ಮೀನು..ಕೊಬ್ಬರಿ ಎಣ್ಣೆ..ಕುಚಲಕ್ಕಿ: ಸ್ಯಾಂಡಲ್‌ವುಡ್‌ ಸ್ವೀಟಿಯ ಬ್ಯೂಟಿ ಸಿಕ್ರೇಟ್‌ ಏನು ಗೊತ್ತಾ..?

ಬೆಂಗಳೂರು, ಸೆಪ್ಟೆಂಬರ್‌ 09: ಸ್ಯಾಂಡಲ್‌ವುಡ್‌ನ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಅಕ್ಟೋಬರ್‌ 3ರಂದು ಸಿನಿಮಾ ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲೇ ರಾಧಿಕಾ ಕುಮಾರಸ್ವಾಮಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ರಾಧಿಕಾ ತಮ್ಮ ಸೌಂದರ್ಯ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಜೀ ಕನ್ನಡ ನ್ಯೂಸ್‌ ಜೊತೆಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಾಮಾನ್ಯವಾಗಿ ಕುಚಲಕ್ಕಿ ಹಾಗೂ ಮೀನು ಸಾರು ಹೆಚ್ಚಾಗಿ ತಿನ್ನುತ್ತಾರೆ. ನಾನು ಹಾಗೇ. ಮೀನು, ಕುಚಲಕ್ಕಿ ಅನ್ನ ದಿನ ನಿತ್ಯ ನಾವು ಅದೇ ತಿನ್ನುತ್ತೇವೆ. ಈ ರೀತಿ ವೃತ-ಪೂಜೆ ಇದ್ದಾಗ ಮಾತ್ರ ನಾವು ವೆಜ್‌ ಆಗಿರುತ್ತೇವೆ. ಬೇರೆ ದಿನಾ ಎಲ್ಲಾ ನಾನು ಮೀನೇ ತಿನ್ನುವುದು. ಮೀನು ಮಾತ್ರವಲ್ಲ ಕೊಬ್ಬರಿ ಎಣ್ಣೆ ಕೂಡ ಹೆಚ್ಚಾಗಿ ಬಳಸುತ್ತೇನೆ ಎಂದರು.

Actress Radhika Kumaraswamy Reveals Her Beauty Secret

ಇತ್ತೀಚಿಗೆ ತುಂಬಾ ಜನ ಅದನ್ನೇ ಹೇಳುತ್ತಾರೆ ಕೊಬ್ಬರಿ ಎಣ್ಣೆ ಚರ್ಮಕ್ಕೆ, ಕೂದಲಿಗೆ, ಮಸಾಜ್‌ಗೆ ಒಳ್ಳೆಯದು ಅಂತಾ. ನಾವು ಕೂಡ ಬಾಡಿ ಮಸಾಜ್‌, ಫೇಸ್‌ ಮಸಾಜ್‌, ಮೇಕಪ್‌ ತೆಗೆಯುವುದಕ್ಕೆ ಸೇರಿ ಪ್ರತಿಯೊಂದಕ್ಕೂ ಕೊಬ್ಬರಿ ಎಣ್ಣೆ ಬಳಸುತ್ತೇವೆ. ಇನ್ನು ಆದಷ್ಟು ನಮ್ಮ ಮನಸ್ಸು ಚೆನ್ನಾಗಿದ್ದರೆ ಮುಖ ಕೂಡ ಚೆನ್ನಾಗಿರುತ್ತದೆ ಎಂದು ಹೇಳಿದರು.

