Ranya Rao: ನಟಿ ರನ್ಯಾ ಕೇಸ್: ಶಾಕಿಂಗ್ ಮಾಹಿತಿ ಹಂಚಿಕೊಂಡ ಎಡಿಜಿಪಿ ಕೆ.ರಾಮಚಂದ್ರ ರಾವ್!
ಅಕ್ರಮವಾಗಿ ಕೆ.ಜೆ..ಕೆಜಿ ಚಿನ್ನ ಸಾಗಾಣಿಕೆ ಮಾಡಿ ಸಂಕಷ್ಟದಲ್ಲಿ ಸಿಲುಕಿರುವ ನಟಿ ರನ್ಯಾ ರಾವ್ ಅವರ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಬರುತ್ತಿದೆ. ರನ್ಯಾ ರಾವ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 4ಕ್ಕೆ 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದಿದ್ದರು. ಇದು ಭಾರೀ ಸಂಚಲನ ಸೃಷ್ಟಿ ಮಾಡಿದೆ. ಸದ್ಯ ಈ ಕೇಸ್‌ಗೆ ಸಂಬಂಧಿಸಿದಂತೆ ನಟಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದಾರೆ. ಇದೀಗ ಈ ಪ್ರಕರಣದ ಬಗ್ಗೆ ಅವರ ಮಲತಂದೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಹೌದು ನಟಿ ರನ್ಯಾ ರಾವ್ ಅವರು ಚಿನ್ನ ಕಳ್ಳಸಾಗಣಿಕೆಯಲ್ಲಿ ಸಿಕ್ಕಿ ಬೀಳುತ್ತಿದ್ದಂತೆಯೇ ಹೆಚ್ಚು ಚರ್ಚೆಯಾಗಿದ್ದು ಅವರ ತಂದೆ (ಮಲತಂದೆ) ಎಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಎನ್ನುವುದು. ಯಾಕೆಂದರೆ ಎಡಿಜಿಪಿ ಕೆ.ರಾಮಚಂದ್ರ ರಾವ್ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರು ಇದೆ. ಅಲ್ಲದೆ ಕೆರಿಯರ್‌ನಲ್ಲಿ ಸಿನ್ಸಿಯರ್ ಆಫೀಸ್ ಅಂತ ಅನಿಸಿಕೊಂಡವರು ಅವರು. ಇದೀಗ ಈ ಪ್ರಕರಣದಲ್ಲಿ ಅವರ ಹೆಸರೂ ಚರ್ಚೆಯಾಗುತ್ತಿದ್ದು. ಅವರು ಈ ಬಗ್ಗೆ ನೋವಿನಿಂದಲೇ ಮಾತನಾಡಿದ್ದಾರೆ. ಅಲ್ಲದೆ ಹಲವು ಶಾಕಿಂಗ್ ಮಾಹಿತಿಯನ್ನೂ ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ರನ್ಯಾ ಅರೆಸ್ಟ್‌ನ ಬಗ್ಗೆ ಮಾತನಾಡಿರುವ ಅವರು, ನನ್ನನ್ನು ನೊಂದಿರುವ ತಂದೆ ಅಂತ ಗುರುತಿಸಿ ಪ್ಲೀಸ್. ಇದು ನಾನು ಊಹೆಕೂಡ ಮಾಡಿಕೊಳ್ಳಲಾಗದ ಘಟನೆಯಾಗಿದೆ. ಈ ರೀತಿ ನಡೆಯುತ್ತೆ ಅಂತ ನಾನು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ ಅಂತ ಹೇಳಿದ್ದಾರೆ. ಈ ಘಟನೆಯಿಂದ ನನ್ನ ಹೃದಯ ಒಡೆದು ಹೋಗಿದೆ. ಪೋಷಕನಾಗಿ ಈ ವಿಷಯವನ್ನು ಅರಗಿಸಿಕೊಳ್ಳುವುದಕ್ಕೂ ನನ್ನಿಂದ ಆಗುತ್ತಿಲ್ಲ. ಆಘಾತದ ಬಗ್ಗೆ ಹೇಳುವುದಕ್ಕೆ ಪದಗಳೇ ಸಿಗ್ತಿಲ್ಲ. ರನ್ಯಾ ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮುಂದುವರಿದು ರನ್ಯಾ ಮತ್ತು ಜತಿನ್ ಹುಕ್ಕೇರಿ ಅವರು 2024ರಲ್ಲಿ ಮದುವೆ ಆಗಿದ್ದಾರೆ. ಮದುವೆಯಾದ ನಂತರ ಅವಳು ನಮ್ಮ ಮನೆಗೆ ಬರ್ತಿರಲಿಲ್ಲ. ಅವರಿಬ್ಬರು ವೈಯಕ್ತಿಕವಾಗಿ ಹಾಗೂ ಸ್ವಾತಂತ್ರ್ಯವಾಗಿ ಇರುತ್ತಿದ್ದರು. ನಾವು ಮೀಟ್ ಮಾಡಬೇಕು ಅಂತ ಅಂದುಕೊಂಡರೂ ಅವರು ಸಿಗುತ್ತಿರಲಿಲ್ಲ. ಹೀಗಾಗಿ, ನಮ್ಮ ಅವರ ನಡುವೆ ಹೇಳಿಕೊಳ್ಳುವಂತಹ ಸಂಬಂಧ ಇರಲಿಲ್ಲ. ಅಂತರ ಜಾಸ್ತಿನೇ ಆಗಿತ್ತು. ಆದರೆ, ಈಗ ನಡೆದಿರುವ ಬೆಳವಣಿಗೆಯಿಂದ ತುಂಬಾನೇ ಬೇಜಾರಾಗಿದೆ. ನಮ್ಮ ಕುಟುಂಬದವರಿಗೆ ಇದು ತುಂಬಾ ಕಷ್ಟದ ಸಮಯ. ಈ ಸವಾಲನ್ನು ಎದುರಿಸಲು ಧೈರ್ಯ ಸಾಲುತ್ತಿಲ್ಲ ಅಂತ ಹೇಳಿಕೊಂಡಿದ್ದಾರೆ.

ನಾನು ಪ್ರಮಾಣಿಕ: ಇನ್ನು ಮಗಳ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದ್ದಂತೆಯೇ ಅವರ ಮಲತಂದೆ ಮತ್ತೊಂದು ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇದ್ದು ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸಿದ್ದೀನಿ. ನನ್ನದು ಶಿಸ್ತಿನ ಜೀವನವಾಗಿದೆ. ಆದರೆ, ಈ ಕೇಸ್‌ನಿಂದ ನಮ್ಮ ಕುಟುಂಬಕ್ಕೇ ಕೆಟ್ಟ ಹೆಸರು ಬಂದಿದೆ ಎಂದು ಅವರು ಹೇಳಿದ್ದಾರೆ. ಕೊನೆಯದಾಗಿ ರನ್ಯಾ ಅವರ ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಲಿ ಅಂತಲೂ ಹೇಳಿದ್ದಾರೆ.
ಇನ್ನು ರನ್ಯಾ ಅವರ ಪ್ರಕರಣದಿಂದ ಅವರ ಕುಟುಂಬದವರಿಗೆ ತೀವ್ರ ಮುಜುಗರ ಹಾಗೂ ಸಂಕಷ್ಟ ಎದುರಾಗಿದೆ ಎಂದೇ ಹೇಳಲಾಗುತ್ತಿದೆ. ಖ್ಯಾತ ನಟಿಯಾಗಿರುವುದರಿಂದ ಈ ವಿಷಯದ ದೇಶದಾದ್ಯಂತ ಸುದ್ದಿಯಾಗಿದೆ. ಅಲ್ಲದೆ ಈ ಕೇಸ್‌ನಲ್ಲಿ ಅವರ ಕುಟುಂಬದವರ ಪಾತ್ರವೇನಾದರೂ ಇರಬಹುದೇ ಎನ್ನುವ ಬಗ್ಗೆಯೂ ಚರ್ಚೆಯಾಗುತ್ತಿದೆ.












Click it and Unblock the Notifications