ಮದುವೆಯಾದ ಮೇಲೆ ತೆಗೆದುಕೊಂಡ ಆ ನಿರ್ಧಾರದ ಮೇಲೆ ಬೇಸರ ಇದೆ-ರಾಧಿಕಾ ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 09: ಹಲವು ವರ್ಷಗಳು ಸಿನಿಮಾ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ ಈಗೀಗ ಒಂದೊಂದೇ ಸಿನಿಮಾದ ಮೂಲಕ ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಇದೀಗ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಅಕ್ಟೋಬರ್ 3ರಂದು ಸಿನಿಮಾ ತೆರೆ ಕಾಣುತ್ತಿದೆ.
ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಗಣೇಶ ಹಬ್ಬದ ಸಂಭ್ರಮದ ವೇಳೆಯೇ ರಾಧಿಕಾ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಗೌರಿ-ಗಣೇಶದ ಹಬ್ಬದ ಶುಭ ಘಳಿಗೆಯಲ್ಲೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಕೆಲವು ವರ್ಷಗಳ ಕಾಲ ತಾವು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದೇಕೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 'ಸಿನಿಮಾ ಮಾಡುವುದನ್ನು ನಾನು ಬೇಕಂತಲೇ ಕಡಿಮೆ ಮಾಡಿಲ್ಲ. ನಾನು ಯಾವಾಗಲೂ ಕೆಲಸ ಮಾಡುತ್ತಲೇ ಇರಬೇಕು ಎನ್ನುವುದು ನನಗೆ ಇತ್ತು. ಎಲ್ಲಾ ತರ ಪಾತ್ರಗಳನ್ನು ನಾನು ಮಾಡಬೇಕು. ವಯಸ್ಸಾದ ಮೇಲೆ ನನ್ನ ಎಲ್ಲಾ ಸಿನಿಮಾಗಳನ್ನು ನೋಡುತ್ತಾ ಕುಳಿತುಕೊಂಡು ಇರಬೇಕು ಎನ್ನುವ ಆಸೆ ನನಗೆ ಇತ್ತು. ಯಾಕೆಂದರೆ ಅವು ನನ್ನ ಜೀವನ ನೆನಪುಗಳು' ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
'ಮದುವೆಯಾದ ಮೇಲೆ ನಾನು ಸಂಪೂರ್ಣವಾಗಿ ಸಿನಿಮಾವನ್ನು ನಿಲ್ಲಿಸಿ ಬಿಟ್ಟೆ. ಜೀವನದಲ್ಲಿ ಅದೊಂದು ರಿಗ್ರೇಟ್ ಇದೆ. ಛೇ ನಾನು ಹೀಗೆ ಮಾಡಬಾರದಿತ್ತು. ಬ್ರೇಕ್ ತೆಗೆದುಕೊಳ್ಳಬಾರದಿತ್ತು ಅಂತಾ ಬೇಸರ ಇದೆ. ಆದರೆ ಇನ್ನು ಅದರ ಬಗ್ಗೆ ಯೋಚನೆ ಮಾಡಿ ಪ್ರಯೋಜನ ಇಲ್ಲ. ಹಳೆದ ಬಗ್ಗೆ ಯೋಚನೆ ಇಲ್ಲಾ ಆದರೆ ಮುಂದೆ ಏನು ಮಾಡಬೇಕು ಎನ್ನುವ ಕೆಲವು ಆಸೆಗಳು ಇದೆ' ಎಂದರು.
'ನನಗೆ ಇನ್ನೂ ಸ್ವಲ್ಪ ಸಮಯ ಇದೆ. ಆ ಸಮಯದೊಳಗೆ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟನೆ ಮಾಡಬೇಕು. ಪ್ರೋಡ್ಯೂಸ್ ಮಾಡಬೇಕು. ಒಳ್ಳೊಳ್ಳೆ ನಟರನ್ನು, ನಟಿಯರನ್ನು ನನ್ನ ಬ್ಯಾನರ್‌ನಿಂದ ಕನ್ನಡ ಚಿತ್ರರಂಗಕ್ಕೆ ಕೊಡಬೇಕು ಎನ್ನುವ ಆಸೆ ಇದೆ. ಆಗಿ ಹೋದ ಸಮಯದ ಬಗ್ಗೆ ಯೋಚನೆ ಮಾಡಿ ಪ್ರಯೋಜನ ಇಲ್ಲ ಎಂದು ಹೇಳಿದರು. ಇನ್ನು ತಮ್ಮ ಈಗಿನ ಲುಕ್ ಬಗ್ಗೆ ಮಾತನಾಡಿದ ಅವರು, ಜನ ನನ್ನನ್ನು ಮೇಕಪ್‌ನಲ್ಲಿ ಅಷ್ಟು ಇಷ್ಟಪಡಲ್ಲ..ಆದರೆ ನೇರವಾಗಿ ನೋಡಿದಾಗ ಇಷ್ಟಪಡುತ್ತಾರೆ' ಎಂದರು.












Click it and Unblock the Notifications