15ನೇ ವಯಸ್ಸಿಗೆ ಡೇಟಿಂಗ್, ನನ್ನ ವೇಶ್ಯೆ ಅಂತ ಕರೀತಿದ್ರು: ಕನ್ನಡದಲ್ಲಿ ಮಿಂಚಿದ್ದ ನಟಿಗೆ ಆಗಿದ್ದೇನು?
ಕನ್ನಡ, ಹಿಂದಿ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಗುರುತಿಸಿಕೊಂಡಿರುವ ನಟಿ ಸುರ್ವೀನ್ ಚಾವ್ಲಾ (Surveen Chawla) ಇದೀಗ ತಮ್ಮ ಜೀವನದಲ್ಲಾದ ಶಾಕಿಂಗ್ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಅವರ ಪರಮೇಶ ಪಾನ್‌ವಾಲಾ ಸಿನಿಮಾದಲ್ಲಿ ಸುರ್ವೀನ್ ನಟಿಸಿದ್ದರು. ಬಳಿಕ ಸೇಕ್ರೆಡ್ ಗೇಮ್ಸ್ ಮತ್ತು ಹೇಟ್ ಸ್ಟೋರಿ-2ರಲ್ಲೂ ಇವರು ನಟನೆ ಎಲ್ಲರ ಗಮನ ಸೆಳೆದಿತ್ತು. ಇತ್ತೀಚಿನ ಸಂದರ್ಶನದಲ್ಲಿ ಇವರು ತಮ್ಮ ಜೀವನದ ಕೆಟ್ಟ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. 15ನೇ ವಯಸ್ಸಿನಲ್ಲೇ ತಾವು ಡೇಟಿಂಗ್ ಮಾಡಿದ್ದ ವಿಚಾರವನ್ನೂ ಹೇಳಿಕೊಂಡಿದ್ದಾರೆ.
ನಟಿ ಸುರ್ವೀನ್ ಚಾವ್ಲಾ ತಮ್ಮ ಹದಿಹರೆಯದ ವಯಸ್ಸಿನಲ್ಲೇ ಕೆಟ್ಟ ಅನುಭವಗಳನ್ನು ಎದುರಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಅದು ವೈಯಕ್ತಿಕ ಮತ್ತು ನೋವಿನ ಅಧ್ಯಾಯ ಎಂದಿರುವ ಅವರು, ತಮ್ಮ ಡೇಟಿಂಗ್ ವಿಚಾರವಾಗಿ ಸಮಾಜ ನೋಡಿದ ದೃಷ್ಟಿಯು ಹೇಗೆ ತಮ್ಮನ್ನು ಖಿನ್ನತೆಗೆ ತಳ್ಳಿತು ಎಂದು ಬಹಿರಂಗಪಡಿಸಿದ್ದಾರೆ. '15ನೇ ವಯಸ್ಸಿನಲ್ಲಿ ನಾನು ಒಬ್ಬನೊಂದಿಗೆ ಡೇಟಿಂಗ್ ಮಾಡಿದ್ದೆ. ಚಿಕ್ಕ ವಯಸ್ಸಿನಲ್ಲಿ ಸಂಬಂಧದಲ್ಲಿದ್ದಕ್ಕಾಗಿ ತುಂಬಾ ನಾಚಿಕೆಪಡುತ್ತಿದ್ದೆ. ಜನರು ಆ ವಿಚಾರದ ಬಗ್ಗೆ ಬಹಳಷ್ಟು ಮಾತನಾಡುತ್ತಿದ್ದರು. ನನ್ನ ಮೊದಲ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಆದಾಗ ನಾನು ಅವನ ಸ್ನೇಹಿತನೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ಆಗ ನಾನು ಇನ್ನಷ್ಟು ನಾಚಿಕೆಪಡುತ್ತಿದ್ದೆ. ಅವರು ನನ್ನನ್ನು ರಂ*ಡಿ, ಸೂ..., ಫ****ಗ್ ಎಂಬ ಕೆಟ್ಟ ಹೆಸರುಗಳಿಂದ ನನ್ನನ್ನು ಕರೆದರು. ಅದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ' ಎಂದು ನೆನೆದಿದ್ದಾರೆ.

'ಇದು ನನ್ನ ಮನಸ್ಸಿನ ಮೇಲೆ ತುಂಬಾ ನೋವುಂಟಾಗಿ ಸುಮಾರು ಒಂದು ವರ್ಷದವರೆಗೆ ಖಿನ್ನತೆಗೆ ಒಳಗಾಗಿದ್ದೆ. ನಾನು ಕೇವಲ 9ನೇ ತರಗತಿಯಲ್ಲಿದ್ದಾಗ ಸುಮಾರು ಒಂದು ವರ್ಷ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಇದರಿಂದಾಗಿ ನನಗೆ ಮೈಗ್ರೇನ್ ಬರಲು ಶುರುವಾಯಿತು. ಆದರೆ ಆ ಸಮಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲಿಲ್ಲ' ಎಂದಿದ್ದಾರೆ.
