ವೈಷ್ಣವಿ ಗೌಡ ಎಂಗೇಜ್ ಬಳಿಕ ಕಾಣಿಸಿಕೊಂಡ ಮಾಯವಾಗಿದ್ದ ಮೊದಲ ಹುಡುಗ
ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ತುಂಬಾ ಅದ್ಧೂರಿಯಾಗಿ ನೆರವೇರಿದೆ. ಇದೀಗ ಮದುವೆ ದಿನಾಂಕವನ್ನು ನಿಗಧಿ ಮಾಡಲು ಅವರ ಕುಟುಂಬ ಚಿಂತನೆ ನಡೆಸಿದೆ. ಮದುವೆ ಇನ್ನಷ್ಟು ಅದ್ಧೂರಿಯಾಗಿರಲಿದೆ ಎಂದು ವೈಷ್ಣವಿ ಗೌಡ ಹಾಗೂ ಅವರ ತಾಯಿ ಭಾನು ರವಿಕುಮಾರ್ ಹೇಳಿಕೊಂಡಿದ್ದಾರೆ. ಸಂಗೀತಾ, ನೃತ್ಯ, ರುಚಿ ರುಚಿಯಾದ ಅಡುಗೆ, ಫನ್ ಎಲ್ಲವೂ ಇರಲಿದೆಯಂತೆ. ಇದೆಲ್ಲದರ ನಡುವೆ ವೈಷ್ಣವಿ ಗೌಡ ಮೊದಲು ಹುಡುಗ ಪ್ರತ್ಯಕ್ಷ ಆಗಿದ್ದಾರೆ.
ಸೀತಾರಾಮ ಧಾರಾವಾಹಿಯ ನಟಿ ವೈಷ್ಣವಿ ಗೌಡ ಕಳೆದ ವಾರ (ಏಪ್ರಿಲ್ 14) ಎಂಗೇಂಜ್‌ಮೆಂಟ್ ಮಾಡಿಕೊಂಡರು. ಅವರ ಭಾವಿ ಪತಿ ಅನುಕೂಲ್ ಮಿಶ್ರಾ ಇಂಡಿಯನ್ ಏರ್‌ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವೈಷ್ಣವಿ ಅತ್ತೆ ಕೂಡ ಸರ್ಕಾರಿ ಕೆಲಸದಲ್ಲಿ ಇರುವುದರಿಂದ ಮದುವೆ ತುಂಬಾ ಗ್ರ್ಯಾಂಡ್ ಆಗಿ ಮಾಡಲು ತಯಾರಿ ನಡೆಸಿದ್ದಾರೆ. ಇನ್ನೂ ವೈಷ್ಣವಿ ತಂದೆ ತಾಯಿಯ ಕನಸು ಕೂಡ ಇದೇ ಆಗಿದೆ. ಹೀಗಾಗಿ ಐದರಿಂದ ಆರು ದಿನಗಳ ಕಾಲ ಮದುವೆ ನೆರವೇರಬಹುದು ಅನ್ನೋದನ್ನ ನಿರೀಕ್ಷಿಸಲಾಗಿದೆ. ಇದೆಲ್ಲದರ ಬೆನ್ನಲ್ಲೆ ಈಗ ದಿಢೀರ್ ಅಂತ ವೈಷ್ಣವಿ ಅವರನ್ನು ಮೊದಲು ಮೆಚ್ಚಿಕೊಂಡಿದ್ದ ಹುಡುಗ ವಿದ್ಯಾಭರಣ್ ಪ್ರತ್ಯಕ್ಷ ಆಗಿದ್ದಾನೆ.

ವೈಷ್ಣವಿ ಗೌಡ ಪ್ರಸ್ತುತ ತುಂಬಾ ಜವಾಬ್ದಾರಿಯುತ ಹುಡುಗನನ್ನು ಮದುವೆ ಆಗುತ್ತಿದ್ದಾರೆ. ಅವರು ಬಯಸಿದಂತೆಯೇ ಗೌರವ ಇರುವ ಒಳ್ಳೆಯ ವ್ಯಕ್ತಿತ್ವ ಇರುವಂತಹ ಹುಡುಗನನ್ನು (ಅನುಕೂಲ್ ಮಿಶ್ರಾ) ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಇದಕ್ಕೂ ಮುಂಚೆ ವೈಷ್ಣವಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ವಿದ್ಯಾಭರಣ್ ವಿಚಾರ ಮುನ್ನೆಲೆಗೆ ಬಂದಿದೆ. ವಿದ್ಯಾಭರಣ್ ಈಗ ಎಲ್ಲಿದ್ದಾರೆ? ಏನ್ ಮಾಡ್ತಾಯಿದ್ದಾರೆ? ಅವರ ಕಥೆ ಏನಾಯ್ತು? ವೈಷ್ಣವಿ ಮದುವೆ ಬಗ್ಗೆ ಅವರ ಪ್ರತಿಕ್ರಿಯೆ ಏನು ಅನ್ನೋದು ಇದೀಗ ಚರ್ಚೆಯ ವಿಷಯವಾಗಿದೆ.
