Rakshita-Vijayalakshmi: ನಟಿ ರಕ್ಷಿತಾ, ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ಯಾಕೆ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ಪತಿ ದರ್ಶನ್ ನನ್ನು ಹೊರಗೆ ತರಲು ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟ ಮಾಡಿದ್ದಾಳೆ. ಗಂಡನಿಗಾಗಿ ವಿಜಯಲಕ್ಷ್ಮಿ ಕೋರ್ಟು-ಕಚೇರಿ, ಗುಡಿ-ಗೋಪುರ ಸುತ್ತಿದ್ರು. ಪತಿ ಪರ ನಿಂತ ವಿಜಯಲಕ್ಷ್ಮಿಯನ್ನು ದರ್ಶನ್ ಅಭಿಮಾನಿಗಳಷ್ಟೇ ಅಲ್ಲ ಸ್ಯಾಂಡಲ್ವುಡ್ ಮಂದಿ ಕೂಡ ಕೊಂಡಾಡಿದ್ದಾರೆ.
ಇನ್ನೂ ವಿಜಯಲಕ್ಷ್ಮಿ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಮೆಚ್ಚುಗೆಯ ಮಾತನಾಡಿದ್ದಾರೆ. ಈ ಹಿಂದೆ ನಾನು ಅವಳು ಫೋನ್ ನಲ್ಲಿ ಕಣ್ಣೀರು ಹಾಕಿದ್ದೇವೆ. ನನಗೆ ಒಳ್ಳೆಯ ಸ್ನೇಹಿತೆ ವಿಜಿ ಎಂದು ರಕ್ಷಿತಾ ಹೇಳಿದ್ದಾರೆ. ಇದೀಗ ತಮ್ಮನ ಮದುವೆ ಆಹ್ವಾನ ನೀಡಲು ಹೋದಾಗ ದರ್ಶನ್ ಬಂದ್ಮೆಲೆ ನನ್ನ ಮರೆತು ಹೋಗಿದ್ದಿಯಾ ನೀನು ಅಂತ ವಿಜಯಲಕ್ಷ್ಮಿ ಹೇಳಿದ್ಲು, ದರ್ಶನ್ ಗೆ ವಿಜಿ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ರಕ್ಷಿತಾ ಹೇಳಿದ್ದಾಳೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಟ್ರಾಂಗ್ ವುಮೆನ್. ನಾನು ವಿಜಯಲಕ್ಷ್ಮಿ ಮೂಲಕವೇ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೆ ಎಂದು ನಟಿ ರಕ್ಷಿತಾ ಹೇಳಿದ್ರು. ವಿಜಯಲಕ್ಷ್ಮಿ ಸ್ಟ್ರಾಂಗ್ ವುಮೆನ್, ಇಡೀ ಫ್ಯಾಮಿಲಿ ಅವಳ ಜೊತೆ ಇದೆ. ದರ್ಶನ್ ಕೂಡ ಒಳ್ಳೆಯ ಜನರ ಮಧ್ಯೆ ಇದ್ದಾರೆ ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದ್ರು.
ಈಗ ರಕ್ಷಿತಾ ಸಹೋದರ ರಾಣಾ ವಿವಾಹ ಆಗುತ್ತಿದ್ದಾರೆ. ಇದಕ್ಕೆ ದರ್ಶನ್ಗೂ ಆಹ್ವಾನ ಕೊಟ್ಟಿರೋದಾಗಿ ರಕ್ಷಿತಾ ಹೇಳಿದ್ದಾರೆ. ನಾನು ದರ್ಶನ್ ಹಾಗೂ ವಿಜಿ (ವಿಜಯಲಕ್ಷ್ಮೀ) ಇಬ್ಬರಿಗೂ ಆಮಂತ್ರಣ ಕೊಟ್ಟಿದ್ದೇನೆ. ಅವನು ಬರ್ತೀನಿ ಅಂದಿದ್ದಾನೆ. ಅವನು ಮದುವೆಗೆ ಬಂದೇ ಬರ್ತಾನೆ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ. ರಕ್ಷಿತಾ ತಮ್ಮ ರಾಣಾ ಮದುವೆಗೆ ನಟ ದರ್ಶನ್ ಆಗಮನಕ್ಕಾಗಿ ರಕ್ಷಿತಾ ಪ್ರೇಮ್ ಕುಟುಂಬ ಕಾಯುತ್ತಿದೆ. ದರ್ಶನ್ ಕೂಡ 'ಬಂದೇ ಬರ್ತೀನಿ' ಎಂದು ಹೇಳಿದ್ದಾರೆ.
ವಿಜಯಲಕ್ಷ್ಮೀ ಹಾಗೂ ದರ್ಶನ್, ತಮ್ಮ ಮಗ ವಿನೀಶ್ ಜೊತೆಗೆ 'ನನ್ನ ತಮ್ಮ'ನ ಮದುವೆಗೆ ಬಂದೇ ಬರ್ತಾರೆ ಅಂತ ರಕ್ಷಿತಾ ಪ್ರೇಮ್ ಕಾಯುತ್ತಿದ್ದಾರೆ. ಅವರು ಈ ಬಗ್ಗೆ ಹೇಳಿರುವ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಇನ್ನೂ ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ಅವರ ಕುಟುಂಬದ ಮಧ್ಯೆ ಉತ್ತಮ ಬಾಂಡಿಂಗ್ ಇದೆ. ಪರ್ಸನಲಿ ಕೂಡ ನಟಿ ರಕ್ಷಿತಾ ಹಾಗೂ ನಟ ದರ್ಶನ್ ಬೆಸ್ಟ್ ಫ್ರೆಂಡ್ಸ್. ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ ಸಂದರ್ಭದಲ್ಲಿ ರಕ್ಷಿರಾ ಹಾಗೂ ಪ್ರೇಮ್ ಅವರು ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ರು. ಅಲ್ಲದೇ ದರ್ಶನ್ ಜೈಲಿನಲ್ಲಿ ರಕ್ಷಿತಾ ಪ್ರೇಮ್ ಧೈರ್ಯ ತುಂಬಿದ್ರು.
ಬೇಲ್ ಪಡೆದು ಜೈಲಿನಿಂದ ಹೊರಗೆ ಬಂದಿರುವ ನಟ ದರ್ಶನ್ ನಿಧಾನವಾಗಿ ಹಳೆಯ ಜೀವನಕ್ಕೆ ಮರಳುತ್ತಿದ್ದಾರೆ. ಸ್ವಲ್ಪ ಕಾಲದಲ್ಲೇ ಮತ್ತೆ ಅರ್ಧಕ್ಕೇ ನಿಂತಿರುವ 'ಡೆವಿಲ್' ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾಗಿದ್ದ ವೇಳೆ ಕೂಡ ವಿಜಯಲಕ್ಷ್ಮಿ ಪತಿಯನ್ನು ಬಿಟ್ಟುಕೊಡಲಿಲ್ಲ. ಹಲವು ಸವಾಲುಗಳನ್ನು ಎದುರಿಸಿ ಜಾಮೀನು ಪಡೆದು ದರ್ಶನ್ ಅವರನ್ನ ಜೈಲಿಂದ ಹೊರ ತಂದ್ರು. ದರ್ಶನ್ ಹೊರಗೆ ಬರ್ತಿದ್ದಂತೆ ಇದು ವಿಜಯಲಕ್ಷ್ಮಿ ಹೋರಾಟಕ್ಕೆ ಸಿಕ್ಕ ಜಯ ಎಂದೇ ಅನೇಕರು ಹೇಳಿದ್ದಾರೆ.












Click it and Unblock the Notifications