗಳು ಬೇಕು ಬೇಡ್ವಾ ಅಂತಾ ನೀವು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವುದೇ ಬೇರೆ. ಜೀವನದಲ್ಲಿ ಎರಡೂ ತರ ಇರಬೇಕು. ಎಮೋಷನಲ್ ಬೇರೆ, ಪ್ರಾಕ್ಟಿಕಲ್ ಬೇರೆ ಎನ್ನುವಷ್ಟು ಯೋಚನೆಯನ್ನು ನೀವೇ ಬೆಳೆಸಿಕೊಳ್ಳಬೇಕು. ಯಾರೂ ಅದನ್ನು ಹೇಳಿಕೊಡುವುದಿಲ್ಲ ಎಂದ ಅದಿತಿ ಪ್ರಭುದೇವ, ಸಂಪತ್ತಿಂದ ಸಂಬಂಧಗಳಾಗಬಾರದು, ಸಂಬಂಧಗಳೇ ಸಂಪತ್ತಾಗಬೇಕು ಎಂದಿದ್ದಾರೆ.

ಜೀವನದಲ್ಲಿ ಬಹಳ ಸಲ ಸೋಲು ಕಂಡಿದ್ದೇನೆ. ಬಹಳ ಸಲ ಕಿರುಚಾಡಿದ್ದೇನೆ. ಇನ್ನು ಎಷ್ಟು ವರ್ಷ ಹೀಗೆ..? ಮುಂದಿನ ಜೀವನ ಹೇಗೆ..? ಅಂತಾ ತುಂಬಾ ಸಲ ಯೋಚನೆ ಮಾಡಿದ್ದೇನೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರುವ ಹೆಣ್ಣು ಮಕ್ಕಳನ್ನು ಬೇರೆಯವರು ಬಿಡಿ. ನಮ್ಮನ್ನು ನಾವು ಹ್ಯಾಂಡಲ್ ಮಾಡುವುದು ತುಂಬಾ ಕಷ್ಟ. ಜೀವನ ಓಡುತ್ತಿರುತ್ತದೆ. ಆದರೆ ಹಗ್ಗ ಕಟ್ಟಿರುತ್ತಾರೆ. ಬರುವ ಮಾತುಗಳನ್ನು ಫೇಸ್ ಮಾಡಬೇಕು. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಳ್ಳಬೇಕು. ಅದನೆಲ್ಲಾ ಫೇಸ್ ಮಾಡುವ ಶಕ್ತಿ ಈಬ ಬಂದಿದೆ. ಆಗ ಈ ಧೈರ್ಯ ಇರಲಿಲ್ಲ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.












Click it and Unblock the Notifications