'ನನ್ನ ಹೆತ್ತವರಿಗೆ ಆ ಸಮಯದಲ್ಲಿ ಈ ಖಿನ್ನತೆಯ ಬಗ್ಗೆ ತಿಳಿದಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಾತ್ರ ಅವರು ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಕೊನೆಗೆ ನಾನು ನಮ್ಮ ಕುಟುಂಬ ಸಾಮಾನ್ಯ ವೈದ್ಯರ ಬಳಿಗೆ ಹೋದೆ. ಅವರು ನನಗೆ ಮೈಗ್ರೇನ್‌ಗೆ ಔಷಧಿಗಳನ್ನು ನೀಡಿದರು. ಆದರೆ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ, ಕೊನೆಗೆ ಅನುಭವ ಮತ್ತು ತಿಳುವಳಿಕೆಯೊಂದಿಗೆ ಮಾತ್ರವೇ ಅದರಿಂದ ಹೊರಬರುವುದು ಸಾಧ್ಯವಾಯಿತು' ಎಂದು ಸುರ್ವೀನ್ ಹೇಳಿದ್ದಾರೆ.
'ನಾವು ಏನನ್ನಾದರೂ ನಿಭಾಯಿಸಿಯೇ ಅದರಿಂದ ಹೊರಬರಬೇಕಾಗಿತ್ತು. ಆ ಪೀಳಿಗೆ ಅದನ್ನು ಹಾಗೆಯೇ ಕಲಿಸಿತು. ನಾನು ಸ್ತ್ರೀವಾದ, ಲೈಂಗಿಕ ಶಿಕ್ಷಣ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆಗಳಿಲ್ಲದ ಸಂಪ್ರದಾಯವಾದಿ ಮತ್ತು ಪಿತೃಪ್ರಧಾನ ಕುಟುಂಬದಲ್ಲಿ ಬೆಳೆದೆ. ಇದೇ ರೀತಿಯ ಮನೆಗಳಲ್ಲಿ ಬೆಳೆಯುತ್ತಿರುವ ಅನೇಕರಿಗೆ ನನ್ನ ಅನುಭವವು ಅಸಾಮಾನ್ಯವಲ್ಲ' ಎಂದೂ ಹೇಳಿಕೊಂಡಿದ್ದಾರೆ.
ಮದುವೆಯಾಗಿದ್ರೂ ಡೈರೆಕ್ಟರ್ ಕಿಸ್ ಮಾಡೋಕೆ ಬಂದ!
'ಮುಂಬೈನ ವೀರ ದೇಸಾಯಿ ರಸ್ತೆಯಲ್ಲಿ ನಡೆದ ಘಟನೆ ಅದು. ನಿರ್ದೇಶಕರ ಕಚೇರಿ ಕ್ಯಾಬಿನ್‌ನಲ್ಲಿ ನಡೆದ ಸಭೆಯ ನಂತರ, ಅವರು ನನ್ನನ್ನು ಬೀಳ್ಕೊಡಲು ಬಂದರು. ನನಗೆ ಆಗಷ್ಟೇ ಮದುವೆಯಾಗಿತ್ತು. ಅವರು ನನ್ನೊಂದಿಗೆ ವಿಷಯ ಹೇಗೆ ನಡೆಯುತ್ತಿದೆ? ನನ್ನ ಪತಿ ಏನು ಮಾಡುತ್ತಿದ್ದಾರೆ ಎಂದು ಕೇಳಿದರು. ಬಳಿಕ ನಾನು ಅವರಿಗೆ ಬಾಯ್ ಹೇಳಲು ಬಾಗಿಲ ಬಳಿ ಬಂದಾಗ ಆತ ನನಗೆ ಮುತ್ತು ಕೊಡಲು ಬಂದ, ಕೂಡಲೇ ಅವನನ್ನ ಹಿಂದಕ್ಕೆ ತಳ್ಳಿ ಗಾಬರಿಯಿಂದ ಹೊರಟುಹೋದೆ' ಎಂದು ಆ ಕೆಟ್ಟ ಅನುಭವ ಬಹಿರಂಗಪಡಿಸಿದ್ದಾರೆ.












Click it and Unblock the Notifications