ಟೆನ್ಷನ್‌ ಜಾಸ್ತಿ ತೆಗೆದುಕೊಳ್ಳಲ್ಲ. ನಾವು ಏನು ದೇವರಲ್ಲ. ನಾವು ತಿಂದರೆ ದಪ್ಪಾ ಆಗುತ್ತೇವೆ. ನಮಗೂ ಮೊಡವೆಗಳು ಆಗುತ್ತದೆ. ಮುಖ ಡ್ಯಾಮೇಜ್‌ ಆಗುತ್ತದೆ. ಬೈರಾದೇವಿ ಶೂಟಿಂಗ್ ಸಮಯದಲ್ಲಿ ಆರು ತಿಂಗಳು ನನ್ನನ್ನು ನಾನೇ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಕೂದಲು ಕೂಡ ಹಾಳಾಗಿತ್ತು. ಮುಖನೂ ಹಾಳಾಗಿತ್ತು. ಅದನ್ನು ವಾಪಸ್‌ ಮೊದಲಿನ ರೀತಿ ತರಲು ಎಷ್ಟು ಕಷ್ಟ ಪಟ್ಟಿದ್ದೇನೆ ನನಗೇ ಗೊತ್ತು.

Actress Radhika Kumaraswamy Reveals Her Beauty Secret

ನಾವು ಏನೇ ಮೈಂಟೆನ್‌ ಮಾಡಬೇಕು ಅಂದರೂ ನಾವು ಅದಕ್ಕೆ ಸಮಯ ಕೊಡಬೇಕು. ಏನು ಕಾಳಜಿ ತೆಗೆದುಕೊಳ್ಳದೇ ಇರುತ್ತೇವೆ ಅಂದರೆ ಕಷ್ಟ. ಎಲ್ಲರ ಜೀವನದಲ್ಲಿ ಟೆನ್ಷನ್‌ ಇದ್ದೇ ಇರುತ್ತದೆ. ಆದರೆ ಎಷ್ಟು ಬೇಕೋ ಅಷ್ಟೇ ತೆಗೆದುಕೊಳ್ಳಬೇಕು. ಇತ್ತೀಚಿಗೆ ನಾನು ಯೋಗ ಶುರು ಮಾಡಿದ್ದೇನೆ. ಮತ್ತೆ ಡಾನ್ಸ್‌ ಮಾಡೇ ಮಾಡುತ್ತೇನೆ. ಏನೂ ಮಾಡದೇ ಮನೆಯಲ್ಲೇ ಇದ್ದರೆ ನಾನು ಸಹ ತುಂಬಾ ದಪ್ಪ ಆಗುತ್ತೇನೆ. ಈಗ ಕೂಡ ತೂಕ ಹೆಚ್ಚಾಗಿದ್ದೇನೆ ಎಂದರು.

ನನಗೆ ನನ್ನ ಅಮ್ಮನಿಂದ ತುಟಿಗಳು, ಅಪ್ಪನಿಂದ ಮೂಗು ಬಂದಿದೆ ಅಂತಾ ಮನೆಯಲ್ಲಿ ಹೇಳುತ್ತಿರುತ್ತಾರೆ. ಪ್ರತಿಯೊಂದು ಹೆಣ್ಣಲ್ಲೂ ಅವರೇ ಆದ ಬ್ಯೂಟಿ ಅಂತಾ ಇರುತ್ತದೆ. ನಾವದನ್ನು ಸ್ವಲ್ಪ ಕಾಳಜಿ ಮಾಡಿಕೊಂಡು ನಮಗೆ ಅಂತಾ ನಾವು ಸಮಯ ಕೊಡಬೇಕು. ಕೆಲಸಕ್ಕೆ ಹೋಗುವವರಿಗೆ ಚರ್ಮದ ಕಾಳಜಿ ಮಾಡಲಾಗುವುದಿಲ್ಲ. ನಮಗೆ ಅಂದರೆ ಸ್ವಲ್ಪ ಸಮಯ ಇರುತ್ತದೆ .ಹೀಗಾಗಿ ನಮಗೆ ಅಂತಾ ನಾವು ಸಮಯ ಕೊಟ್ಟು ಸೌಂದರ್ಯದ ಕಾಳಜಿ ಮಾಡಬಹುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+