ಯಾವಾಗಲೂ ಪ್ರೀತಿ ಅಂತ ಬಂದಾಗ ಹುಡುಗಿಯರಿಗೆ ಹುಡುಗರಿಂದ ಮೋಸ ಆಯ್ತು ಅನ್ನೋ ಕಾಲ ಇತ್ತು. ಆದರೀಗ ಹುಡುಗಿಯರಿಂದ ಹುಡುಗರಿಗೆ ಮೋಸ ಆಯ್ತು ಅನ್ನೋ ಕಾಲ ಶುರುವಾಗಿದೆ. ಹುಡುಗಿಯರು ಮದುವೆ ಆಗಿ ಹೋಗುತ್ತಾರೆ. ಆದರೆ ಹುಡುಗರು ಪ್ರೀತಿಯನ್ನು ನೆನಪಿಸಿಕೊಂಡು ನೋವಿನಲ್ಲಿ ಕಾಲ ಕಳೆಯುತ್ತಾರೆ. ಹುಡುಗಿಯರು ಒಂದು ಸಂಬಂಧವನ್ನು ತುಂಬಾ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಹುಡುಗರು ಅಷ್ಟೊಂದು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಮರೆಯುವುದಿಲ್ಲ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿದ್ಯಾಭರಣ್ ವೈಷ್ಣವಿ ಗೌಡ ಅವರೊಂದಿಗೆ ಮೊದಲು ನಿಶ್ಚಿತಾರ್ಥ ಮಾಡಿಕೊಂಡ ಹುಡುಗ. ಇದು ಪಕ್ಕಾ ಅರೆಂಜ್ ಮ್ಯಾರೇಜ್ ಎಂದು ಹೇಳಿದರೂ ಕೂಡ ವೈಷ್ಣವಿ ಅವರಿಗೆ ಶೂಟಿಂಗ್ ಸೆಟ್‌ನಲ್ಲಿ ವಿದ್ಯಾಭರಣ್ ಪರಿಚಯ ಆಗಿತ್ತು ಅಂತಲೂ ಕೆಲವರು ಹೇಳುತ್ತಾರೆ. ಆದರೆ ವಿದ್ಯಾಭರಣ್ ಹೇಳುವಂತೆ, 'ವೈಷ್ಣವಿ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ನಮ್ಮ ಕುಟುಂಬಸ್ಥರು ವೈಷ್ಣವಿ ಕುಟುಂಬಸ್ಥರೊಂದಿಗೆ ಮಾತನಾಡಿ ಜಾತಕ ತೆಗೆದುಕೊಂಡರು. ಮೊದಲು ನಮ್ಮ ಕುಟುಂಬದವರು ವೈಷ್ಣವಿ ಅವರನ್ನು ಕೇಳಿದರು' ಎಂದು ಹೇಳಿದ್ದರು.
ಇಲ್ಲಿ ಮತ್ತೊಂದು ವಿಚಾರ ಅಂದರೆ ವಿದ್ಯಾಭರಣ್ ಹಾಗೂ ವೈಷ್ಣವಿ ಗೌಡ ಅವರ ಜಾತಕ ಕೂಡಿ ಬಂದಿತ್ತು. ಹೀಗಾಗಿ ಹೂವು ಮುಡಿಸುವ ಶಾಸ್ತ್ರ ಮಾಡಲಾಗಿತ್ತು. ಇನ್ನೇನು ಇಬ್ಬರು ಮದುವೆ ಆಗಬೇಕು ಅನ್ನುವಷ್ಟರಲ್ಲಿ ವಿದ್ಯಾಭರಣ್ ಸರಿಯಾಗಿಲ್ಲ ಅನ್ನೋ ವಿಚಾರ ಗೊತ್ತಾಯಿತು. ಬೇರೆ ಹುಡುಗಿಯರೊಂದಿಗೆ ಸಂಬಂಧದಲ್ಲಿ ಇದ್ದಾರೆ ಅನ್ನೋ ಆಡಿಯೋ ವೈರಲ್ ಆಯ್ತು. ಈ ಬೆಳವಣಿಗೆಗಳ ನಂತರ ವೈಷ್ಣವಿ ಇನ್‌ಸ್ಟಾಗ್ರಾಮ್‌ನಲ್ಲಿ ಇಲ್ಲಿಗೆ ನಾನು ಈ ಸಂಬಂಧವನ್ನು ಕೈಬಿಡುತ್ತಿದ್ದೇವೆ. ನನಗೂ ಈ ವ್ಯಕ್ತಿಗೂ ಸಂಬಂಧ ಇಲ್ಲ ಎಂದು ಪೋಸ್ಟ್ ಹಾಕಿದ್ದರು. ಈ ಘಟನೆಯಿಂದ ವೈಷ್ಣವಿ ತುಂಬಾ ಬೇಸರಗೊಂಡಿದ್ದರು.
