Actor Chandu: ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಗೆಳೆಯ ಚಂದು ಆತ್ಮಹತ್ಯೆ
ಧಾರವಾಗಿ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಮೃತಪಟ್ಟ ಕೆಲವೇ ದಿನಗಳಲ್ಲಿ ಅವರ ಸ್ನೇಹಿತ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದು, ತೆಲುಗು ಧಾರವಾಹಿ ರಂಗಕ್ಕೆ ದೊಡ್ಡ ಶಾಕ್ ಕೊಟ್ಟಿದೆ.
ನಟ ಚಂದು 'ತ್ರಿನಯನಿ' ಎನ್ನುವ ತೆಲುಗು ಧಾರವಾಹಿಯಲ್ಲಿ ಪವಿತ್ರಾ ಜಯರಾಮ್ ಜೊತೆ ನಟಿಸುತ್ತಿದ್ದರು. ಕಳೆದ ವಾರ ಪವಿತ್ರಾ ಅವರು ಅಪಘಾತದಲ್ಲಿ ಮೃತಪಟ್ಟಾಗ, ಕಾರಿನಲ್ಲಿ ಚಂದು ಕೂಡ ಇದ್ದರು. ಅವರ ಕೈಗೂ ಕೂಡ ಪೆಟ್ಟಾಗಿತ್ತು.

ಮಂಡ್ಯದಲ್ಲಿ ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಚಂದು, ತೀವ್ರ ನೋವಿನಲ್ಲಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರವಾಗಿ ನೊಂದಿದ್ದ ಅವರು, ಕೊನೆಗೆ ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಿದುಳಿನ ಕಾಯಿಲೆ ಇದೆ ಎಂದಿದ್ದ ನಟ
ಇವತ್ತು ಪವಿತ್ರಾ ಹುಟ್ಟುಹಬ್ಬ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಸಾವಿನ ನಂತರ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದು ತನಗೆ ಮಿದುಳಿನ ಕಾಯಿಲೆ ಇದ್ದು ಸಾಯುತ್ತೇನೆ ಎಂದು ಹೇಳಿದ್ದರು.
2015ರಲ್ಲಿ ಶಿಲ್ಪಾ ಎಂಬ ಯುವತಿಯನ್ನು ಚಂದು ವಿವಾಹವಾಗಿದ್ದರು. ಆದರೆ ಪವಿತ್ರಾ ಅವರಿಗೆ ಚಂದು ಹತ್ತಿರವಾಗಿದ್ದು, ಶಿಲ್ಪಾ ಅವರು ಬೇರೆಯಾಗಿದ್ದರು ಎಂದು ಹೇಳಲಾಗಿದೆ.
ಇಂದು ಪವಿತ್ರಾ ಹುಟ್ಟುಹಬ್ಬ. ನಿನ್ನನ್ನು ಮರೆಯಲಾರೆ, ನಮ್ಮ ಜಿಮ್ ಕೋಚ್ ಕರೆ ಮಾಡುತ್ತಿದ್ದಾರೆ. ಜಿಮ್ ಗೆ ಹೋಗೋಣ ಎಂದು ಪೋಸ್ಟ್ ಗಳನ್ನು ಹಾಕಿದ್ದ ಚಂದು ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪವಿತ್ರಾ ಮತ್ತು ಚಂದು ಪ್ರೀತಿಸುತ್ತಿದ್ದರು, ಮದುವೆಯಾಗಲು ಕೂಡ ಇಬ್ಬರೂ ನಿರ್ಧರಿಸಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಐದು ದಿನಗಳ ಹಿಂದೆ ಮಹಬೂಬ್‌ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದರು. ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದರು.
ಚಂದು ತ್ರಿನಯನಿ ಜೊತೆಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಂದುಗೆ ಪವಿತ್ರಾಳಿಗಿಂತ ಮೊದಲು ಶಿಲ್ಪಾಗೆ ಇಬ್ಬರು ಮಕ್ಕಳಿದ್ದಾರೆ. ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications