ಹೀರೋಯಿನ್‌ಗಳು ಬೆಳ್ಳಗೆ ಕಾಣಲು ಇಂಜೆಕ್ಷನ್ ಬಳಸುತ್ತಾರಾ? ಶಾಕಿಂಗ್‌ ಸತ್ಯ ಹೇಳಿದ ನಟಿ

ಸಾಮಾನ್ಯವಾಗಿ ಸುಂದರವಾಗಿರುವವರೇ ಹೆಚ್ಚಾಗಿ ಹೀರೋಯಿನ್‌ಗಳಾಗುತ್ತಾರೆ, ಅಂದಗಾತಿಗಳಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತೆ ಎಂಬ ಮಾತಿದೆ. ಇದೇ ಕಾರಣಕ್ಕೆ ಕೆಲ ನಟಿಯರು ಏನೇನೋ ಟ್ರೀಟ್‌ಮೆಂಟ್‌ಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ಮುಖ್ಯವಾಗಿ ಬೆಳ್ಳಗೆ ಹೊಳೆಯಲು, ಸುಂದರವಾಗಿ ಕಾಣಲು ದುಬಾರಿ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ, ಇಂಜೆಕ್ಷನ್‌ಗಳನ್ನು ಬಳಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಿಜಕ್ಕೂ ನಟಿಯರು ಅಂದ ಹೆಚ್ಚಿಸಿಕೊಳ್ಳಲು ಏನೆಲ್ಲ ಮಾಡ್ತಾರೆ ಎಂಬ ಶಾಕಿಂಗ್‌ ಸತ್ಯಗಳನ್ನು ಖ್ಯಾತ ನಟಿ ತೃಪ್ತಿ ಸಾಹು (Tripti Sahu) ಇತ್ತೀಚಿನ ಸಂದರ್ಶನದಲ್ಲಿ ರಿವೀಲ್‌ ಮಾಡಿದ್ದಾರೆ.

ನಟಿ ತ್ರಿಪ್ತಿ ಸಾಹು ಅವರು "ಪಂಚಾಯತ್" ವೆಬ್ ಸಿರೀಸ್‌ನ ಖುಷ್ಬು ಪಾತ್ರದಿಂದ ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಟಿವಿ ಹಾಗೂ ಚಲನಚಿತ್ರ ಲೋಕದಲ್ಲಿ ಬೇರುಬಿಟ್ಟಿರುವ ಕರಾಳ ಉದ್ಯಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಖ್ಯವಾಗಿ ನಟಿಯರನ್ನು ಚರ್ಮ ಬೆಳ್ಳಗೆ ಹೊಳೆಯುವಂತೆ ಮಾಡುವ ದಂಧೆ ಬಗ್ಗೆಯೂ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿಯರು ಇದ್ದಕ್ಕಿದ್ದಂತೆ ಬಿಳಿಯಾಗಿ ಕಾಣಲು ಕಾರಣವೇನು? ಎಂಬುದನ್ನೂ ವಿವರಿಸಿದ್ದಾರೆ.

Actress Tripti Sahu Reveals Why Film Actresses Use Injections Look Fair Beautiful

"ಅನೇಕ ಜನರು ನನ್ನ ಚರ್ಮ ಬೆಳ್ಳಗಾಗಲು ಏನೇನೋ ಶಿಫಾರಸು ಮಾಡಿದರು. 2018ರಲ್ಲಿ ನನಗೆ ತಿಳಿದಿರುವ ಒಬ್ಬ ವ್ಯಕ್ತಿ, 'ಈ ಇಂಜೆಕ್ಷನ್ ಅನ್ನು ನನ್ನಿಂದ ತೆಗೆದುಕೊಳ್ಳಿ, ನಾನು ಇದನ್ನು 25 ಸಾವಿರ ಜನರಿಗೆ ನೀಡುತ್ತಿದ್ದೇನೆ. ನಿಮಗೆ ಇದರಿಂದ ಯಾವುದೇ ಮೋಸ ಆಗುವುದಿಲ್ಲ ಎಂದಿದ್ದರು. ನಾನು ಬಿಳಿಯಾಗಲು ಏಕೆ ಬಯಸುತ್ತೇನೆ? ನನಗೆ ಅದು ಬೇಡ ಎಂದಿದ್ದೆ. ಅದಕ್ಕೆ ಅವರು ಈಗ ಎಲ್ಲ ಹುಡುಗಿಯರು ಈ ಇಂಜೆಕ್ಷನ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಆದರೂ ನನಗೆ ಅದು ಬೇಡ ಎಂದು ನಿರಾಕರಿಸಿದ್ದೆ ಎಂದಿದ್ದಾರೆ.

ಮೂಗಿನ ಆಕಾರ ಬದಲಾಯಿಸಿಕೊಳ್ತಾರೆ!

ನಾನು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ಸಹ-ನಟಿಯೊಬ್ಬರು ಕೂಡ ವೈದ್ಯರು ಅವಳಿಗೆ ಚರ್ಮದ ಬಣ್ಣ ಬದಲಾಗುವ ಔಷಧಿ ನೀಡಿದ್ದಾರೆ ಎಂದು ಹೇಳಿದ್ದರು. ಟಿವಿ ಉದ್ಯಮದಲ್ಲಿಯೂ ಸಹ ಚೆನ್ನಾಗಿ ಕಾಣಿಸಿದರೆ ಮಾತ್ರ ಅವಕಾಶ ಸಿಗುತ್ತದೆ ಎಂಬ ಮನಸ್ಥಿತಿ ಜನರಿಗಿದೆ. ಆದ್ದರಿಂದ ಚಿಕಿತ್ಸೆಗೆ ಒಳಗಾಗುವ ಜನರು ಹೆಚ್ಚಾಗಿದ್ದಾರೆ. ಅಲ್ಲಿ ನಟಿಯರು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುತ್ತಾರೆ, ಮೂಗಿನ ಆಕಾರವನ್ನು ಬದಲಾಯಿಸುತ್ತಾರೆ ಎಂದು ನಟಿ ತೃಪ್ತಿ ಸಾಹು ರಿವೀಲ್‌ ಮಾಡಿದ್ದಾರೆ.

ಟಿವಿ ಸ್ಟಾರ್‌ಗಳು ತಮಗೆ ಹೆಚ್ಚಾಗಿ ಅವಕಾಶ ಸಿಗಲಿ ಎಂದು ಬಿಳಿ ಚರ್ಮ ಪಡೆಯಲು ಬಯಸುವುದು ಸಾಮಾನ್ಯ. ಇದಕ್ಕಾಗಿ ಕೆಲವರು ಇಂಜೆಕ್ಷನ್ ಹಾಗೂ ಇನ್ನಿತರೆ ಚಿಕಿತ್ಸೆಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ತ್ರಿಪ್ತಿ ಸಾಹು ಅವರ ಈ ಹೇಳಿಕೆ ಬಣ್ಣದ ಲೋಕದಲ್ಲಿ ಬೆಳ್ಳಗೆ ಕಾಣಲು ಅನುಸರಿಸುವ ಚಿಕಿತ್ಸೆಗಳ ಗಂಭೀರ ಸಮಸ್ಯೆ ಮತ್ತು ಒತ್ತಡವನ್ನು ಬಹಿರಂಗಪಡಿಸುತ್ತದೆ. ಜೊತೆಗೆ ಎಲ್ಲರೂ ತಮ್ಮ ನೈಜ ರೂಪವನ್ನೇ ಒಪ್ಪಿಕೊಳ್ಳಬೇಕು ಎಂಬ ಸಂದೇಶವನ್ನೂ ನಟಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+