ಈ ಬೇಸರದಿಂದ ಹೊರಗಡೆ ಬರಲು ವೈಷ್ಣವಿ ಮತ್ತೆ ಧಾರವಾಹಿ ಮಾಡಲು ಶುರು ಮಾಡಿದರು. 'ಸೀತಾರಾಮ' ಸೀರಿಯಲ್ ಮಾಡುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮರೆಯಲು ಆರಂಭಿಸಿದರು. ಇದಾದ ನಂತರ ಕಳೆದ ವಾರ ಅನುಕೂಲ್ ಮಿಶ್ರಾ ಅವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡರು. ಯಾರಿಗೂ ಗೊತ್ತಾಗದಂತೆ ವೈಷ್ಣವಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. ಜೊತೆಗೆ ವಿದ್ಯಾಭರಣ್ ವೈಷ್ಣವಿ ಗೌಡ ಅವರ ಹಳೆಯ ಫೋಟೋ, ಹಳೆಯ ವಿಡಿಯೋಗಳು ಈಗ ಮತ್ತೆ ಮುನ್ನಲೆಗೆ ಬರುತ್ತಿವೆ.
ಮೊದಲು ಫಿಕ್ಸ್ ಆಗಿದ್ದ ವಿದ್ಯಾಭರಣ್ ಅವರ ಬಗ್ಗೆ ಜನ ಹುಡುಕಲು ಶುರು ಮಾಡಿದ್ದಾರೆ. ವಿದ್ಯಾಭರಣ್ ಕೆಲ ಸಿನಿಮಾದಲ್ಲಿ ನಟಿಸಿದ್ದರು ಅಂತ ಹೇಳಲಾಗಿತ್ತು. ಆದರೆ ಆ ಸಿನಿಮಾ ಏನಾಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಈ ಘಟನೆ ನಂತರ ಅವರು ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಘಟನೆ ನಂತರ ತುಂಬಾ ಸೈಲೆಂಟ್ ಆಗಿದ್ದಾರೆ ವಿದ್ಯಾಭರಣ್. ಅಲ್ಲದೆ ವಿದ್ಯಾಭರಣ್ ದೇವರು ದೇವಸ್ಥಾನದ ಮೊರೆ ಹೋಗಿದ್ದಾರೆ. ಆ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮದುವೆ ವಿಚಾರ ಬಂದಾಗ ಒಂದು ಹುಡುಗಿ ಹಾಗೂ ಹುಡುಗ ಇಬ್ಬರಿಗೂ ನೋವಾಗುತ್ತದೆ. ಹುಡುಗಿ ವಿಚಾರ ಬಂದಾಗ ಎಲ್ಲರೂ ಕೂಡ ಧ್ವನಿ ಎತ್ತುತ್ತಾರೆ. ಆದರೆ ಹುಡುಗನ ಜೀವನ ಅಂದರೆ ಯಾರು ಯಾಕೆ ಧ್ವನಿ ಎತ್ತುವುದಿಲ್ಲ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಹುಡುಗಿಯರು ತುಂಬಾ ಬೇಗ ಎಲ್ಲವನ್ನೂ ಮರೆತು ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಹುಡುಗ ಹಾಗಲ್ಲ ಎಂದು ಜನ ಮಾತನಾಡಲು ಶುರು ಮಾಡಿದ್ದಾರೆ.
ಆದರೆ ಇಲ್ಲಿ ವೈಷ್ಣವಿ ಅವರದ್ದು ಏನೂ ತಪ್ಪಿಲ್ಲದೆ ಅವರು ತುಂಬಾ ನೋವನ್ನು ಅನುಭವಿಸಿದ್ದರು. ತುಂಬಾ ಬೇಸರ ಮಾಡಿಕೊಂಡಿದ್ದರು. ಇದೀಗ ಅವರ ಹೊಸ ಜೀವನ ಶುರುವಾಗಿದೆ. ಏನೇ ಆಗಲಿ ವೈಷ್ಣವಿ ಅವರ ಲೈಫ್ ಚೆನ್ನಾಗಿರಲಿ ಅನ್ನೋದನ್ನು ಎಲ್ಲರ ಆಶಯ.












Click it and Unblock the Notifications